Saturday, 14th December 2024

ತಮ್ಮ ರಾಜಕೀಯ ನಿವೃತ್ತಿ ಹಿಂಪಡೆದ ಎಸ್.ಅಂಗಾರ

ಸುಳ್ಯ: ನೋವಿನಿಂದ ರಾಜಕೀಯ ನಿವೃತ್ತಿಯನ್ನು ಪಡೆಯುತ್ತಿರುವುದಾಗಿ ಘೋಷಣೆ ಮಾಡಿದ್ದೆನು. ಅಭ್ಯರ್ಥಿಯ ಆಯ್ಕೆಯಲ್ಲಿ ಯಾವುದೇ ಅಸಮಾ ಧಾನವಿಲ್ಲ. ಭಾಗೀರಥಿಯವರ ಗೆಲುವಿಗೆ ನೇತೃತ್ವ ನಾನೇ ವಹಿಸುತ್ತೇನೆ ಎಂದು ಬಿಜೆಪಿ ನಾಯಕ ಎಸ್ ಅಂಗಾರ ತಮ್ಮ ರಾಜಕೀಯ ನಿವೃತ್ತಿಯನ್ನು ಹಿಂಪಡೆದಿದ್ದಾರೆ.

ಈಗಾಗಲೇ ರಾಜ್ಯ ವಿಧಾನಸಭಾ ಚುನಾವಣೆಗೆ ಬಿಜೆಪಿಯಿಂದ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದೆ. ಮೊನ್ನೆ ನಾನು ರಾಜಕೀಯ ನಿವೃತ್ತಿಯ ಹೇಳಿಕೆಯನ್ನು ನೀಡಿದ್ದೆನು. ಅದು ಆ ತತ್ ಕ್ಷಣದ ನೋವಾಗಿತ್ತು. ಇಂದು ನನ್ನು ಹೇಳಿಕೆಯನ್ನು ಹಿಂಪಡೆಯುತ್ತಿದ್ದೇನೆ ಎಂದರು.

ಈ ಹಿಂದಿನಂತೆಯೇ ರಾಜಕೀಯದಲ್ಲಿ ಸಕ್ರೀಯವಾಗಿರುತ್ತೇನೆ. ಅಲ್ಲದೇ ನಮ್ಮ ಬಿಜೆಪಿಯ ಅಭ್ಯರ್ಥಿ ಭಾಗೀರಥಿ ಯವರ ಗೆಲುವಿನ ಜವಾಬ್ದಾರಿಯನ್ನು ನಾನೇ ವಹಸಿಕೊಳ್ಳುವೆ ಎಂಬುದಾಗಿ ತಿಳಿಸಿದರು.

ನನಗೆ ಅಭ್ಯರ್ಥಿಯ ಆಯ್ಕೆಯ ವಿಚಾರದಲ್ಲಿ ಯಾವುದೇ ಅಸಮಾಧನಾವಿಲ್ಲ. ತತ್ ಕ್ಷಣ ನಾನು ರಾಜಕೀಯ ನಿವೃತ್ತಿಯನ್ನು ಘೋಷಿಸುವ ಮೂಲಕ ನನ್ನ ನೋವು ಹೊರಗೆ ಹಾಕಿದ್ದೆನು. ಆದ್ರೇ ಬಳಿಕ ಯೋಚಿಸಿದಾಗ ನನ್ನ ನಿರ್ಧಾರ ಅರಿವು ನನಗೆ ಆಯ್ತು. ಹೀಗಾಗಿ ನನ್ನ ಆ ಹೇಳಿಕೆ ಹಿಂಪಡೆಯುತ್ತಿದ್ದೇನೆ ಎಂದರು.