Sunday, 15th December 2024

ಗ್ರಾಮ ಪಂಚಾಯತಿ ನೌಕರರ 3ನೇ ತಾಲ್ಲೂಕು ಸಮ್ಮೇಳನ 

ಚಿಕ್ಕನಾಯಕನಹಳ್ಳಿ: ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ನೌಕರರ  3ನೇ ತಾಲ್ಲೂಕು ಸಮ್ಮೇಳನ  ಗುರುವಾರ ನಡೆಯಿತು. ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ನೌಕರರ ಸಂಘ ಹಾಗೂ ಸಿಐಟಿಯು ಪಟ್ಟಣದ ಸ್ತ್ರೀ ಶಕ್ತಿ ಭವನದಲ್ಲಿ ಸಮಾರಂಭ ವನ್ನು ಆಯೋ ಜಿಸಿತ್ತು.
ಇಓ ವಸಂತ್ ಕುಮಾರ್ ಉದ್ಘಾಟನೆ ಯನ್ನು ದೀಪ ಹಚ್ಚುವ ಮೂಲಕ ನೇರವೆರಿಸಿ ಮಾತಾನಾಡುತ್ತಾ ಕಟ್ಟಕಡೆಯ ಯಲ್ಲಿರುವ ಗ್ರಾಮ ಪಂಚಾಯತಿಗಳು ಆಡಳಿತದ ಹೃದಯ ಭಾಗವದ್ದರಿಂದ ಸರ್ವರ ಎಳಿಗೆಗಾಗಿ ದುಡಿಯುತ್ತಿರುವ ನೌಕರರು ಶ್ರದ್ದೆ, ನಿಷ್ಟೆ ಯಿಂದ ಪ್ರಮಾಣಿಕಾವಾಗಿ ಕೆಲಸ ಮಾಡಬೇಕು.ನಂತರ ಬೇಡಿಕೆಗಳನ್ನು ಸಂಘಟನೆ ಮೂಲಕ ಈಡೆರಿಸಿಕೊಳ್ಳಬೇಕೆಂದರು.
ಮುಂದುವರೆದು ಮತಾನಾಡಿ ತಾಲ್ಲೂಕಿನಲ್ಲಿ ನೌಕರರ ಬಾಕಿ ಇರುವ ವೇತನವನ್ನು ಹಂತ-ಹಂತವಾಗಿ ನೀಡಲಾಗುವುದು. ಉಳಿದಂತೆ ಪ್ರಸ್ತುತ ಹೆಚ್.ಆರ್.ಎಂ.ಎಸ್ ನಡೆಯುತ್ತಿದ್ದು ಇದರಲ್ಲಿ ಎಲ್ಲಾ ನೌಕರರ ಕುಟುಂಬದ ಡೇಟವನ್ನು ದಕ್ಖಲಿಸ ಲಾಗುತ್ತಿದೆ ಎಲ್ಲಾರು ಸದುಪಯೋಗಪಡಿಸಿಕೂಳ್ಳಲು ಕರೆ ನೀಡಿದರು.
ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ  ನಾಗೇಶ್ ಮತಾನಾಡಿ  ಕನಿಷ್ಟ ವೇತನವನ್ನು ಎಲ್ಲಾ ನೌಕರರಿಗೆ ಪ್ರತಿ  ತಿಂಗಳು ವಿತರಿ ಸಲು ಆರ್.ಡಿ.ಪಿ.ಆರ್ ಇಲಾಖೆ  ಒಟ್ಟು 1218 ಕೋಟಿಯನ್ನು ರಾಜ್ಯದ ಎಲ್ಲಾ ಗ್ರಾಮಪಂಚಾಯತಿಗಳಿಗೆ ಬಿಡುಗಡೆ ಮಾಡಿದೆ ಹಾಗಾಗಿ ನೌಕರರ ವೇತನಕ್ಕೆ ತೂಂದರೆ ಇಲ್ಲ.ಪಿ..ಡಿ.ಓಗಳು ಆದ್ಯತೆ ಮೇಲೆ ನೀಡಬೇಕೆಂದರು. ಅಂಗನಾವಾಡಿ ನೌಕರರ ಸಂಘದ ಮುಖಂಡರಾದ ಪುಷ್ಪ ಮತಾನಾಡಿ ದುಡಿಯುವ ನೌಕರರು ಒಂದಾಗಿ ಹೋರಾಟ ಮಾಡಿದರೆ ನಮ್ಮಗಳ ಬದುಕು ಉತ್ತಮವಾಗುತ್ತದೆ ಎಂದರು.
ಸಂಘದ ಜಿಲ್ಲಧ್ಯಕ್ಷ ಎನ್ ಕೆ.ಸುಬ್ರಮಣ್ಯ ಮತಾನಾಡಿ ಆಳುವ ಸರ್ಕಾರಗಳು ಕಾರ್ಮಿಕವಿರೋಧಿ ನೀತಿಗಳ ಭಾಗವಾಗಿ ಇರುವ ಕಾನೂನುಗಳನ್ನು ಬಂಡವಾಳಗಾರ ಪರವಾಗಿ ತಿದ್ದುಪಡಿ ಮಾಡುತಿವೆ.ಇದರಿಂದ ದೇಶದ ಜನತೆಯನ್ನು ಸಂಕಷ್ಟಕೆ ದೂಡುತ್ತಿವೆ. ಆದ್ದರಿಂದ ನೌಕರರು  ವೇತನ ,ಖಾಯಂಗಿಂತ ದೇಶ ಉಳಿಸುವ ಮಾಗುವಾಗಬೇಕೆಂದರು. ಪೂರ್ಣಮ್ಮ, ಮುನಿಸಿಪಲ್ ಕಾರ್ಮಿಕರ ಮುಖಂಡ ನಮ್ಮ ಬೇಡಿಕೆಗಳು ಈಡೇರಿಗೆ ಹೋರಾಟದಿಂದ ಮಾತ್ರ ಸಾಧ್ಯವೆಂದರು.
ಸಭೆಯ ಅಧ್ಯಕ್ಷತೆಯನ್ನು ಶಂಕರಪ್ಪ ವಹಿಸಿದ್ದರು.ಆರಂಭದಲ್ಲಿ ಪುಪ್ಷ ಸಂಗಡಿಗರಿಂದ ಪ್ರಾರ್ಥನೆ ಮಾಡಿದರು .ಮಂಜುನಾಥ  ಆರ್  ಸ್ವಾಗತಿಸಿದರು ಛಾಯಾದೇವಿ ವಂದನಾರ್ಪಣೆ ಮಾಡಿದರು  ಮುಂದಿನ 3 ವರ್ಷಕ್ಕೆ ಅಧ್ಯಕ್ಷರಾಗಿ ಶಂಕರಪ್ಪನವರು & ಪ್ರಧಾನ ಕಾರ್ಯದರ್ಶಿಯಾಗಿ ಮಂಜುನಾಥ ಆರ್  ಖಜಾಂಚಿಯಾಗಿ ಪುಟ್ಟರಾಜು M H ಅವರನ್ನು ಉಪಾಧ್ಯಕ್ಷರು ಸರ್ವ ಸದಸ್ಯರ ಸಮ್ಮುಖದಲ್ಲಿ ಆಯ್ಕೆ ಮಾಡಲಾಯಿತು.