ಕಲಬುರಗಿ: ಜಿಲ್ಲೆಯ ಆಳಂದ ತಾಲೂಕಿನ ಶ್ರೀಕ್ಷೇತ್ರ ಜಿಡಗಾ ಸಿದ್ಧರಾಮ ಶಿವಯೋಗಿಗಳ ಪುಣ್ಯ ಭೂಮಿ ನೆಲದಲ್ಲಿ 38ನೇ ಗುರುವಂದನೆ ಸಮಾರಂಭ ದಲ್ಲಿ ಕನ್ನಡ ಚಲನಚಿತ್ರ ಕಾಂತಾರ ನಟ, ನಿರ್ದೇಶಕ ರಿಷಬ್ ಶೆಟ್ಟಿಗೆ ಮುಗಳ ಖೋಡ ಮಠದಿಂದ ಕೊಡ ಮಾಡುವ ರಾಷ್ಟ್ರೀಯ ಸಿದ್ದಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಜಿಡಗಾ ನವಕಲ್ಯಾಣ ಮಂಟಪದ ಆವರಣದಲ್ಲಿ ನಡೆದ ಗುರುವಂದನ ಸಮಾ ರಂಭಕ್ಕೆ ಭವ್ಯವಾದ ವೇದಿಕೆ ಸಿದ್ದಪಡಿಸಿ, ಮಠದ ಪೂಜ್ಯ ಷಡಕ್ಷರಿ ಶಿವಯೋಗಿ ಡಾ,ಮುರುಘರಾಜೇಂದ್ರ ಮಹಾಸ್ವಾಮಿಗಳು ಹಾಗೂ ಅಪಾರ ಪ್ರಮಾಣದ ಮಠಾಧೀಶರು ಪ್ರಶಸ್ತಿ ನೀಡಿ ಪ್ರದಾನ ಮಾಡಿದರು.
ನಂತರ ನಟ ರಿಷಬ್ ಶೆಟ್ಟಿ ಮಾತನಾಡಿ, ಈ ಮಹತ್ವದ ಘಳಿಗೆಯೂ ನಮ್ಮ ರಾಜ್ಯದ ಉತ್ಸವದ ಸಮಯವಾಗಿದೆ. ನನ್ನ ನಟನೆಯ ಕಾಂತಾರ ಸಿನೆಮಾಕ್ಕೆ ಸಿಗುತ್ತಿರುವ ಮೊದಲ ಪ್ರಶಸ್ತಿ ಸ್ವಾಮೀಜಿ ಅವರಿಂದ ಸಿಗುತ್ತಿರುವುದು ನಾನು ಮಾಡಿದ ಕೆಲಸಕ್ಕೆ ಸಾಥ೯ಕ ಸಿಕ್ಕಂತಾಗಿದೆ.ಈ ಪ್ರಶಸ್ತಿ ಮೂಲಕ ನನ್ನ ಜವಾಬ್ದಾರಿ ಹೆಚ್ಚಿಸಿದೆ ಎಂದರು.
ಈ ಪ್ರಶಸ್ತಿಯನ್ನು ನನಗೆ ಪ್ರೇರಣೆ ನೀಡಿದ ಪಂಜುರ್ಲಿ ದೈವರಿಗೆ, ಶ್ರೀ ಮಂಜು ನಾಥ್ ಸ್ವಾಮಿ, ಹಾಗೂ ಅಣ್ಣಪ್ಪಾ ಸ್ವಾಮಿ, ದೈವ ನರ್ತಕ ಕುಟುಂಬಕ್ಕೆ ಅರ್ಪಣೆ ಮಾಡಿದರು. ವಿಶೇಷವಾಗಿ ಈ ಪ್ರಶಸ್ತಿಯನು ಕನ್ನಡ ನಾಡಿನ ಮೇರು ನಟ ಡಾ.ಪುನೀತ್ ರಾಜ ಕುಮಾರ್ ಹಾಗೂ ಕನ್ನಡ ಜನತೆಗೆ ಅರ್ಪಿಸುತ್ತೇನೆ ಎಂದರು.
ಕರ್ನಾಟಕ ಭಾವನೆ, ನಂಬಿಕೆ ಒಳಗೊಂಡ ನಮ್ಮ ಮಣ್ಣಿನ ಕಥೆ ನಿಮಗೆಲ್ಲಾ ಇಷ್ಟವಾಗಿದ್ದು,ನನ್ನ ಹೆಮ್ಮೆಯ ವಿಷಯ. ನಾನು ಮೊದಲು ಬಣ್ಣ ಹಚ್ಚಿದ್ದು,ಯಕ್ಷಗಾನದ ಮೂಲಕವಾಗಿದೆ ಎಂದು ಹೇಳಿದ ಅವರು, ಎಲ್ಲರಿಗೂ ಚಿರರುಣಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಕಾಂತಾರ ಸಿನೆಮಾ ಡೈಲಾಗ್ ಹೇಳಿದ ಅವರು, “ನಿಮ್ಮ ಆಚರಣೆ, ಆಡಂಬರ ಹೀಗೆ ನಡದರೇ, ಬಂದು ಮಾಡಸತಿನಿ. ನಿನ್ನ ಅಪ್ಪನಿಗೆ ಹುಟ್ಟಿದರೆ ಬಂದ ಮಾಡಸಿ ನೋಡಾ” ಎಂಬ ಡೈಲಾಗ್ ಹೇಳಿ ಜನಸಮೂಹದ ಮನಗೆದ್ದರು.
ಪ್ರಶಸ್ತಿಯು ಒಂದು ಲಕ್ಷ ನಗದು ಹಾಗೂ ಎರಡು ತೋಲೆ ಚಿನ್ನ, ಮೊಮೆಂಟಮ್ ಹಾಗೂ ಫಲಕ ನೀಡಿ ಹಲವು ಮಠಾಧೀಶರ ಹಾಗೂ ರಾಜಕೀಯ ಧುರೀಣರು ಹಾಗೂ ಲಕ್ಷಾಂತರ ಅಭಿಮಾನಿಗಳ ನಡುವೆ ರಿಷಬ್ ಶೆಟ್ಟಿ ಗೆ ಗೌರವಿಸಲಾಯಿತು.
ನಿರೂಪಕಿ ಅನುಶ್ರೀ ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು. ಹಿನ್ನೆಲೆ ಗಾಯಕ ವಿಜಯ ಪ್ರಕಾಶ್ ತಂಡದಿಂದ ಸ್ವರ ಸಂಗೀತ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು.
ಹಾರಕೂಡದ ಚೆನ್ನವೀರ ಶಿವಾಚಾರ್ಯರು, ನಿರುಗುಡಿಯ ಶ್ರೀ ಹವಾ ಮಲ್ಲಿನಾಥ ಮಹಾರಾಜ್, ಮಾದನ ಹಿಪ್ಪರಗಾದ ಶ್ರೀ ಅಭಿನವ ಶಿವಲಿಂಗ ಸ್ವಾಮೀಜಿ ಸೇರಿದಂತೆ ಹತ್ತಕ್ಕೂ ಹೆಚ್ಚು ಮಠಾಧೀಶರು ಕಾರ್ಯಕ್ರಮ ದಿವ್ಯ ಸಾನಿಧ್ಯ ವಹಿಸಿದರು.
ಈ ಸಂದರ್ಭದಲ್ಲಿ ಕೇಂದ್ರ ಸಚಿವ ಭಗವಂತ ಖುಬಾ, ಶಾಸಕ ಸುಭಾಷ್ ಆರ್ ಗುತ್ತೇದಾರ್, ಮಾಜಿ ಶಾಸಕ ಬಿ.ಆರ್ ಪಾಟೀಲ್, ಅಫಜಲಪುರ ಶಾಸಕ ಎಂ.ವೈ ಪಾಟೀಲ್, ಬಿ.ಜಿ ಪಾಟೀಲ್, ದೊಡ್ಡಪ್ಪ ಗೌಡ ನರಿಬೋಳ, ಅಲ್ಲಮಪ್ರಭು ಪಾಟೀಲ್ ಸೇರಿದಂತೆ ಜಿಲ್ಲಾಧಿಕಾರಿ ಯಶವಂತ ಗುರುಕರ ಹಾಗೂ ಎಸ್.ಪಿ ಇಶಾ ಪಂತ್ ಇದ್ದರು.
*
ಕಾಶಿಯ ಅರ್ಚಕರೂ ಪರಮ ಪೂಜ್ಯ ಷ ಶ್ರೀ ಸಿದ್ದರಾಮೇಶ್ವರ ಮಹಾಸ್ವಾಮಿಗಳವರ ಜಾಗೃತ ಗದ್ದುಗೆಯತ್ತ ಮುಖ ಮಾಡಿ ದೂಪದಾರುತಿ ಹಾಗೂ ದೀಪದಿಂದ ತನಾರತೀಯನ್ನು ಸಮರ್ಪಣೆ ಮಾಡಿದರು. ಬಳಿಕ ಒಂಬತ್ತು ಜನ ಅರ್ಚಕರು ಶಂಖವನ್ನು ನುಡಿಸುವ ಮೂಲಕ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ನೀಡಿದರು.
*
ಕಾಂತಾರ ಚಲನಚಿತ್ರ ಇಡಿ ವಿಶ್ವಕ್ಕೆ ದೈವತ್ವದ ಶಕ್ತಿಯನ್ನು ಪರೀಚಯಿಸಿ ಕೊಟ್ಟ ಚಿತ್ರವಾಗಿದೆ. ಜೀಡಗಾ ಶ್ರೀಮಠ ಇಂದು ಸ್ವರ್ಗ ದಂತೆ ಕಾಣುತ್ತಿದೆ. ನನ್ನ ಜೀವನದಲ್ಲಿ ಯಾವುದಾದರು ಒಂದು ಸಿನಿಮಾ ನೊಡೀದರೆ ಅದು ಕಾಂತಾರ ಚಿತ್ರವಾಗಿದೆ.
ಷ.ಡಾ.ಮುರುಘರಾಜೇಂದ್ರ ಮಹಾಸ್ವಾಮಿಗಳು, ಶ್ರೀಗಳು, ಜಿಡಗಾ,ಮುಗಳಕೋಡ