ಬೆಳಗಾವಿ: ರಸ್ತೆಬದಿ ನಿಂತಿದ್ದ ವಿದ್ಯಾರ್ಥಿಗಳ ಮೇಲೆ ಸರ್ಕಾರಿ ಬಸ್ ಹರಿದು, ಒಬ್ಬ ವಿದ್ಯಾರ್ಥಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ (Road Accident) ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಗಲಗಲಿಯಲ್ಲಿ ನಡೆದಿದೆ.
ಸುನೀಲ್ (10) ಮೃತ ಬಾಲಕ. ಟ್ಯೂಷನ್ ಮುಗಿಸಿಕೊಂಡು ಹೋಗುತ್ತಿದ್ದ ವಿದ್ಯಾರ್ಥಿಗಳು ಬದಿ ನಿಂತಿದ್ದರು. ಈ ವೇಳೆ ವೇಗವಾಗಿ ಬಂದ ಸಾರಿಗೆ ಬಸ್ ವಿದ್ಯಾರ್ಥಿಗಳ ಮೇಲೆ ಹರಿದಿದೆ. ಇದರಿಂದ ಬಾಲಕ ಸುನೀಲ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಹಲವರಿಗೆ ಗಾಯಗಳಾಗಿವೆ.
ಬಸ್ ಅಥಣಿಯಿಂದ ಕಾರವಾರಕ್ಕೆ ಹೋಗುತ್ತಿದ್ದಾಗ ಅಪಘಾತ ನಡೆದಿದೆ. ಈ ವೇಳೆ ಬಸ್ ಅನ್ನು ಅಡ್ಡಗಟ್ಟಿದ ಸ್ಥಳೀಯರು, ಚಾಲಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮಕ್ಕಳು ನಿಂತಿರುವುದು ಗಮನಿಸಿದ್ದರೂ ನಿರ್ಲಕ್ಷ್ಯದ ಚಾಲನೆಯಿಂದ ದುರಂತ ಸಂಭವಿಸಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ | Physical Abuse: ಜನನಿಬಿಡ ರಸ್ತೆ ಸಮೀಪವೇ ಮಹಿಳೆ ಮೇಲೆ ಅತ್ಯಾಚಾರ- ಕಿಡಿಗೇಡಿ ಎಸ್ಕೇಪ್; ವಿಡಿಯೋ ರೆಕಾರ್ಡ್ ಮಾಡಿದವ ಅರೆಸ್ಟ್
ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ; ನಾಲ್ವರಿಗೆ ಗಂಭೀರ ಗಾಯ
ಧಾರವಾಡ: ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು (Gas Cylinder Blast) ನಾಲ್ವರು ಗಂಭೀರವಾಗಿ ಗಾಯಗೊಂಡಿರುವುದು ಜಿಲ್ಲೆಯ ಕುಂದಗೋಳ ತಾಲೂಕಿನ ರೊಟ್ಟಿಗವಾಡದಲ್ಲಿ ನಡೆದಿದೆ.
ಸಿದ್ದಲಿಂಗಯ್ಯ ಹಿರೇಮಠ, ಪತ್ನಿ ವಿಶಾಲಾ ಹಿರೇಮಠ, ಪುತ್ರ ಶ್ರೀಪಾದಯ್ಯ, ಸಿದ್ದಲಿಂಗಯ್ಯ ತಮ್ಮನ ಪತ್ನಿ ನಿರ್ಮಲಾ ಹಿರೇಮಠ ಗಾಯಾಳುಗಳು. ಇವರನ್ನು ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಂದಗೋಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮಹಿಳೆಯರೇ, ಅಪರಿಚಿತ ವಿಡಿಯೋ ಕಾಲ್ ಉತ್ತರಿಸಬೇಡಿ! ಪೊಲೀಸರ ಹೆಸರಿನಲ್ಲಿ ನಗ್ನ ದೇಹ ಚಿತ್ರೀಕರಿಸಿಕೊಂಡು ಬ್ಲ್ಯಾಕ್‌ಮೇಲ್
ಬೆಳಗಾವಿ: ಪೊಲೀಸರು ಕಾಲ್ ಮಾಡುತ್ತಿದ್ದೇವೆ ಎಂದು ಹೇಳಿಕೊಂಡು ವಿಡಿಯೋ ಕಾಲ್ (video call) ಮಾಡಿ, ಮಹಿಳೆಯರ ನಗ್ನ ದೇಹವನ್ನು ರೆಕಾರ್ಡ್ ಮಾಡಿಕೊಂಡು ಹಣಕ್ಕಾಗಿ ಬ್ಲ್ಯಾಕ್ ಮೇಲ್ (Blackmail) ಮಾಡಿರುವ ಬಗ್ಗೆ ಬೆಳಗಾವಿ ಸೈಬರ್ ಎಕನಾಮಿಕ್ಸ್ ಮತ್ತು ನಾರ್ಕೋಟಿಕ್ಸ್ (CEN) ಠಾಣೆಯಲ್ಲಿ ದೂರು (Cyber Crime news) ದಾಖಲಾಗಿದೆ. ಬೆಳಗಾವಿಯಲ್ಲಿ (Belagavi news) ಇಂಥ ಒಟ್ಟು ಮೂರು ಪ್ರಕರಣಗಳು ನಡೆದಿವೆ.
ಪ್ರಕರಣ ಸಂಬಂಧ ಬೆಳಗಾವಿ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾಹಿತಿ ನೀಡಿದ್ದಾರೆ. ಇದೊಂದು ಹೊಸ ಮಾದರಿಯ ಸೈಬರ್ ಕ್ರೈಮ್ ಬೆಳಕಿಗೆ ಬಂದಿದೆ. ಮಹಿಳೆಯರಿಗೆ ಮೇಲ್, ಮೆಸೇಜ್, ಕರೆ ಅಥವಾ ವಾಟ್ಸಪ್ ಮೂಲಕ ಒಂದು ಸಂದೇಶ ಬರುತ್ತದೆ. ಮುಂಬೈ ಕ್ರೈಂ ಬ್ರ್ಯಾಂಚ್, ಗುಪ್ತಚರ ಇಲಾಖೆಯಿಂದ ಕರೆ ಮಾಡುತ್ತಿದ್ದೇವೆ ಅಂತ ಹೇಳುತ್ತಾರೆ. ಒಂದು ಅಪರಾಧ ಪ್ರಕರಣದಲ್ಲಿ ನಿಮ್ಮ ಹೆಸರು ತಳಕು ಹಾಕಿಕೊಂಡಿದೆ ಎಂದು ಹೆದರಿಸುತ್ತಾರೆ. ಹೀಗಾಗಿ, ನೀವು ನಮ್ಮ ಹತ್ತಿರ ಬಂದು, ಯಾಕೆ ಈ ರೀತಿ ಮಾಡಿದೀರಿ ಅಂತ ವಿವರಣೆ ನೀಡಬೇಕೆಂದು ಹೆದರಿಸುತ್ತಾರೆ.
ನಾವೀಗ ನಿಮ್ಮನ್ನು ವಿಚಾರಣೆ ಮಾಡಬೇಕು ಕ್ಯಾಮೆರಾ ಮುಂದೆ ಬನ್ನಿ ಎಂದು ಹೇಳುತ್ತಾರೆ. ನಿಮ್ಮ ಅಪರಾಧದ ಬಗ್ಗೆ ನಿಮ್ಮ ಕುಟುಂಬದವರಿಗೆ ಹೇಳುತ್ತೇವೆ ಅಂತ ಹೆದರಿಸುತ್ತಾರೆ. ಹೇಗೆ ಅಪರಾಧ ಕೃತ್ಯ ಎಸಗಿದ್ದೀರಿ ಅಂತ ನಿಮ್ಮ ದೇಹವನ್ನು ಪರಿಶೀಲಿಸಬೇಕು, ಹೀಗಾಗಿ ಬಟ್ಟೆ ಬಿಚ್ಚಿ ಅಂತ ಹೇಳುತ್ತಾರೆ. ನಂತರ, ಮಹಿಳೆಯರು ನಗ್ನವಾಗಿ ಕ್ಯಾಮೆರಾ ಮುಂದೆ ಬಂದಾಗ, ಸ್ಕ್ರೀನ್ ರೆಕಾರ್ಡ್ ಮಾಡಿಕೊಳ್ಳುತ್ತಾರೆ. ನಂತರ, ಈ ವಿಡಿಯೋ ಇಟ್ಟುಕೊಂಡು ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡುತ್ತಾರೆ. ಈ ರೀತಿ ಸುಳ್ಳು ಹೇಳಿ, ಮಹಿಳೆಯರನ್ನು ನಂಬಿಸಿ ಹಣ ದೋಚುವ ಪ್ರಕರಣ ಬೆಳಕಿಗೆ ಬಂದಿವೆ.
ಈ ಸುದ್ದಿ ಓದಿ: Actor Darshan: ರೇಣುಕಾಸ್ವಾಮಿ ಕೊಲೆ ಕೇಸ್; ದರ್ಶನ್ ಆ್ಯಂಡ್ ಗ್ಯಾಂಗ್ ವಿರುದ್ಧ ಸಲ್ಲಿಕೆಯಾದ ಚಾರ್ಜ್ ಶೀಟ್‌ನಲ್ಲಿನ ಪ್ರಮುಖ ಅಂಶಗಳೇನು?
ಈ ರೀತಿ ಮೂರು ಪ್ರಕರಣಗಳು ಸಿಇಎನ್ ಠಾಣೆಯಲ್ಲಿ ದೂರು ದಾಖಲಾಗಿವೆ. ಒಂದು ವೇಳೆ ಈ ರೀತಿ ಕರೆಗಳು ಬಂದರೆ ಕೂಡಲೇ ಪೊಲೀಸರ ಗಮನಕ್ಕೆ ತನ್ನಿ ಎಂದು ಮನವಿ ಮಾಡಿದ್ದಾರೆ.