Saturday, 14th December 2024

ಸಂಡೂರು ಶಾಸಕ ಈ.ತುಕಾರಾಂ ಏ.12 ರಂದು ನಾಮಪತ್ರ ಸಲ್ಲಿಕೆ

ಳ್ಳಾರಿ: ಲೋಕಸಭೆ ಚುನಾವಣೆಯ ಬಳ್ಳಾರಿ ಎಸ್ ಟಿ ಮೀಸಲು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಸಂಡೂರು ಶಾಸಕ ಈ.ತುಕಾರಾಂ ಅವರು ಏ.12 ರಂದು ನಾಮಪತ್ರ ಸಲ್ಲಿಸುವುದಾಗಿ ತಿಳಿಸಿದರು.

ನಗರದ ಕನಕ ದುರ್ಗಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ವರಿಷ್ಠರು ನನ್ನನ್ನು ಬಳ್ಳಾರಿ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ್ದಾರೆ.

ಬಹುಶ ಇಂದು ಅಥವಾ ನಾಳೆ ಅಧಿಕೃತವಾಗಿ ಹೆಸರು ಘೋಷಣೆಯಾಗುವ ಸಾಧ್ಯತೆಯಿದೆ. ಲೋಕಸಭೆ ಚುನಾವಣೆ ನಿಮಿತ್ತ ಪಕ್ಷ ಕೈಗೊಂಡಿರುವ ಸರ್ವೆಯಲ್ಲಿ ನನ್ನ ಮತ್ತು ನನ್ನ ಮಗಳ ಹೆಸರು ಬಂದಿದೆ. ಹಾಗಾಗಿ ಪಕ್ಷದ ಹೈಕಮಾಂಡ್ ನನ್ನನ್ನು ಸ್ಪರ್ಧಿಸು ವಂತೆ ಸೂಚಿಸಿದೆ ಎಂದು ಸ್ಪಷ್ಟಪಡಿಸಿದರು.

ಮಾಜಿ ಸಚಿವ, ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಬಿಜೆಪಿ ಸೇರ್ಪಡೆಯಿಂದ ಕಾಂಗ್ರೆಸ್ ಯಾವುದೇ ಪರಿಣಾಮ ಬೀರಲ್ಲ. ಹಿಂದೆ ರಿಪಬ್ಲಿಕ್ ಆಪ್ ಬಳ್ಳಾರಿ ಎಂದು ಕರೆಯಲಾಗುತ್ತಿದ್ದ 2008 ರಲ್ಲಿ 9 ವಿಧಾನಸಭೆ ಕ್ಷೇತ್ರಗಳಲ್ಲಿ 8 ಬಿಜೆಪಿ ಗೆದ್ದಿತ್ತು, ಸಂಡೂರು ಒಂದು ಕ್ಷೇತ್ರದಲ್ಲಿ ನಾನೊಬ್ಬನೇ ಗೆದ್ದಿದ್ದೆ. ಹಾಗಾಗಿ ಎಲ್ಲ ರೀತಿಯ ಅನುಭವಗಳೂ ಆಗಿವೆ ಎಂದರು.