Saturday, 26th October 2024

ಸದಾಶಿವ ವರದಿ ಪುರಸ್ಕರಿಸಿ ಇಲ್ಲವೆ ಅಕಾರ ಬಿಟ್ಟು ಇಳಿಯಿರಿ : ಬಾಲಕುಂಟಹಳ್ಳಿ ಗಂಗಧರ್

ಚಿಕ್ಕಬಳ್ಳಾಪುರ : ಕರ್ನಾಟಕ ರಾಜ್ಯ ಸರಕಾರ ಕೂಡಲೇ ಸದಾಶಿವ ಆಯೋಗದ ವರದಿಯನ್ನು ಸದನದಲ್ಲಿ ಮಂಡಿಸಿ ಯಥಾ ವಥ್ ಜಾರಿಗೊಳಿಸಲು ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಬೇಕು.ಇಲ್ಲದಿದ್ದರೆ ಸಿದ್ದರಾಮಯ್ಯ ಸರಕಾರವನ್ನು ಮನೆಗೆ ಕಳಿಸಿದಂತೆ ಬೊಮ್ಮಾಯಿ ಸರಕಾರವನ್ನೂ ಕೂಡ ಮಾದಿಗರು ಚುನಾವಣೆ ಯಲ್ಲಿ ಮನೆಗೆ ಕಳಿಸುತ್ತೇವೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಬಾಲಕುಂಟಹಳ್ಳಿ ಗಂಗಾಧರ್ ಆಕ್ರೋಶ ವ್ಯಕ್ತಪಡಿಸಿದರು.

ನಗರ ಹೊರವಲಯ ಜಿಲ್ಲಾಡಳಿತ ಭವನದ ಎದುರು ಮಂಗಳವಾರ ದಸಂಸ ವತಿಯಿಂದ ಏರ್ಪಡಿಸಿದ್ದ ಬೃಹತ್ ಪ್ರತಿಭಟನೆ ಯನ್ನು ಉದ್ದೇಶಿಸಿ ಮಾತನಾಡಿದರು.

ಪರಿಶಿಷ್ಟಜಾತಿಗಳ ಒಳಮೀಸಲಾತಿ ಜಾರಿಗಾಗಿ ಸಲ್ಲಿಸಿರುವ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಸರಕಾರ ತಕ್ಷಣವೇ ಅಂಗೀಕರಿಸಿ ಸಂವಿಧಾನದ ವಿ ೩೪೧(೩)ಕ್ಕೆ ತಿದ್ದುಪಡಿ ತಂದು ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಬೇಕು.

ಪರಿಶಿಷ್ಟ ಜಾತಿ ಪಂಗಡಗಳ ಭೂಪರಭಾರೆ ನಿಷೇಧ ಕಾಯ್ದೆಗೆ ಪುರ್ವಾನ್ವಯ ಆಗುವಂತೆ ತಿದ್ದುಪಡಿ ಮಾಡಬೇಕು. ಎಸ್.ಸಿಪಿ, ಟಿಎಸ್ಪಿ ಯೋಜನೆಯಡಿಯಲ್ಲಿ ಮೀಸಲಿಟ್ಟ ಹಣವನ್ನು ಸರಕಾರ ಅನ್ಯ ಉದ್ದೇಶಕ್ಕೆ ಬಳಸುವುದು ಖಂಡನೀಯ. ಈಹಣವನ್ನು ವಾಪಸ್ಸು ಪಡೆಯಲು ಸರಕಾರ ರಚಿಸಿಕೊಂಡಿರುವ ೭ಡಿ ಕಾಯ್ದೆಯನ್ನು ತಕ್ಷಣವೇ ರದ್ದುಗೊಳಿಸಬೇಕು.ಪರಿಶಿಷ್ಟ ಜಾತಿಗಳ ೧೦೧ ಪಟ್ಟಿಯ ಕ್ರಮಸಂಖ್ಯೆ ೧೯ರಲ್ಲಿಯ ಬೇಡಜಂಗಮ/ಬುಡ್ಗಜ0ಗಮ ಹೆಸರಿನಲ್ಲಿ ನಕಲಿ ಜಾತಿ ಪ್ರಮಾಣ ಪತ್ರಪಡೆದು ಶಿಕ್ಷಣ ಉದ್ಯೋಗ,ಮತ್ತಿತರ ಸೌಲಭ್ಯ ಪಡೆದಿರುವ ವೀರಶೈವ ಲಿಂಗಾಯಿತ ಜಂಗಮರನ್ನು ಶಿಕ್ಷಗೆ ಗುರಿಪಡಿಸಬೇಕು.

ಇವರಿಗೆ ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿರುವ ಅಕಾರಿಗಳನ್ನು ಪರಿಶಿಷ್ಟಜಾತಿ ಪಂಗಡ ದೌರ್ಜನ್ಯ ಕಾಯ್ದೆ ಅಡಿಯಲ್ಲಿ ಜೈಲಿಗೆ ಅಟ್ಟಬೇಕು ಎಂದು ಆಗ್ರಹಿಸಿದರು.

ಈ ವೇಳೆ ರಾಜ್ಯ ಮಹಿಳಾ ಸಂಚಾಲಕಿ ರತ್ನಮ್ಮ, ರಾಜ್ಯ ಸಂಚಾಲಕ ಗುರುಮೂರ್ತಿ, ನರಸಿಂಹಪ್ಪ, ಮoಜುತುಳಸಿ, ರಮೇಶ್, ಗ0ಗಣ್ಣ, ವೆ0ಕಟೇಶ್, ಅಶೋಕ್, ನಾಗರಾಜ್,ನಾಗೇಶ್,ಆದಿ, ರಾಜಣ್ಣ, ಶಿವಶಂಕರ್, ಮುನಿಕೃಷ್ಣ, ಮುನಿರಾಜು ಮತಿತರರು ಇದ್ದರು.