ಕೊಲ್ಹಾರ: ವಿವಿದೆಡೆ ಬೈಕ್ ಕಳ್ಳತನ ಮಾಡುತ್ತಿದ್ದ ಮೂವರು ಕಳ್ಳರನ್ನು ಬಂಧಿಸಿರುವ ಕೊಲ್ಹಾರ ಪೊಲೀಸರು ಒಟ್ಟು ೬ ಬೈಕ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ರಾತ್ರಿ ಗಸ್ತು ತಿರುಗುತ್ತಿದ್ದ ಪೊಲೀಸರು ರಾಣಿಚನ್ನಮ್ಮ ವಸತಿ ಶಾಲೆಯ ಕ್ರಾಸ್ ಹತ್ತಿರ ಸಂಶಯಾಸ್ಪದವಾಗಿ ಬೈಕ್ ಮೇಲೆ ತಿರುಗುತ್ತಿದ್ದ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಿಸಲಾಗಿ ವಿವಿದೆಡೆ ೬ ಬೈಕ್ ಗಳನ್ನು ಕಳುವು ಮಾಡಿರುವುದಾಗಿ ಕಳ್ಳರು ಒಪ್ಪಿ ಕೊಂಡಿದ್ದಾರೆ.
ಆರೋಪಿಗಳಾದ ಬಾಗಲಕೋಟೆಯ ಜಡ್ರಾಮನಕುಂಟೆ ನಿವಾಸಿ, ಸೈಯ್ಯದರಸೂಲ್ ಅಲ್ಲಾಭಕ್ಷ ಅಹಮದಿ(೧೯), ವಿಜಯಪುರ ಖತಿಜಾಪೂರ ನಿವಾಸಿ ರವಿ ಸಂಗಮೇಶ ಬಾಡಗಂಡಿ(೨೨), ಕೊಲ್ಹಾರ ಪಟ್ಟಣದ ಸಂಗಪ್ಪ ಶೇಖಪ್ಪ ಹಂಚಿನಾಳ(೨೦) ಬಂಧಿತ
ಬಂಧಿತ ಆರೋಪಿಗಳಾಗಿದ್ದಾರೆ.
ಕಾರ್ಯಾಚರಣೆಯಲ್ಲಿ ಪಿಎಸ್ಐ ಪ್ರೀತಮ್ ನಾಯಕ್, ಇಮ್ರಾನ್ ಪೆಂಡಾರಿ, ಸಿದ್ದು ಅಂಗಡಿ, ಶೇಖರ್ ಲಮಾಣಿ, ಎಸ್ ಬಿ ಯರಗಟ್ಟಿ, ಎಂ ಎಸ್ ಬಿರಾದಾರ, ಶ್ರೀನಿವಾಸ್ ಭಾಗವಹಿಸಿದ್ದರು.