Friday, 20th September 2024

Rwanda High Commissioner: ಕೈಗಾರಿಕಾ ಪ್ರದೇಶಕ್ಕೆ ರವಾಂಡಾದ ಹೈ ಕಮಿಷನರ್ ಭೇಟಿ 

ತುಮಕೂರು: ನಗರದ ವಸಂತನರಸಾಪುರ ಕೈಗಾರಿಕಾ ಪ್ರದೇಶಕ್ಕೆ ಭೇಟಿ ನೀಡಿದ ರವಾಂಡಾದ ಹೈ ಕಮೀಷನರ್ ಮಿಸ್ ಜಾಕ್ವೆಲಿನ್ ಅವರನ್ನು ವಸಂತ ನರಸಾಪುರ ಕೈಗಾರಿಕಾ ಅಸೋಸಿಯೇಷನ್ ವತಿಯಿಂದ ಸನ್ಮಾನಿಸ ಲಾಯಿತು. 

ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಇರುವ ಕೈಗಾರಿಕೆಗಳನ್ನು ವೀಕ್ಷಿಸಿದ ರವಾಂಡಾದ ಹೈ ಕಮೀಷನರ್ ಮಿಸ್ ಜಾಕ್ವೆಲಿನ್ ಅವರು ಮಾತನಾಡಿ, ಕೈಗಾರಿಕೋದ್ಯಮಿಗಳು ರವಾಂಡಾಕ್ಕೆ ಒಮ್ಮೆ ಭೇಟಿ ನೀಡುವಂತೆ ಮನವಿ ಮಾಡಿದರು.

ರವಾಂಡಾದಲ್ಲಿ ಕೈಗಾರಿಕೆಗಳ ಸ್ಥಾಪನೆ ಮತ್ತು ಬಂಡವಾಳ ಹೂಡಿಕೆಗೆ ವಿಫುಲ ಅವಕಾಶಗಳಿವೆ. ಕೈಗಾರಿಕೋ ದ್ಯಮಿಗಳ ಅವಶ್ಯತೆಯೂ ಇದೆ. ಹಾಗಾಗಿ ಒಮ್ಮೆ ಭೇಟಿ ನೀಡಿ ರವಾಂಡಾವನ್ನು ವೀಕ್ಷಿಸಬೇಕು ಎಂದರು. 

ಇದನ್ನೂ ಓದಿ: Tumkur_Yeshwantpur Memu Train: ತುಮಕೂರು-ಯಶವಂತಪುರ ಮಾರ್ಗವಾಗಿ ಮೆಮು ರೈಲು ಓಡಾಟ

ತುಮಕೂರಿನ ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಬಂಡವಾಳ ಹೂಡಿಕೆ ಮಾಡುವಂತೆ ಸ್ಥಳೀಯ ಕೈಗಾರಿ ಕೋದ್ಯಮಿಗಳು ಮನವಿ ಮಾಡಿದಾಗ ಜಾಕ್ವೆಲಿನ್ ಅವರು ಹೂಡಿಕೆ ಮಾಡುವುದಾಗಿ ಭರವಸೆ ನೀಡಿದರು. 

ವಸಂತನರಸಾಪುರ ಕೈಗಾರಿಕಾ ಅಸೋಸಿಯೇಷನ್ ಅಧ್ಯಕ್ಷ ಡಾ.ಸಿ.ವಿ.ಹರೀಶ್ ಮಾತನಾಡಿ, ಸೆ.18ರ ನಂತರ ರವಾಂಡಾಕ್ಕೆ ನಮ್ಮನ್ನು ಆಹ್ವಾನಿಸಿದ್ದಾರೆ. ಹಾಗಾಗಿ ಇಲ್ಲಿನ ಉದ್ಯಮಿಗಳೆಲ್ಲಾ ಒಮ್ಮೆ ಭೇಟಿ ನೀಡಿ ಅಲ್ಲಿ ಕೈಗಾರಿಕೆ ಸ್ಥಾಪನೆಗಳಿಗೆ ಇರುವ ಅವಕಾಶವನ್ನು ವೀಕ್ಷಿಸಿ ಬರುವುದಾಗಿ ಹೇಳಿದರು. 

ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಇದುವರೆಗೂ ೩ ಸಾವಿರ ಎಕರೆ ಪ್ರದೇಶ ಹಂಚಿಕೆಯಾಗಿದೆ. ಇನ್ನು ೩ ಮತ್ತು ೪ನೇ ಹಂತದಲ್ಲಿ ಹಂಚಿಕೆಯಾಗುತ್ತಿದೆ ಎಂದು ತಿಳಿಸಿದರು.

ವಸಂತನರಸಾಪುರ ಕೈಗಾರಿಕಾ ಪ್ರದೇಶಕ್ಕೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಜಿಲ್ಲಾ ಉಸ್ತು ವಾರಿ ಸಚಿವರಿಗೆ ಮನವಿ ಮಾಡಿದ್ದೇವೆ. ಸಚಿವರಿಂದ ಸಕಾರಾತ್ಮಕ ಸ್ಪಂದನೆ ದೊರೆತಿದೆ. ಹಾಗೆಯೇ, ಮೆಟ್ರೋ ಸಹ ತರುವುದಾಗಿ ಸಚಿವರು ಹೇಳಿದ್ದಾರೆ. ಮೆಟ್ರೋ ಬಂದರೆ ಕೈಗಾರಿಕೆಗಳ ಪ್ರಗತಿಗೆ ಮತ್ತಷ್ಟು ಸಹಕಾರಿಯಾಗಲಿದೆ ಎಂದರು. 

ಈ ಸಂದರ್ಭದಲ್ಲಿ ವಸಂತನರಸಾಪುರ ಕೈಗಾರಿಕಾ ಅಸೋಸಿಯೇಷನ್ ಮೋಹನ್, ಸುರೇಶ್, ಬಸವರಾಜು ಮತ್ತಿತರರು ಉಪಸ್ಥಿತರಿದ್ದರು.