Thursday, 12th December 2024

ಚಿರತೆ ದಾಳಿಯಿಂದ ಮಗಳನ್ನು ರಕ್ಷಿಸಿದ ತಂದೆ

ತುಮಕೂರು :  ಆಟವಾಡುತ್ತಿದ್ದ ಚಿರತೆ ದಾಳಿಗೆ ಸಿಲುಕಿದ ಮಗಳನ್ನು ತಂದೆ ರಕ್ಷಿಸಿರುವ ಘಟನೆ  ತಾಲೂಕಿನ ಚಿಕ್ಕಬೆಳ್ಳಾವಿ ಗ್ರಾಮದಲ್ಲಿ  ನಡೆದಿದೆ.
ಲೇಖನ (7) ಚಿರತೆ ದಾಳಿಯಿಂದ ಪಾರಾದ ಬಾಲಕಿ. ಮನೆಯಂಗಳದಲ್ಲಿ ಆಟವಾಡುತ್ತಿದ್ದ ಬಾಲಕಿಯ ಮೇಲೆ ಚಿರತೆ ದಾಳಿ ನಡೆಸಿ ಹೊತ್ತೊಯ್ಯಲು ಯತ್ನಿಸುತ್ತಿದ್ದಂತೆ, ಗಮನಿಸಿದ ರಾಕೇಶ್ ಚಿರತೆಯನ್ನು ಬೆದರಿಸಿ ಓಡಿಸಿದ್ದಾರೆ.
ರಾಕೇಶ್ ಮತ್ತು ಹರ್ಷಿತಾ ದಂಪತಿಯ ಮಗಳು ಲೇಖನ ಮನೆ ಮುಂದೆ ಆಟವಾಡುತ್ತಿದ್ದಳು. ಈ ವೇಳೆ ಚಿರತೆ ದಿಢೀರ್ ಮೈಮೇಲೆರಗಿದೆ. ಸ್ಥಳದಲ್ಲೇ ಇದ್ದ ರಾಕೇಶ್ ಜೋರಾಗಿ ಕೂಗಿದ್ದು, ದೊಣ್ಣೆಯಿಂದ ಬೆದರಿಸಿದ್ದಾರೆ. ಆಗ ಚಿರತೆ ಮಗುವನ್ನು ಬಿಟ್ಟು ಸ್ಥಳದಿಂದ ಪರಾರಿಯಾಯಿತು.
ಬಾಲಕಿಯ  ಕಾಲಿಗೆ ಪರಚಿದ ಗಾಯಗಳಾಗಿದ್ದು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಪತ್ತೆ ಹಚ್ಚುವ ಕಾರ್ಯದಲ್ಲಿ ತೊಡಗಿದ್ದಾರೆ. ಬೆಳ್ಳಾವಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.