Thursday, 12th December 2024

ಜನರ ಪ್ರೀತಿಯ ಮುಖ್ಯ ಶಿಕ್ಷಕ ಈರಪ್ಪ ನಿವೃತ್ತಿ

ತುಮಕೂರು: ಜಿಲ್ಲೆಯ ಚಿ.ನಾ.ಹಳ್ಳಿ ತಾಲೂಕಿನ ಹೊಸ ಗೊಲ್ಲರಹಟ್ಟಿ ಸರಕಾರಿ ಶಾಲೆಯ ಮುಖ್ಯ ಶಿಕ್ಷಕ ಈರಪ್ಪ ಅವರು ಜು.30 ರಂದು ನಿವೃತ್ರಿಯಾಗುತ್ತಿದ್ದಾರೆ.
ಜಿಲ್ಲೆಯ ಗಡಿಭಾಗದ ಕುಗ್ರಾಮದಲ್ಲಿ ಸುಮಾರು 8 ವರ್ಷಕ್ಕೂ ಅಧಿಕ ಕಾಲ ಸೇವೆ ಸಲ್ಲಿಸಿ ಅಪಾರ ಜನಪ್ರೀತಿ ಗಳಿಸಿದ್ದಾರೆ.
ಪಟ್ಟಣದಿಂದ ದೂರ ಇರುವ ಊರಿಗೆ ಕೆಲವು ಸಂದರ್ಭದಲ್ಲಿ ಕಾಲ್ನಡಿಗೆಯಲ್ಲಿ ಹೋಗಿ ಕರ್ತವ್ಯ ನಿರ್ವಹಿಸಿರುವ ಉದಾಹರಣೆ ಯಿದೆ. ಉತ್ತಮವಾಗಿ ಕರ್ತವ್ಯ ನಿಭಾಯಿಸಿ, ಮಕ್ಕಳ, ಪೋಷಕರ ಪ್ರೀತಿ ಗಳಿಸಿ ಸೇವೆಯಿಂದ ನಿವೃತ್ತಿಯಾಗುತ್ತಿರುವುದು ನೋವಿನ ಸಂಗತಿಯಾಗಿದೆ ಊರಿನ ಗ್ರಾಮಸ್ಥರ ನುಡಿ.
ಸೇವೆಯಿಂದ ನಿವೃತ್ತಿಯಾಗುತ್ತಿದ್ದರೂ ಈರಪ್ಪ ಅವರು ಊರಿನ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆಸುತ್ತಾರೆಂಬುದು ಹಿರಿಯ ವಿದ್ಯಾರ್ಥಿಗಳ ಅಭಿಪ್ರಾಯವಾಗಿದೆ.