Friday, 19th July 2024

ಲಕ್ಷಾಂತರ ಹೋರಾಟಗಾರರ ಅನನ್ಯ ತ್ಯಾಗ, ಬಲಿದಾನದ ಪ್ರತೀಕವೇ ಸ್ವಾತಂತ್ರ್ಯ

ಜಿಲ್ಲಾಧಿಕಾರಿಗಳಿಂದ ರಾಷ್ಟ್ರ ಧ್ವಜಾರೋಹಣ
       
-ರಾಷ್ಟ್ರೀಯ ಧ್ವಜವು ನಮ್ಮ ದೇಶದ ಸಾರ್ವಭೌಮತ್ವದ ಸಂಕೇತ
-ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ
ಗದಗ: ಭಾರತ ದೇಶದ ಸ್ವಾತಂತ್ರ್ಯ ಚಳವಳಿಗೆ ನಿಖರ ಚೌಕಟ್ಟು ಮತ್ತು ಸ್ವರೂಪ ನೀಡಿದವರು ಮಹಾತ್ಮಾ ಗಾಂಧೀಜಿ ಅವರು. ಅವರ ನೇತೃತ್ವದಲ್ಲಿ ಸ್ವಾತಂತ್ರ್ಯ ಸಂಗ್ರಾಮವು ಅಹಿಂಸೆ ಮತ್ತು ಸತ್ಯಾಗ್ರಹದ ಮೂಲಕ ಸಾಗಿತು ಜವಾಹಾರಲಾಲ ನೆಹರು, ವಲ್ಲಭಬಾಯಿ ಪಟೇಲ್ ಮುಂದಾಳತ್ವದಲ್ಲಿ ಲಕ್ಷಾಂತರ ಹೋರಾಟಗಾರರ ಅನನ್ಯ ತ್ಯಾಗ, ಬಲಿದಾನ ಮತ್ತು ಸಮರ್ಪಣೆ ಯಿಂದಾಗಿ ನಮಗೆ ಸ್ವಾತಂತ್ರ್ಯ ಲಭಿಸಿದೆ ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ ಹೇಳಿದರು.
ನಗರದ ಕೆ.ಎಚ್.ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ಜರುಗಿದ ಸ್ವಾತಂತ್ರೋತ್ಸವದ ಸಾರ್ವಜನಿಕ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಸ್ವಾತಂತ್ರ್ಯ ಹೋರಾಟವು ತೀವ್ರಗಾಮಿ ನಾಯಕರುಗಳಾದ ಲಾಲ-ಬಾಲ-ಪಾಲರಿಂದ ತೀವ್ರ ಸ್ವರೂಪವನ್ನು ಪಡೆದು ಭಗತಸಿಂಗ್, ಚಂದ್ರಶೇಖರ ಆಝಾಧ, ಸುಭಾಷಚಂದ್ರ ಭೋಸ್‌‌ರಂತಹ ಕ್ರಾಂತಿಕಾರರು ಬ್ರಿಟಿಷರ ಎದೆಯನ್ನು ನಡುಗಿಸಿದರು ಎಂದರು.
ಆಗಸ್ಟ್ 15 ನಮಗೆಲ್ಲ ಶ್ರೇಷ್ಠ ಹಾಗೂ ಸಂಭ್ರಮದ ರಾಷ್ಟ್ರೀಯ ಹಬ್ಬದ ದಿನವಾಗಿದೆ. ಈ ಸ್ವಾತಂತ್ರೋತ್ಸವವು ಎಂದಿಗೂ ಮರೆಯಲಾಗದ ದಿನವಾಗಿದೆ. ಇಂದು ನಾವೆಲ್ಲರೂ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಸಂಭ್ರಮಾಚರಣೆಯಲ್ಲಿದ್ದೆವೆ. ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸುವುದು ಕೃತಜ್ಞಾಪೂರ್ವಕ ಗೌರವ ನಮನ ಸಲ್ಲಿಸುವದು ನಮ್ಮೆಲ್ಲರ ಆಧ್ಯ ಕರ್ತವ್ಯ ವಾಗಿದೆ ಎಂದು ತಿಳಿಸಿದರು.
ಈ ವರ್ಷ ವಿಶೇಷವಾಗಿ ಪ್ರಧಾನ ಮಂತ್ರಿಯವರ ಆಶಯದಂತೆ ಹರ್ ಘರ್ ತಿರಂಗಾ ಆಚರಣೆ ಮಾಡಲಾಗುತ್ತಿದೆ. ರಾಷ್ಟ್ರೀಯ ಧ್ವಜವು ನಮ್ಮ ದೇಶದ ಸಾರ್ವಭೌಮತ್ವದ ಪ್ರತೀಕ ರಾಷ್ಟ್ರ ಧ್ವಜದ ತತ್ವಗಳಾದ ಸತ್ಯ, ತ್ಯಾಗ, ಶಾಂತಿಯನ್ನು ನಾವೆಲ್ಲರೂ ಅಳವಡಿಸಿಕೊಂಡು ಅಭಿವೃದ್ಧಿ ಪಥದತ್ತ ಸಾರೋಣ. ಝೆಂಡಾ ಉಂಚಾ ರಹೆ ಹಮಾರಾ ಎಂಬ ನಾಣ್ಣುಡಿಯಂತೆ ಹರ್ ಘರ್ ತಿರಂಗಾ ಅಭಿಯಾನವನ್ನು ಯಶಸ್ವಿಯಾಗಿ ನೆರವೇರಿಸಿದ ಜಿಲ್ಲೆಯ ಜನತೆಗೆ ಅಭಿನಂದನೆಗಳು ಎಂದರು.
ಕೃಷಿ ಸಮ್ಮಾನ ನಿಧಿ ಯೋಜನೆಯಡಿ ಜಿಲ್ಲೆಯ 1,31,047 ರೈತರ ಖಾತೆಗಳಿಗೆ ವಾರ್ಷಿಕ ತಲಾ ಹತ್ತು ಸಾವಿರದಂತೆ ರೂ. 78.62 ಕೋಟಿಗಳನ್ನು ನೇರವಾಗಿ ಜಮೇ ಮಾಡಲಾಗಿದೆ. 21-22ನೇ ಸಾಲಿನಲ್ಲಿ 365 ಕೋಟಿ ರೂ. ವೆಚ್ಚದಲ್ಲಿ 190 ಕಿ.ಮೀ. ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ಮುಖ್ಯರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗಿದೆ. 39 ಕೋಟಿ ವೆಚ್ಚದಲ್ಲಿ 135 ಶಾಲಾ ಕೊಠಡಿಗಳನ್ನು ನಿರ್ಮಿಸ ಲಾಗಿದೆ.
ಪ್ರಸಕ್ತ ಸಾಲಿನಲ್ಲಿ 398 ಕಿ.ಮಿ. ರಸ್ತೆ ಅಭಿವೃದ್ಧಿ ಪಡಿಸಲಿ 332 ಕೋಟಿ ಹಾಗೂ ಶಾಲಾ, ನ್ಯಾಯಾಂಗ ಕಟ್ಟಡ ನಿರ್ಮಾಣಕ್ಕೆ 7.72 ಕೋಟಿ ರೂ. ವೆಚ್ಚ ಮಾಡಲು ಯೋಜನೆ ರೂಪಿಸ ಲಾಗಿದೆ ಎಂದು ತಿಳಿಸುತ್ತಾ ಜಿಲ್ಲಾ ಪಂಚಾಯತ, ಆರೋಗ್ಯ ಇಲಾಖೆ, ಸಮಾಜ ಕಲ್ಯಾಣ, ಹಿಂದುಳಿದ ವರ್ಗ, ಅಲ್ಪಸಂಖ್ಯಾತ, ಶಿಕ್ಷಣ, ಕಾರ್ಮಿಕ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಭಿವೃದ್ಧಿಯ ಪಕ್ಷಿನೋಟವನ್ನು ಸ್ವಾತಂತ್ರೋತ್ಸವದ ಸಂದೇಶದಲ್ಲಿ ಜಿಲ್ಲಾಧಿ ಕಾರಿ ವೈಶಾಲಿ ಎಂ.ಎಲ್. ಪ್ರಸ್ತಾಪಿಸಿದರು.
ಉಪಸ್ಥಿತಿ: ಕಾರ್ಯಕ್ರಮದಲ್ಲಿ ಶಾಸಕ ಎಚ್.ಕೆ.ಪಾಟೀಲ, ವಿಧಾನ ಪರಿಷತ ಸದಸ್ಯ ಎಸ್.ವಿ.ಸಂಕನೂರ, ಎಂ.ಸಿ.ಎ.ಅಧ್ಯಕ್ಷ ಎಂ.ಎಸ್.ಕರಿಗೌಡ್ರ, ಗದಗ-ಬೆಟಗೇರಿ ನಗರಾ ಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಿದ್ದಪ್ಪ ಪಲ್ಲೇದ, ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷರಾದ ಉಷಾ ದಾಸರ, ಉಪಾಧ್ಯಕ್ಷೆ ಸುನಂದಾ ಬಾಕಳೆ, ಜಿಲ್ಲಾ ಪಂಚಾಯತ ಸಿ.ಇ.ಓ ಡಾ.ಸುಶೀಲಾ ಬಿ, ಜಿಲ್ಲಾ ಪೋಲಿಸ್ ವರಿಷ್ಠಾಧಿ ಕಾರಿ ಶಿವಪ್ರಕಾಶ ದೇವರಾಜು, ಉಪ ಅರಣ್ಯ ಸಂರಕ್ಷಣಾಧಿಕಾರಿ ದೀಪಿಕಾ ಬಾಜಪೇಯಿ, ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ, ತಹಶೀಲ್ದಾರ ಕಿಶನ ಕಲಾಲ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಹಿರೇಮಠ, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ವಿಠ್ಠಲ ಸೇರಿದಂತೆ ಗಣ್ಯರು, ವಿವಿಧ ಇಲಾಖೆ ಅಧಿಕಾರಿ ಸಿಬ್ಬಂದಿಗಳು, ಸಾರ್ವಜನಿಕರು, ಶಾಲಾ, ಕಾಲೇಜು ವಿಧ್ಯಾರ್ಥಿಗಳು ಉಪಸ್ಥಿತರಿದ್ದರು. ದತ್ತಪ್ರಸನ್ ಪಾಟೀಲ ಹಾಗೂ ಕು.ಮಂಜರಿ ಹೊಂಬಾಳಿ ಕಾರ್ಯಕ್ರಮ ನಿರೂಪಿಸಿದರು.
ಆಕರ್ಷಕ ಪಥ ಸಂಚಲನ: ಮುಂಜಾನೆ 9 ಗಂಟೆಗೆ ಸರಿಯಾಗಿ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ ಅವರು ರಾಷ್ಟ್ರ ಧ್ವಜಾ ರೋಹಣ ನೆರವೇರಿಸಿ ವಿವಿಧ ದಳಗಳ ವೀಕ್ಷಣೆ ಮಾಡಿದರು. ನಂತರ ಜರುಗಿದ ಆಕರ್ಷಕ ಪಥಸಂಚಲನದ ನೇತೃತ್ವವನ್ನು ಪರೇಡ ಕಮಾಂಡರ ಶಂಕರಗೌಡ ಚೌದ್ರಿ ಅವರು ನೇತೃತ್ವ ವಹಿಸಿದ್ದರು.
ಜಿಲ್ಲಾ ಪೋಲಿಸ ಬ್ಯಾಂಡಿನ ಸಾರೇ ಜಹಾಂಸೇ ಅಚ್ಚಾ ಹಿಂದೂಸಿತಾ ಹಮಾರಾ ಹಾಡಿನ ಹಿಮ್ಮೇಳದಲ್ಲಿ ಶಿಸ್ತಿನ ಹೆಜ್ಜೆ ಹಾಕಿದ ಜಿಲ್ಲಾ ಸಶಸ್ತ್ರ ಮೀಸಲು ಪಡೆ, ಜಿಲ್ಲಾ ಪೋಲಿಸ, ನಾಗರಿಕ ಪೋಲಿಸ್ ಪಡೆ, ಗೃಹ ರಕ್ಷಕ ದಳ, ಅಗ್ನಿಶಾಮಕ ದಳ, ಅಬಕಾರಿ ಇಲಾಖೆ, ಅರಣ್ಯ ಇಲಾಖೆ, ಎನ್.ಸಿ.ಸಿ. ಸಿನಿಯರ್ ಬಾಯ್ಸ, ಗಲ್ರ್ಸ, ಎನ್.ಸಿ.ಸಿ. ಸೀನಿಯರ, ಜೂನಿಯರ್ ಗಲ್ರ್ಸ, ಎಸ್,ಎಂ. ಕೃಷ್ಣಾ ನಗರ ಹೆಣ್ಣುಮಕ್ಕಳ ಪ್ರೌಢ ಶಾಲೆಯ ಜನರಲ್, ಹಾಗೂ ಸೇವಾದಳ ತಂಡಗಳು ಜಿಲ್ಲಾಧಿಕಾರಿಗಳಿಗೆ ಗೌರವವಂದನೆ ನೀಡಿದವು.
ಸಾಧಕರಿಗೆ ಸನ್ಮಾನ: ರಾಜ್ಯಮಟ್ಟದ ಪುಸ್ತಕ ಪ್ರಕಾಶಕರ ಸಮ್ಮೇಳನದಲ್ಲಿ ಭಾಗವಹಿಸಿದ್ದ ಜ್ಯೋತಿ ಲೋಣಿ, ಸಂಗೀತ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ್ದಕಾಗಿ ಡಾ.ವಿಶ್ವನಾಥ ಹಿರೇಮಠ, ಅಮೆರಿಕಾ ವಿಶ್ವವಿದ್ಯಾಲಯದಿಂದ ಡಾಕ್ಟರೇಟ ಪದವಿ ಪಡೆದ ಕಿಶೋರಬಾಬು ನಾಗರಕಟ್ಟಿ, ಮಾಧ್ಯಮ ಕ್ಷೇತ್ರದಲ್ಲಿ ಛಾಯಾಗ್ರಾಹಕರಾದ ವಸಂತ. ಎನ್.ಮಹೇಂದ್ರಕರ, ವಿಜಯಸಾಕ್ಷಿ ದಿನಪತ್ರಿಕೆಯ ಸಂಪಾದಕ ಎಚ್.ಎಂ.ಶರೀಫನವರ, ಟಿ.ವಿ.9 ಜಿಲ್ಲಾ ವರದಿಗಾರರಾದ ಸಂಜೀವ ಪಾಂಡ್ರೆ, ಸಾಮಾಜಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡ ಬೀರೇಂದ್ರ ಅಣ್ಣಿಗೇರಿ ನಿರೂಪಕರಾಗಿ ಸೇವೆ ಸಲ್ಲಿಸುತ್ತಿರುವ ಡಾ.ದತ್ತಪ್ರಸನ್ನ ಪಾಟೀಲ, ರಾಷ್ಟ್ರಪತಿಯವರ ಪೋಲಿಸ್ ಶ್ಲಾಘನೀಯ ಸೇವಾ ಪದಕ ಪಡೆದ ಮಾರುತಿ ಜೋಗದಂಡಕರ, ಮುಖ್ಯಮಂತ್ರಿಯವರ ಪದಕ ಪಡೆದ ವೀರಭದ್ರಪ್ಪ ಮಡಿವಾಳರ, ದ್ವಿತೀಯ ಪಿ.ಯು. ಪರೀಕ್ಷೆಯಲ್ಲಿ ರಾಜ್ಯಕ್ಕೆ ದ್ವೀತಿಯ ಸ್ಥಾನ ಪಡೆದ ಶಿವರಾಜ ದುರಗಪ್ಪ, ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಜಿಲ್ಲೆಯಿಂದ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಪುಷ್ಪಾ ಅಂಗಡಿ, ಕ್ರೀಡಾ ಕ್ಷೇತ್ರದಲ್ಲಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ವಿವಿಧ ರ್ಸರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ಕೀರ್ತಿ. ಅಡ್ನೂರ, ಕೃಷ್ಣಪ್ರಸಾದಗೌಡ ಪಾಟೀಲ, ಸುಮಂತ್ ಇಟಗಿ, ಪ್ರೇಮಾ ಹುಚ್ಚಣ್ಣವರ, ಪ್ರಶಾಂತಗೌಡ ಬೇಲೇರಿ, ಶಾಹಿದಾಬೇಗಂ ಬಳಿಗಾರ, ಅಭಿಷೇಕ ಭಜಂತ್ರಿ, ಮಹ್ಮದ ಅಜರುದ್ದೀನ, ಹರೀಶ ಮುಟಗಾರ, ಸುಪ್ರಿಯಾ ಇಟಗಿ, ಪವಿತ್ರಾ ಕುರ್ತಕೋಟಿ, ಜ್ಯೋತಿ ಪೂಜಾರ, ಬೀಮವ್ವ ಪೂಜಾರ, ಸಿದ್ಧಾರ್ಥ ಬಂಡಿ, ಸೌಪರ್ಣಿಕಾ ಕೊಪ್ಪಳ, ಶ್ವೇತಾ ಬೆಳಗಟ್ಟಿ, ಸೋನಿಯಾ ಜಾಧವ, ಶ್ವೇತಾ ಜಾಧವ, ರಾಧಿಕಾ ತೊಂಡಿಹಾಲ, ವರಲಕ್ಷ್ಮೀ ಕದಡಿ, ಭುವನೇಶ್ವರಿ ಕೋಳಿವಾಡ, ವಿಜಯಲಕ್ಷ್ಮೀ ಹುಡೇದ, ಪೂರ್ಣಿಮಾ ಛಬ್ಬಿ, ಬಸೀರಾ ವಕಾರದ, ಮೃತ್ಯುಂಜಯ ಅಮಾತ್ಯ, ಅಭಿಷೇಕ ಗಂಗನಗೌಡ್ರ, ದೀಪಾ ಬಹೇರಮಠ, ಇವರುಗಳನ್ನು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ ಸೇರಿದಂತೆ ಗಣ್ಯರು ಸನ್ಮಾನಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮಗಳು: ಕೆ.ಎಚ್.ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಸ್ವಾತಂತ್ರೋತ್ಸವದ ದಿನಾಚರಣೆ ಅಂಗವಾಗಿ ಜರುಗಿದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸೆಂಟ್ ಜಾನ್ಸ ಪ್ರೌಢಶಾಲೆ, ತೋಂಟದಾರ್ಯ ಪ್ರೌಢ ಶಾಲೆ, ಸಿ.ಎಸ್.ಪಾಟೀಲ ಬಾಲಕಿಯ ಪ್ರೌಢಶಾಲೆ, ಎಸ್.ಎಸ್.ಕೆ. ಪ್ರೌಢಶಾಲೆ, ಹಾಗೂ ಮಂಜು ಪ್ರೌಢ ಶಾಲೆ ವಿಧ್ಯಾರ್ಥಿಗಳು ದೇಶ ಭಕ್ತಿ ಗೀತೆಗಳಿಗೆ ಸಾಮೂಹಿಕ ನೃತ್ಯಗಳು ಕ್ರೀಡಾಂಗಣದಲ್ಲಿ ನೆರೆದಂತಹ ಗಣ್ಯರು ಹಾಗೂ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾದವು.

error: Content is protected !!