Sunday, 24th November 2024

School Begin: ಇಂದಿನಿಂದ ಶಾಲೆಗಳು ಪುನರಾ ರಂಭ; ಪಾಳು ಬಿದ್ದ ಕೊಂಪೆಯಂತಾಗಿರುವ ಪೂಲವಾರಪಲ್ಲಿ ಸರಕಾರಿ ಶಾಲೆ

ಬಾಗೇಪಲ್ಲಿ: ತಾಲೂಕಿನ ಕಸಬಾ ಹೋಬಳಿ ವ್ಯಾಪ್ತಿಯ ಪೂಲವಾರಪಲ್ಲಿ ಗ್ರಾಮವು ರಾಷ್ಟ್ರೀಯ ಹೆದ್ದಾರಿ 44 ರಿಂದ ಸುಮಾರು 2 ಕಿ.ಮೀ ದೂರದಲ್ಲಿರುವ ಹಾಗೂ ಹೆದ್ದಾರಿಗೆ ನೇರ ಸಂಪರ್ಕವಿರುವ ಗ್ರಾಮವಾಗಿದೆ. ಈ ಗ್ರಾಮದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇದ್ದು, ಶಾಲೆಯ ಆವರಣದಲ್ಲಿ ಅದ್ವಾನಗಳೇ ಹೆಚ್ಚು ಕಾಡುತ್ತವೆ. ತರಗತಿ ಕೊಠಡಿಗಳು ಸುತ್ತಲೂ ಗಿಡಗಂಟಿಗಳು, ಪೊದೆಗಳು ಬೃಹದಾಕಾರವಾಗಿ ಬೆಳೆದಿವೆ. ಅಷ್ಟೇ ಅಲ್ಲದೆ ಕಾಡಲ್ಲಿ ಅಡ್ಡ ದಿಡ್ಡಿ ಬೆಳೆದಂತೆ ಬಳ್ಳಿಗಳು, ಕಳೆ ಗಿಡಗಳು ಹರಡಿಕೊಂಡಿವೆ.

ಇನ್ನು ಕೆಲ ಶಾಲಾ ಕೊಠಡಿಗಳು ಹಾಗೂ ಶೌಚಾಲಯಗಳ ಸ್ಥಿತಿಯಂತೂ ದೇವರೇ ಬಲ್ಲ,ಆಗೊ ಈಗೋ ಬೀಳುವ ಹಂತಕ್ಕೆ ತಲುಪಿವೆ. ಮೋಲ್ಡಿಂಗ್ ಕಿತ್ತು ಬರುತ್ತಿದ್ದು, ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಮತ್ತಷ್ಟು ಆತಂಕ ಸೃಷ್ಟಿಸಿವೆ. ಶೌಚಾಲಯಗಳ ನಿರ್ವಹಣೆ ಇಲ್ಲದೆ ಬಯಲು ಶೌಚವನ್ನು ವಿದ್ಯಾರ್ಥಿಗಳು ನೆಚ್ಚಿಕೊಂಡಿದ್ದಾರೆ. ಹೀಗೆ ಹತ್ತು ಹಲವು ಸಮಸ್ಯೆಗಳ ನಡುವೆಯೇ ಅರ್ಧವಾರ್ಷಿಕ ಪರೀಕ್ಷೆಗಳನ್ನು ಮುಗಿಸಿ, ದಸರಾ ರಜೆಗಳನ್ನು ಕಳೆದ ವಿದ್ಯಾರ್ಥಿಗಳು ಮತ್ತೆ ಶಾಲೆಗಳಿಗೆ ಹೊರಡುಬೇಕಿದೆ. ಅದರಲ್ಲೂ ಈ ಪೂಲವಾರಪಲ್ಲಿ ಶಾಲೆಯು ಒಂದು ಮಟ್ಟಿಗೆ ಯಾದರೂ ಶಾಲಾ ವಾತವರಣ ನಿರ್ಮಾಣವಾಗು ಮತ್ತೆ ಕೆಲವು ತಿಂಗಳೇ ಗತಿಸಬೇಕೇನೊ ಅನಿಸುತ್ತಿದೆ. ಒಟ್ಟಿನಲ್ಲಿ ಬಡ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸರಕಾರಗಳು ಕೊಟ್ಯಾಂತರ ರೂಪಾಯಿಗಳು ಖರ್ಚು ಮಾಡುತ್ತಿದೆಯಾದರೂ, ಪ್ರಗತಿ ಮಾತ್ರ ಸಾಧಿಸಲಾಗುತ್ತಿಲ್ಲ.

ಈ ಶಾಲೆಯ ದುಸ್ಥಿತಿಯ ಬಗ್ಗೆ ಸಿಪಿಎಂ ಮುಖಂಡ ಚನ್ನರಾಯಪ್ಪರವರು ಮಾತನಾಡಿ, ತಾಲೂಕಿನಲ್ಲಿ ದಲಿತ, ಕಾರ್ಮಿಕ ,ಬಡವರ ಮಕ್ಕಳು ಓದುತ್ತಿರುವ ಶಾಲೆಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡದೆ ನಿರ್ಲಕ್ಷಿಸ ಲಾಗುತ್ತಿದೆ. ಇಲ್ಲಿನ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಈ ಶಾಲೆಯ ದುಸ್ಥಿತಿಯೇ ಕೈಗನ್ನಡಿಯಾಗಿದೆ. ಹಾಗಾಗಿ ಕೂಡಲೇ ಸಂಬAಧಪಟ್ಟವರು ಇದನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ: Karnataka Rain: ಮುಂದಿನ 3 ದಿನ ಬೆಂಗಳೂರು ಸೇರಿ ಹಲವೆಡೆ ಅಬ್ಬರಿಸಲಿದೆ ಹಿಂಗಾರು ಮಳೆ; ಯೆಲ್ಲೋ ಅಲರ್ಟ್‌ ಘೋಷಣೆ