Sunday, 15th December 2024

ಮೂರು ತಿಂಗಳ ಬಾಕಿ ವೇತನ ಪಾವತಿಸುವಂತೆ ಮನವಿ

ಮಧುಗಿರಿ : ಸಮಾಜ ಕಲ್ಯಾಣ ಇಲಾಖೆಯ ಹೊರಗುತ್ತಿಗೆ ಕಾರ್ಮಿಕರು ಮೂರು ತಿಂಗಳ ಬಾಕಿ ವೇತನ ಪಾವತಿಸುವಂತೆ ಸಹಾಯಕ ನಿರ್ದೇಶಕರು (ಗ್ರೇಡ್-೧) ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಮಧುಗಿರಿ ತಾಲೂಕಿನ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ವಿದ್ಯಾರ್ಥಿ ನಿಲಯಗಳಲ್ಲಿ ಹೊರಗುತ್ತಿಗೆ ಆದಾರದಲ್ಲಿ ಕೆಲಸ ಮಾಡುವ ಕಾರ್ಮಿಕರುಗಳಿಗೆ ಮೂರು ತಿಂಗಳಾದರು ವೇತನ ನೀಡದೇ ದುಡಿಸಿಕೊಳ್ಳುತ್ತಿದ್ದು ಹಾಗೂ ದಿನದ ೧೪ ಗಂಟೆ ಕೆಲಸ ನಿರ್ವಹಿಸುತ್ತಿದ್ದು ಇವರಿಗೆ ವಾರದ ರಜೆಯು ಸಹ ಇರುವುದಿಲ್ಲ ಈ ನೌಕರರು ಸುಮಾರು ೧೫ ವರ್ಷ ಗಳಿಂದಲೂ ವಿದ್ಯಾರ್ಥಿನಿಲಯಗಳಲ್ಲಿ ಕೆಲಸ ಮಾಡುತ್ತಿದ್ದಾರೆ ಇವರಿಗೆ ಯಾವುದೇ ಸೇವಾ ಭದ್ರತೆ ಇಲ್ಲ ಸರಿಯಾದ ಸಮಯಕ್ಕೆ ಸಂಬಳವೂ ಇಲ್ಲ ಇದರಿಂದ ಬೇಸತ್ತು ಸಮಾಜ ಕಲ್ಯಾಣ ಇಲಾಖೆಯ ಮುಂದೆ ಇಂದು ಧರಣಿ ನಡೆಸಿ ತಮ್ಮ ಅಳಲನ್ನು ತೋಡಿಕೊಂಡರು.

ಮನವಿಯನ್ನು ಸ್ವೀಕರಿಸಿ ಮಾತನಾಡಿದ ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿಗಳಾದ ಮಲ್ಲಿಕಾರ್ಜುನ್ ರವರು ಹೊರಗುತ್ತಿಗೆ ನೌಕರರ ಬೇಡಿಕೆಗಳನ್ನು ೨೦ ದಿನಗಳ ಒಳಗಾಗಿ ಮೂರು ತಿಂಗಳ ಸಂಬಳವನ್ನು ಜಮೆ ಮಾಡಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸಂಯುಕ್ತ ವಸತಿನಿಲಯಗಳ ಸಂಘ(ರಿ) ದ ರಾಜ್ಯ ನಾಯಕರುಗಳಾದ ಶ್ರೀಮತಿ ರಮಾ, ಜಿಲ್ಲಾ ಸಂಚಾಲಕರಾದ ಶ್ರೀಮತಿ ಮಂಜುಳಾ, ತಾಲ್ಲೂಕು ವಸತಿನಿಲಯಗಳ ಸಂಘದ ಅಧ್ಯಕ್ಷರಾದ ಜಿ ಟಿ ತಿಮ್ಮರಾಯಪ್ಪ, ಕಾರ್ಯದರ್ಶಿ ಬಿಜವರ ರವಿಕುಮಾರ್, ಸದಸ್ಯರುಗಳಾದ ತಿಮ್ಮರಾಜಮ್ಮ, ರೇಖಾ, ರಮೇಶ್ ರಂಟವಳಲು, ಗೋವಿಂದರಾಜು, ಜಮುನ, ಲೀಲಾವತಿ, ಜ್ಯೋತಿ, ಗಿರಿಜಮ್ಮ, ಶಂಕರ, ಹಾಗೂ ಎಲ್ಲಾ ನೌಕರರು ಹಾಜರಿದ್ದರು.