Thursday, 12th December 2024

SAHE University: ಸಾಹೇ ವಿವಿಯಿಂದ 100ನೇ ಪಿಎಚ್‌ಡಿ ಪ್ರದಾನ

ತುಮಕೂರು: ದೇಶದ ಪ್ರತಿಷ್ಠಿತ ವಿವಿಗಳಲ್ಲಿ ಗುರುತಿಸಿಕೊಂಡಿರುವ ನ್ಯಾಕ್ ಎ + ಶ್ರೇಣಿಯ ಶ್ರೀ ಸಿದ್ದಾರ್ಥ ಆಕಾಡೆಮಿ ಆಫ್ ಹೈಯರ್‌ಎಜುಕೇಷನ್ (ಸಾಹೇ) ವಿಶ್ವವಿದ್ಯಾಲಯದಲ್ಲಿ ಅತ್ಯಲ್ಪ ಅವಧಿಯಲ್ಲಿ ಸಂಶೋ ಧನೆಯಲ್ಲಿ ಮಹತ್ತರ ಪ್ರಗತಿ ಸಾಧಿಸಿದ್ದು, 100ನೇ ವಿದ್ಯಾರ್ಥಿಗೆ ಪಿಎಚ್‌ಡಿ ಪ್ರದಾನ ಮಾಡಿದೆ.

14 ಇಂಜಿನಿಯರಿಂಗ್ ಮತ್ತು 10 ವೈದ್ಯಕೀಯ ಮತ್ತು ದಂತ ವಿಭಾಗಗಳಲ್ಲಿ ಸಂಶೋಧನೆ ಅವಕಾಶ ಮಾಡಿ ಕೊಟ್ಟಿರುವ ಸಾಹೇ ವಿವಿಯಲ್ಲಿ 130ಕ್ಕೂ ಹೆಚ್ಚು ಮಾರ್ಗದರ್ಶಕರಿದ್ದಾರೆ.

ನಗರದ ಶ್ರೀ ಸಿದ್ದಾರ್ಥ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಎಲೆಕ್ಟ್ರಾನಿಕ್ಸ್ ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿರುವ ಕೇಶವ ಮೂರ್ತಿ ಟಿ.ಜಿ ಅವರು ಇದೇ ವಿಭಾಗದಲ್ಲಿ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರಾಗಿರುವ ಡಾ. ಎಂ.ಎನ್. ಈಶ್ವರಪ್ಪ ಮಾರ್ಗದರ್ಶನದಲ್ಲಿ ‘ವ್ಯಕ್ತಿ ದೃಢೀಕರಣಕ್ಕಾಗಿ ಸಿಗ್ನಲ್ ಪ್ರಕ್ರಿಯೆಗೊಳಿಸುವಿಕೆ ವಿಷಯ ಕುರಿತು ಮಂಡಿಸಿದ ಸಂಶೋಧನಾ ಪ್ರಬಂಧಕ್ಕೆ ಪಿಎಚ್‌ ಡಿ ಪದವಿ ಲಭಿಸಿದೆ.

ಡಾ.ಜಿ.ಪರಮೇಶ್ವರ ಅವರಿಂದ ಅಭಿನಂದನೆ: ಸಾಹೇ ವಿಶ್ವವಿದ್ಯಾಲಯದ 100 ನೇಯವರಾಗಿ ಪಿಎಚ್‌ ಡಿ ಪಡೆದ ಕೇಶವ ಮೂರ್ತಿ ಅವರನ್ನು ತಮ್ಮ ಕಚೇರಿಗೆ ಬರಮಾಡಿಕೊಂಡ ವಿವಿ ಕುಲಾಧಿಪತಿಗಳಾದ ಡಾ.ಜಿ.ಪರಮೇಶ್ವರ್ ಅವರು ಹೂಗುಚ್ಚ ನೀಡಿ ಅಭಿನಂದಿಸಿದ್ದಾರೆ. ಉಪಕುಲಪತಿ ಡಾ.ಲಿಂಗೇಗೌಡ, ಕುಲಸಚಿವ ಡಾ.ಎಂ.ಝಡ್. ಕುರಿಯನ್, ಸಾಹೇ ವಿವಿಯ ಕುಲಾಧಿಪತಿಗಳ ಸಲಹೆಗಾರರಾದ ಡಾ.ವಿವೇಕ್ ವೀರಯ್ಯ, ಶ್ರೀ ಸಿದ್ದಾರ್ಥ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಎಂ.ಎಸ್.ರವಿಪ್ರಕಾಶ್ ಸೇರಿದಂತೆ ಅಂಗ ಸಂಸ್ಥೆಗಳ ಪ್ರಾಂಶು ಪಾಲರು ಮತ್ತು ಪ್ರಾಧ್ಯಾಪಕರು ಅಭಿನಂದಿಸಿದ್ದಾರೆ.