Sunday, 15th December 2024

ಪ್ರತಿದಿನ ನರಕ ಯಾತನೆ ಅನುಭವಿಸುತ್ತಿರುವ ವಾಹನ ಸವಾರರು

ನಿದ್ದೆಗೆ ಜಾರಿದ ಅಧಿಕಾರಿಗಳು ಹಾಗೂ ಜನಪ್ರತಿಭೆಗಳು

ಪಾವಗಡ : ತಾಲೂಕಿನ ಬೊಮ್ಮತನಹಳ್ಳಿ ಮತ್ತು ಪಾವಗಡ ಮುಖ್ಯ ರಸ್ತೆ ಈ ಹಿಂದೆ ಮಳೆಯಿಂದ ಸಂಪೂರ್ಣವಾಗಿ ಹದ ಗಟ್ಟಿದ್ದು ಹಿನ್ನೆಲೆಯಲ್ಲಿ ಆ ಭಾಗದಲ್ಲಿ ಓಡಾಡುವ ವಾಹನಗಳಿಗೆ ಪ್ರತಿದಿನ ಕಂಟಕವಾಗಿ ಮಾರ್ಪಟ್ಟಿದೆ.

ಲಾರಿಗಳು ಬಸ್ಸುಗಳು ಆಂಬುಲೆನ್ಸ್ ಗಳು ಪ್ರತಿದಿನ ಸಿಕ್ಕಿ, ನರಕಾಯತ ನಾನು ಅನುಭವಿಸುತ್ತಿದ್ದರು ಸದಾ ಪಟ್ಟ ಅಧಿಕಾರಿಗಳು ನಿದ್ದೆಗೆ ಜಾರಿದ್ದಾರೆಯೇ ಎಂಬತಿದೆ ಎನ್ನುತ್ತಾರೆ ಆ ಭಾಗದ ಸ್ಥಳೀಯ ಜನರು.ಸ್ಥಳೀಯ ಬೊಮ್ಮತನಹಳ್ಳಿ ಗ್ರಾಮದ ಮಾಜಿ ಅಧ್ಯಕ್ಷ ರಾಮಾಂಜಿನಪ್ಪ ಮಾತನಾಡಿ ಕಳೆದ ಐದಾರು ತಿಂಗ ಳಿಂದ ಈ ರಸ್ತೆ ಸಂಪೂರ್ಣ ಹದಗಟ್ಟಿದ್ದು ಪ್ರತಿದಿನ ಓಡಾಡುವ ಜನರ ನರಕಾಯತನ ಅನುಭವಿಸುತ್ತಿದ್ದಾರೆ.

ಆದರೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಗಮನಕ್ಕೆ ತಂದರು ಯಾವುದೇ ಪ್ರಯೋಜನ ವಾಗಿಲ್ಲ. ಅಧಿಕಾರಿಗಳಿಗೆ ಇದರ ಬಗ್ಗೆ ದೂರು ಸಲ್ಲಿಸಿದರೆ ನಮ್ಮಲ್ಲಿ ಹಣದ ಕೊರತೆ ಇದೆ ಎಂಬುದಾಗಿ ಹೇಳುತ್ತಿದ್ದಾರೆ.ಪಿ ಡಬ್ಲ್ಯೂ ಡಿ ಇಲಾಖೆಯವರ ಬಳಿ ರಸ್ತೆ ದುರಸ್ತಿಗೆ ಹತ್ತು ಸಾವಿರ ಹಣವು ಇಲ್ಲವೇ.

ಈ ರಸ್ತೆ ಕುಮಟ ಕೊಡಮಡಗು ಹೋಗುವಂತಹ ಮುಖ್ಯ ರಸ್ತೆ ಇದಾಗಿದೆ ಇದೇ ರಸ್ತೆ ಯಲ್ಲಿ ಪ್ರತ್ಯಯ ಮಾರ್ಗವಾಗಿ ಜನಪ್ರತಿನಿಧಿಗಳು ಅಧಿಕಾರಿಗಳು ಓಡಾಡುತ್ತ ನೋಡಿಯೂ ಸಹ ಗಮನ ಹರಿಸದೆ ಇರೋದು ಸೂಚನೆಯ ಸಂಗತಿ ಎಂಬಂತಿದೆ.

ಪ್ರತಿದಿನ ಇಲ್ಲಿ ಸಿಲುಕಿರುವ ವಾಹನಗಳಿಗೆ ಸ್ಥಳೀಯ ಜನರು ಬಂದು ತೆರವುಗೊಳಿಸುವ ಕೆಲಸ ಪ್ರತಿದಿನ ಮಾಡುತ್ತಿದ್ದೇವೆ.ತಕ್ಷಣ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ವಾಹನಗಳಿಗೆ ಸೂಕ್ತ ರಸ್ತೆ ನಿರ್ಮಾಣ ಮಾಡಿ ಅನುಕೂಲ ಕಲ್ಪಿಸಬೇಕಾಗಿ ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.

ಈ ವೇಳೆ ರಂಗಪ್ಪ.ಗೋವಿಂದಪ್ಪ.ಮಲೇಶಪ್ಪ.ಇನ್ನೂ ಅನೇಕ ಮಂದಿ ಸ್ಥಳೀಯ ನಾಗರಿಕರು ಇದ್ದರು.