Saturday, 14th December 2024

ಪ್ರೌಡ ಶಾಲಾ ಸಹ ಶಿಕ್ಷಕರ ಸಂಘಕ್ಕೆ‌ ಚುನಾಯಿತ ಪದಾಧಿಕಾರಿಗಳಿಗೆ ಸನ್ಮಾನ

ಕಲಬುರಗಿ: ಕರ್ನಾಟಕ ರಾಜ್ಯ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಕಲಬುರಗಿ ಜಿಲ್ಲಾ ಘಟಕದ‌ ಪದಾಧಿಕಾರಿಗಳ ಚುನಾವಣೆ ಯಲ್ಲಿ ಚುನಾಯಿತ ಮಹೇಶ ಹೂಗಾರ ನೇತೃತ್ವದ ಸಂಘದ ಪದಾಧಿಕಾರಿಗಳಿಗೆ‌ ಕಲಬುರಗಿ ನಗರದ ಜಗತ್ ವೃತ್ತದಲ್ಲಿರುವ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಕಚೇರಿಯಲ್ಲಿ‌ ಆತ್ಮೀಯವಾಗಿ ಸನ್ಮಾನಿಸಲಾಯಿತು.

2022-27 ಅವಧಿಗೆ ಅಧ್ಯಕ್ಷರಾಗಿ ಮಹೇಶ ಹೂಗಾರ, ಉಪಾಧ್ಯಕ್ಷರಾಗಿ ರಾಘವೇಂದ್ರ ರೆಡ್ಡಿ, ಪ್ರಧಾನ ಕಾರ್ಯದರ್ಶಿಯಾಗಿ ಜಮೀಲ್ ಇಮ್ರಾನ್ ಅಹ್ಮದ್, ಖಜಾಂಚಿಯಾಗಿ ಜಿ.ಜಿ. ವಣಿಕ್ಯಾಳ, ಸಹ ಕಾರ್ಯದರ್ಶಿಯಾಗಿ ದೇವೇಂದ್ರ ಬಿರಾದಾರ, ಸಂಘಟನಾ ಕಾರ್ಯದರ್ಶಿ ಯಾಗಿ ಆಯ್ಕೆಯಾದ ಮಹ್ಮದ್ ರಫೀಕ್ ಅವರನ್ನು ಜಿಲ್ಲಾಧ್ಯಕ್ಷ ರಾಜು ಲೇಂಗಟಿ ನೇತೃತ್ವದ ಪದಾಧಿಕಾರಿಗಳು ಆತ್ಮೀಯವಾಗಿ ಸನ್ಮಾನಿಸಿ ಶುಭ ಕೋರಿದರು.

ಈ ಸಂದರ್ಭದಲ್ಲಿ ನೌಕರರ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳಾದ ಅಬ್ದುಲ್ ಅಜೀಮ್, ಬಾಬು ಮೌರ್ಯ, ನಿಜಲಿಂಗಪ್ಪ ಕೊರಳ್ಳಿ, ನಾಗೇಂದ್ರಪ್ಪ ಅವರಾದಿ, ಮಲ್ಲಿನಾಥ ಮಂಗಲಗಿ, ಸಿದ್ದಲಿಂಗಯ್ಯ ಮಠಪತಿ, ಸತೀಷ್ ಸಜ್ಜನ್, ರವಿ ಮಿರಸ್ಕರ್, ಗುರು ಲಿಂಗಪ್ಪ ಪಾಟೀಲ, ಚಿತ್ತಾಪೂರ ತಾಲೂಕಾಧ್ಯಕ್ಷ ಬಸವರಾಜ ಬಳೂಂಡಗಿ, ಹಣಮಂತ ಮರಡಿ ಸೇರಿದಂತೆ ಶಿಕ್ಷಣ ಇಲಾಖೆಯ ನೌಕರರು ಇದ್ದರು.