Saturday, 14th December 2024

ಜ.8ರಂದು ರಾಜ್ಯಮಟ್ಟದ ಬೃಹತ್ ಸಮಾವೇಶ

ಕಲಬುರಗಿ: ನಗರದ ವೀರಶೈವ ಕಲ್ಯಾಣಮಂಟಪದಲ್ಲಿ ಮುಂದಿನ ವರ್ಷ ಜನವರಿ 8 ರಂದು ಬೆಳಿಗ್ಗೆ 10 ಗಂಟೆಗೆ ವೀರಶೈವ ಲಿಂಗಾಯತ ಎಲ್ಲ ಒಳ ಪಂಗಡಗಳ ವಧು- ವರರ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ವೀರಶೈವ ಸಮಾಜದ ಜಿಲ್ಲಾ ಧ್ಯಕ್ಷ ಅರುಣಕುಮಾರ ಪಾಟೀಲ್ ಕೂಡಲ ಹಂಗರಗಾ ತಿಳಿಸಿದರು.

ನಗರದ ಪತ್ರಿಕಭವನದಲ್ಲಿ ಸುದ್ದಿಗೋಷ್ಠಿನ್ನು ಉದ್ದೇಶಿಸಿ ಮಾತನಾಡಿದ ಅವರು, ಈಗಾಗಲೇ 100 ಕ್ಕೂ ಹೆಚ್ಚು ಜನರು ನೋಂದಣಿ ತಮ್ಮ ತಮ್ಮ ಹೆಸರು ಮಾಡಿಕೊಂಡಿ ದ್ದು, ಜನೆವರಿ 1 ರಂದು ಕೊನೆಯ ದಿನವಾಗಿದೆ. ಈ ಸಮಾವೇಶದಲ್ಲಿ ಭಾಗ ವಹಿಸುವ ಆಸಕ್ತಿಯುಳ್ಳವರು ತಮ್ಮ ಸಂಪೂರ್ಣ ಮಾಹಿತಿಯೊಂದಿಗೆ ಜನೆವರಿ 8 ರಂದು ಬೆಳಿಗ್ಗೆ 10 ಗಂಟೆಗೆ ಸಂವೇಶದ ಸ್ಥಳಕೆ ಆಗಮಿಸಬೇಕು ಎಂದು ಹೇಳಿದರು.

ಸಮಾವೇಶದಲ್ಲಿ ಲಿಂಗಾಯತ ಒಳಪಂಗಡಗಳಾದ ಜಂಗಮ, ಪಂಚಮಸಾಲಿ, ದೀಕ್ಷ, ಆದಿ ಬಣಜಿಗ, ಬಣಗಾರ, ರೆಡ್ಡಿ, ಶಿವಸಿಂಪಿಗೆ, ನೇಕಾರ, ಕುಂಬಾರ, ಹಠಗಾರ, ಮಾಲಗಾರ, ಗಾಣಿಗೇರು ಮುಂತಾದವರು ಅಂದು 500 ಪ್ರವೇಶ ಶುಲ್ಕದೊಂದಿಗೆ ನೋಂದಣಿ ಮಾಡಿಕೊಳ್ಳಬಹುದು ಮತ್ತು veerashaivasamajak.@gmail.com ಮುಖಾಂತರ ಆನ್ಲೈನ್ ನಲ್ಲಿ ಕೂಡ ನೋಂದಣಿ ಮಾಡಿ ಕೊಳ್ಳಬಹುದು ಎಂದು ತಿಳಿಸಿದರು.

ಈ ಕಾರ್ಯಕ್ರಮದ ಉದ್ಘಾಟಕರಾಗಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಮುಖ್ಯಸ್ಥೆ ಮಾತೋಶ್ರೀ ದಾಕ್ಷಾಯಿಣಿ ಅವ್ವಾಜಿ ಆಗಮಿಸಲಿದ್ದಾರೆ.ಮುಗಳಗಾಂವನ ಪೂಜ್ಯ ಸಿದ್ಧಲಿಂಗ ಶಿವಾಚಾರ್ಯರು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಅಲ್ಲದೆ ಸ್ಥಳೀಯ ಅನೇಕ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಪತ್ರಿಕಾಗೋಷ್ಟಿಯಲ್ಲಿ ವೀರೇಶ್ ಶ್ರೀಗಂಧ ಮಠ, ಕಲ್ಯಾಣರವಾ ಯಲಮಡಗಿ, ಶ್ರೀಶೈಲ್ ಗೂಳಿ, ಕಲ್ಯಾಣರಾವ್ ಪಾಟೀಲ್ ಚಂದ್ರಶೇಖರ ಕಕ್ಕೇರಿ ಸೇರಿದಂತೆ ಇತರರಿದ್ದರು.