ತಿಪಟೂರು: ಗಡಿಭಾಗ ರುದ್ರಾಪುರ ಗೇಟ್ ಬಳಿ ಕಾರು ಮತ್ತು ದ್ವಿಚಕ್ರ ವಾಹನದ ನಡುವೆ ಅಪಘಾತ ಸಂಭವಿಸಿದೆ.
ಪ್ರಕರಣ ಹೊನ್ನವಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ದ್ವಿಚಕ್ರ ವಾಹನದಲ್ಲಿ ಚಲಿಸುತ್ತಿದ್ದ ರುದ್ರಪುರದ ಸಿದ್ದಯ್ಯನವರು ಚಿಕಿತ್ಸೆಗಾಗಿ ತಿಪಟೂರಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಅಪಘಾತದ ಸ್ಥಳದಲ್ಲಿ ತೀವ್ರವಾಗಿ ತಲೆಗೆ ಮತ್ತು ಸೊಂಟಕ್ಕೆ ಪೆಟ್ಟು ಬಿದ್ದಿದ್ದ ಬಳುವನೆರಳು ಗ್ರಾಮದ ಮರುಳಸಿದ್ದಯ್ಯ( 65 ವರ್ಷ) ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಗುಬ್ಬಿಯಲ್ಲಿ ಮರಣ ಹೊಂದಿದ್ದಾರೆ.
ಮೃತಪಟ್ಟ ಮರಳಸಿದ್ದಯ್ಯನವರು ಅರಸೀಕೆರೆ ತಾಲೂಕಿನ ದೊಡ್ಡಮೇಟಿಕುರ್ಕೆ ಗ್ರಾಮದ ಬೂದಿಹಾಳ್ ಮಠದ ಶ್ರೀ ಶಶಿಶೇಖರ ಸಿದ್ದಬಸವ ಸ್ವಾಮಿಜಿಯವರ ತಂದೆಯವರೆಂದು ತಿಳಿದು ಬಂದಿದೆ.