Thursday, 12th December 2024

ಸೋಮಶೇಖರ ಎಸ್ ಲಾಡ್ಲಾಪೂರ ಅವರಿಗೆ ಶ್ರೀಗಳಿಂದ ಸನ್ಮಾನ

ಚಿತ್ತಾಪೂರ: ತಾಲೂಕಿನ ನಾಲವಾರ ಗ್ರಾಮದ ವೀರಶೈವ ಸಮಾಜದ ಯುವ ಮುಖಂಡ ಸೋಮಶೇಖರ ಎಸ್ ಲಾಡ್ಲಾಪೂರ ನಾಲವಾರ ಅವರಿಗೆ ಕರ್ನಾಟಕ ಸಾಂಸ್ಕೃತಿಕ ಪರಿಷತ್ ವತಿಯಿಂದ ಬೆಂಗಳೂರು ನಗರದಲ್ಲಿ ಕರ್ನಾಟಕ ಸಾಂಸ್ಕೃತಿಕ ವಿಶ್ವ ವಿಧ್ಯಾಲಯದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಸತ್ಕರಿಸಿತು.

ಅದರ ಪ್ರಯುಕ್ತವಾಗಿ ಗುರುವಾರ ಜಗದ್ಗುರ ನಡೆದಾಡುವ ದೇವರು ಶ್ರೀ ಡಾ.ಪರಮ ಪೂಜ್ಯ ಸಿದ್ದತೋಟೇಂದ್ರ ಶಿವಾಚಾರ್ಯ ಮಾಹಾಸ್ವಾಮಿಗಳು ಸೋಮಶೇಖರ ಅವರನ್ನು ಸನ್ಮಾನಿಸಿ ಗೌರವಿಸಿದರು. ಮುಂಬರುವ ದಿನಗಳಲ್ಲಿ ಇನ್ನಷ್ಟು ಸಮಾಜಮುಖಿ ಕೆಲಸ ಮಾಡುವಂತೆ ಆಶಿರ್ವದಿಸಿದರು.