Sunday, 15th December 2024

ರೌಡಿ ಶೀಟರ್ ಹಂದಿ ಅಣ್ಣಿ ಹತ್ಯೆ

ಶಿವಮೊಗ್ಗ: ನಗರದಲ್ಲಿ ಬೆಳ್ಳಂಬೆಳಗ್ಗೆ ರೌಡಿ ಶೀಟರ್ ಹಂದಿ ಅಣ್ಣಿ ಹತ್ಯೆಯಾಗಿದೆ.

ನಗರದ ವಿನೋಬನಗರ ಚೌಕಿಯಲ್ಲಿ ಪೊಲೀಸ್ ಠಾಣೆ ಎದುರು ಘಟನೆ ನಡೆದಿದ್ದು, ಸ್ಥಳೀಯರನ್ನು ಬೆಚ್ಚಿ ಬೀಳಿಸಿದೆ.

ಲವ ಕುಶ ಜೋಡಿ ಕೊಲೆಯ ಅನಂತರ ಬೆಳಕಿಗೆ ಬಂದ ಹಂದಿ ಅಣ್ಣಿ ಪೊಲೀಸ್ ಠಾಣೆ ಎದುರು ದಾರುಣವಾಗಿ ಕೊಲೆಯಾಗಿ ಹೋಗಿದ್ದಾನೆ. ಮಾರ್ಕೆಟ್ ಗಿರಿ ಕೊಲೆಯ ಆನಂತರದಲ್ಲಿ ಇದು ನಗರವನ್ನು ತಲ್ಲಣಗೊಳಿಸಿದೆ.

ವಿನೋಬನಗರ್ ಚೌಕಿ ವೃತ್ತದ ಮಧ್ಯ ಭಾಗದಲ್ಲಿ ಸಾರ್ವಜನಿಕರ ಮುಂದೆಯೇ ಕಾರಿನಲ್ಲಿ ಬಂದ ನಾಲ್ವರು ಹಂದಿ ಅನ್ನಿಯನ್ನು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಶಿವಮೊಗ್ಗದ ಆಗಿನ ರೌಡಿ ಲವಕುಶ ಹತ್ಯೆ ಪ್ರಕರಣದಲ್ಲಿ ಹಂದಿ ಅಣ್ಣಿ ಪ್ರಮುಖ ಆರೋಪಿಯಾಗಿದ್ದನು. ಎಂಟಕ್ಕೂ ಹೆಚ್ಚು ಪ್ರಕರಣದಲ್ಲಿ ಈತ ಶಾಮೀಲಾಗಿದ್ದಾನೆ.