ತಿಪಟೂರು : ನಗರದಲ್ಲಿ ವಿಜಯ ದಶಮಿ ದಸರಾ ಪ್ರಯುಕ್ತ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ಪಥಸಂಚಲನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ತಿಪಟೂರಿನ ಗ್ರಾಮದೇವತೆ ಕೆಂಪಮ್ಮ ದೇವಿ ದೇವಾಸ್ಥಾನದಿಂದ ಪ್ರಾರಂಭವಾದ ಪಥಸಂಚಲನವು ನಗರದ ಪ್ರಮುಖ ಬೀದಿಗಳಾದ ಕೋಟೆ, ರಾಮ ಮಂದಿರ ರಸ್ತೆ, ಕನ್ನಿಕಾ ಪರಮೇಶ್ವರಿ ದೇವಾಸ್ಥಾನದ ರಸ್ತೆ, ಹೊಸಪೇಟೆ ರಸ್ತೆ, ಕಾರೋನೇಷನ್ ರಸ್ತೆಯ ಮೂಲಕ ರೈಲ್ವೆ ಸ್ಟೇಷನ್ ರಸ್ತೆ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಮಾರೋಪ ಸಮಾರಂಭದ ಮೂಲಕ ಮುಕ್ತಾಯಗೊಳಿಸಿದರು.
ಸಮಾರಂಭದಲ್ಲಿ ಪ್ರಾಂತ ದೇವಾಲಯ ಸಂರಕ್ಷಣಾ ಸಮಿತಿಯ ಪ್ರಮುಖರಾದ ಮನೋಹರ್ ಮಠದ್ ಮಾತನಾಡಿ ಮುಂದಿನ ದಿನಗಳಲ್ಲಿ ಜಲಸಮಸ್ಯೆ ಎದುರಾಗಲಿದ್ದು, ಅದನ್ನು ಉಳಿಸುವ ಅವಶ್ಯಕತೆ ತಮ್ಮೆಲ್ಲೆರ ಮೇಲಿದೆ ಅದನ್ನು ಉಳಿಸುವ ನಿಟ್ಟಿನಲ್ಲಿ ಜಾಗೃತರಾಗಿ, ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ನೀಡಬೇಕಾದ ಅನಿವಾರ್ಯವಿದ್ದು ನಾವೆಲ್ಲರೂ ಸಹ ಮರ ಗಿಡಗಳನ್ನು ಹಾಕಬೇಕಾಗಿದ್ದು ಹಸಿರು ಸಮೃದ್ದಿ ಆದರೆ ಸಮಾಜ ಸಮೃದ್ದಿಯಾಗುತ್ತದೆ ಹಾಗೂ ಪ್ಲಾಸ್ಟಿಕ್ ಮುಕ್ತ ಸಮಾಜವನ್ನು ನಿರ್ಮಾಣ ಮಾಡಬೇಕಾಗಿದ್ದು ಅದಕ್ಕೆ ನಾವೆಲ್ಲರೂ ಸಹ ಪಣತೊಟ್ಟ ಕಾರ್ಯಪ್ರವೃತ್ತರಾಗಬೇಕು ಎಂದು ಕರೆ ನೀಡಿದರು.
ಸಂಘವು ದೇಶದ 45 ದೇಶಗಳಲ್ಲಿ ಕಾರ್ಯವ್ಯಾಪ್ತಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಆರ್ಎಸ್ಎಸ್ ಒಂದೇ ಅಲ್ಲದೆ ಇದರ ಅಂಗಸಂಸ್ಥೆಗಳು ಎಲ್ಲಾ ವಿಭಾಗಗಳಲ್ಲಿ ಕೆಲಸ ಮಾಡುತ್ತಿದೆ. ಆರ್ಎಸ್ಎಸ್ ಹುಟ್ಟಿದ್ದು ಮುಸ್ಲಿಂ ಜನಾಂಗ ವನ್ನು ಮಟ್ಟ ಹಾಕುವುದಕ್ಕೆ ಆಗಲೀ, ಕ್ರಿಶ್ಚಿಯನ್ ಜನಾಂಗನ್ನು ಮಟ್ಟ ಹಾಕುವುದಕ್ಕೆ ಅಗಲೀ ಹುಟ್ಟಿದಲ್ಲ, ಸಮಾಜ ವನ್ನು ಸಂಘಟಿಸುತ್ತಾ ಒಗ್ಗೂಡಿಸುವ ಕೆಲಸವನ್ನು ಮಾಡುತ್ತಿದೆ. ವಿಕಾರವಾದಿಗಳು ಎನ್ನುವ ವಿಚಾರ ವಾದಿಗಳಿಗೆ, ಕಮ್ಮಿ ನಿಷ್ಠೆಯಿರುವ ಕಮ್ಯುನಿಷ್ಟ್ರಿಗೆ ಸಂಘದ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾರೆ ಆದರೆ ಸನಾತನವಾಗಿರುವ ಹಿಂದೂ ಧರ್ಮ, ಸಂಸ್ಕೃತಿ, ಪರಂಪರೆ, ಮಠ-ಮಂದಿರಗಳು, ಗುಡಿಗೋಪುರಗಳು, ಅಕ್ಕ ತಂಗಿಯವರ ಮಾಂಗಲ್ಯ ರಕ್ಷಣೆ, ಸಮಾಜದ ಸಂಘಟಿತವಾಗಿಸುತ್ತಾ ಜಗತ್ತಿಗೆ ಭಾರತಮಾತೆಯನ್ನು ಜಗದ್ಗುರುವನ್ನಾಗಿ ಮಾಡುವ ಕೆಲಸವನ್ನು ಮಾಡುತ್ತಿದೆ.
ಅಜ್ಞಾನಿಗಳಿಗೆ ಅವಿವೇಕಿಗಳಿಗೆ ಅಂಧಕಾರದಲ್ಲಿ ಬದುಕುತ್ತಿರುವ ವ್ಯಕ್ತಿಗಳಿಗೆ ಮನುಷ್ಯನಾಗಿ ಬದುಕಿ ಭಗವಂತನಾಗಿ ಬದುಕುವುದನ್ನು ಆರ್ಎಸ್ಎಸ್ ಪ್ರತಿ ನಿತ್ಯ ಶಾಖೆಗಳಲ್ಲಿ ಕಲಿಸುತ್ತಿದೆ. ಸಂಘವು ಯಾವುದೇ ಘೋಷಣೆ ಮಾಡದೆ ಶೋಷಣೆಯ ಮುಕ್ತ ಮಾಡುವ ಕೆಲಸವನ್ನು ಮಾಡುತ್ತಾ ಬರುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯವಾಹ ರವೀಂದ್ರ ತೆಗ್ಗಿನಮನಿ, ಮನೋಹರ್ರಂಗಾಪುರ, ಡಾ.ಶ್ರೀಧರ್, ಲೋಕೇ ಶ್ವರ, ಪ್ರಸನ್ನ ಕುಮಾರ್, ತರಕಾರಿ ಗಂಗಾಧರ್, ಭಾಸ್ಕರ್, ಉಮೇಶ್, ಗಿರೀಶ್, ಶ್ರೀಕಂಠ, ಗಾಡಿಮಂಜಣ್ಣ, ಸೇರಿದಂತೆ ನೂರಕ್ಕೂ ಹೆಚ್ಚು ಘೋಷ್ ಸಹಿತ ಗಣವೇಷಧಾರಿ ಸ್ವಯಂಸೇವಕರು ಭಾಗವಹಿಸಿದ್ದರು.