Sunday, 15th December 2024

ಸಮ್ಮೇಳದಲ್ಲಿ ಅತಿಥಿಗಳಿಗೆ ಅಗೌರವ ಮುಖಂಡರಿ0ದ ಆರೋಪ

ಬಸವನಬಾಗೇವಾಡಿ: ತಾಲೂಕಿನ ಮನಗೂಳಿಯಲ್ಲಿ ಡಿ.೨೫ರಂದು ನಡೆದ ೯ನೇ ಕನ್ನಡ ಸಾಹಿತ್ಯ ಸಮ್ಮೇಳದಲ್ಲಿ ಅತಿಥಿಗಳಿಗೆ ಅಗೌರವ ತರಿಸುವ ಕಾರ್ಯ ಅಸಮದಾನ ತರಿಸಿದೆ ಎಂದು ರೈತ ಮುಖಂಡ ಅರವಿಂದ ಕುಲಕರ್ಣಿ ಶರಣ ಸಾಹಿತ್ಯ ಪರಿಷತ್ ತಾಲೂಕಾ ಅಧ್ಯಕ್ಷ ವಿ,ಬಿ ಮರ್ತುರ ಆರೋಪಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಸಂಜೆ ಜಂಟಿ ಸುದ್ದುಗೋಷ್ಠಿಯಲ್ಲಿ ಮಾತನಾಡಿದ ಅವರು ಕನ್ನಡ ನಾಡು ನುಡಿ ಸಾಹಿತ್ಯದ ಶ್ರೇಷ್ಠತೆ ಸಾರುವುದರೊಂದಿಗೆ ಕನ್ನಡ ಉಳಿಸಿ ಬೆಳೆಸುವ ಜ್ಞಾನವಿರಬೇಕಾದ ಸಮ್ಮೆಳನದಲ್ಲಿ ಮುಖ್ಯ ಗೋಷ್ಠಿಗಳೆ ನಡೆಯಲಿಲ್ಲ, ಮಹಿಳಾ ಗೋಷ್ಠಿಯಲ್ಲಿ ಉಪನ್ಯಾಸಕರಿಗೆ ಐದು ನಿಮಿಷ ಮಾತ್ರ ಕಾಲಾವ ಕಾಶ ನೀಡಲಾಗಿತ್ತು. ಕವಿಗೋಷ್ಠಿ ನಡೆದ ಸಂಧರ್ಭದಲ್ಲಿ ವೇದಿಕೆಯಲ್ಲಿ ಸನ್ಮಾನದ ಭರಾಟೆ ಜೋರಾಗಿತ್ತು, ಶರಣ ಗೋಷ್ಠಿಯಲ್ಲಿ ಉಪನ್ಯಾಸಕರ ಭಾಷಣಕ್ಕೆ ಅವಕಾಶ ಕೊಡಲಿಲ್ಲ, ಈ ವಿಷಯ ಕುರಿತು ಕಸಪಾ ಪದಾಧಿಕಾರಿಗಳನ್ನ ಪ್ರಶ್ನೀಸಿದರೆ ಸಮರ್ಪಕ ಉತ್ತರ ಸಿಗಲಿಲ್ಲ ಎಂದು ಹೇಳಿದರು.

ಸಮ್ಮೇಳನದ ಆಮಂತ್ರಣ ಪತ್ರಿಕೆಯಲ್ಲಿ ಹಲವಾರು ದೋಷಗಳನ್ನು ಮಾಡುವ ಮೂಲಕ ಕನ್ನಡದ ಕಗ್ಗೊಲೆಯಾಗಿದೆ, ಕನ್ನಡ ಸಾಹಿತ್ಯ ಪರಿಷತ್ತಿನ ಅಜೀವ ಸದಸ್ಯರಿಗೆ ಆಮಂತ್ರಣ ಪತ್ರಿಕೆ ತಲುಪಿಲ್ಲ, ಸಮ್ಮೆಳನ ಯಶಸ್ವಿಗೊಳಿಸಲು ಸಾಕಷ್ಟು ಪ್ರಸಾರ ನಡೆದಿತ್ತು ಆದರೆ ಸಮ್ಮೇಳನದ ಉದ್ದೇಶ ಈಡೇರಿಸಲು ವಿಫಲವಾಗಿದೆ, ಸಮ್ಮೇಳನದಲ್ಲಿ ಸನ್ಮಾನಕ್ಕೆ ಹೆಚ್ಚಿನ ಆದ್ಯತೆ ನೀಡಿ ದಂತಿತ್ತು.

ಸಮ್ಮೇಳನದಲ್ಲಿ ಕಸಪಾ ಜಿಲ್ಲಾಧ್ಯಕ್ಷರು ಸರ್ವಾಧಿಕಾರಿ ಧೋರಣೆ ತೊರುವ ಮೂಲಕ ಸಮ್ಮೇಳನಕ್ಕೆ ಕಪ್ಪು ಚುಕ್ಕಿ ತಂದಿದ್ದಾರೆ, ಜಿಲ್ಲಾಧ್ಯಕ್ಷರು ಕ್ಷೇಮೆ ಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಕಸಪಾ ನಿಕಟಪೂರ್ವ ಅಧ್ಯಕ್ಷ ಆರ್,ಜೆ, ಅಳ್ಳಗಿ, ವಿವೇಕಾನಂದ ಕಲ್ಯಾಣಶೆಟ್ಟಿ, ಯುವರಾಜ ಮಾದನಶೆಟ್ಟಿ, ಮುಖಂಡರಾದ ಮಲ್ಲಿಕಾರ್ಜುನ ಅವಟಿ, ಎಸ್,ಬಿ, ಮುತ್ತಗಿ, ಎಸ್ ಆಯ್ ಮನಗೂಳಿ, ವೈ,ಕೆ ಪತ್ತಾರ, ಬಂದೇನಮಾಜ ವಾಲಿಕಾರ, ಶ್ರೀಶೈಲ ಶಿಗುಪ್ಪಿ ಸೇರಿದಂತೆ ಮುಂತಾದವರು ಇದ್ದರು.