Saturday, 5th October 2024

ಪ.ಜಾ/ಪ.ಪಂ ನೇಮಕಾತಿಗೆ 371(ಜೆ) ಕಲಂ ಮಾನದಂಡ ಅನುಸರಿಸಿ: ಲಕ್ಷ್ಮಣ ದಸ್ತಿ

ಕಲಬುರಗಿ: ಹಿಂದುಳಿದ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಜಾರಿಗೆ ಬಂದಿರುವ ಸಂವಿಧಾನದ 371(ಜೆ) ಕಲಂ ತಿದ್ದುಪಡಿಯ ಅಡಿ ನೇಮಕಾತಿಗಳು ಮತ್ತು ಮುಂಬಡ್ತಿಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ನೇಮಕಾತಿ, ಮುಂಬಡ್ತಿಗಳ ಮಾನದಂಡ ದಂತೆ ನಡಸಿದರೆ ಮಾತ್ರ ಕಲ್ಯಾಣ ಕರ್ನಾಟಕದ ನಿರುದ್ಯೋಗಿ ಯುವಕರಿಗೆ ನ್ಯಾಯ ಸಿಗಲು ಸಾಧ್ಯ ಎಂದು ಹಿರಿಯ ಹೋರಾಟ ಗಾರ ಲಕ್ಷ್ಮಣ ದಸ್ತಿ ಹೇಳಿದರು.

ಸರಕಾರ ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ ತಕ್ಷಣ ಕ್ರಮ ತೆಗೆದುಕೊಳ್ಳಬೇಕು, ಅದರಂತೆ ವಿಶೇಷ ಸ್ಥಾನಮಾನದ ಪರಿಣಾಮಕಾರಿ ಅನುಷ್ಠಾನಕ್ಕೆ ಮತ್ತು ಕಲ್ಯಾಣ ಕರ್ನಾಟಕದ ರಚನಾತ್ಮಕ ಪ್ರಗತಿಗೆ ಸರಕಾರ ಪ್ರತ್ಯೇಕ ಮಂತ್ರಾಲಯ ಸ್ಥಾಪನೆ ಮಾಡಬೇಕು.

ಈ ಬಗ್ಗೆ ಗಂಭೀರವಾಗಿ ಅಧ್ಯಯನ ಮಾಡಿಯೆ ನಾವು ಯಡಿಯೂರಪ್ಪನವರು ಮುಖ್ಯಮಂತ್ರಿಗಳಿದ್ದಾಗ ಬೇಡಿಕೆ ಇಟ್ಟಿದೇವು, ಇದಕ್ಕೆ ಆಗಿನ ಮುಖ್ಯಮಂತ್ರಿಗಳು ಸಹ ಒಪ್ಪಿಕೊಂಡು ದಿನಾಂಕ 2019 ಸೆಪ್ಟೆಂಬರ್ 17 ರಂದು ಅಧಿಕೃತವಾಗಿ ಘೋಷಣೆ ಮಾಡಿರುರುವಂತೆ ಪ್ರಸ್ತುತ ಸರಕಾರ ತಕ್ಷಣ ಸ್ಪಂದಿಸಿ ಕಲ್ಯಾಣಕ್ಕೆ ನ್ಯಾಯ ಒದಗಿಸಬೇಕೆಂದು ಕಲ್ಯಾಣ ಕರ್ನಾಟಕ ಜನಪರ ಸಂಘರ್ಷ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಲಕ್ಷ್ಮಣ ದಸ್ತಿ ಯವರು ಸರಕಾರಕ್ಕೆ ಒತ್ತಾಯಿಸಿದರು.

ಸಭೆಯಲ್ಲಿ ಸಮಿತಿಯ ಮುಖಂಡರು ಮತ್ತು ಚಿಂತಕರು ಹಾಗು ಫಲಾನುಭವಿಗಳು ಭಾಗವಹಿಸಿದ್ದರು. ಸಮಿತಿಯ ಮುಖಂಡರಾದ ಡಾ.ಮಾಜಿದ ದಾಗಿ, ಬಿ.ಬಿ.ನಾಯಕ ಲಿಂಗರಾಜ ಸಿರಗಾಪೂರ, ಶಿವಲಿಂಗಪ್ಪ ಭಂಡಕ, ಜ್ಞಾನಮಿತ್ರ ಶಾಮವೆಲ್, ಡಾ.ಭದ್ರಶೆಟ್ಟಿ, ಅಬ್ದುಲ್ ರಹೀಮ್, ಅಸ್ಲಮ್ ಚೌಂಗೆ, ರಾಜು ಜೈನ್, ಡಾ.ಗಾಂಧಿಜೀ ಮೋಳಕೇರೆ, ಪ್ರವೀಣ್ ಹರಿದಾಸ, ಬೀಮರಾಯ ಕಂದಳ್ಳಿ, ಶಿವಯ್ಯಾ ಮಠಪತಿ, ಶಿವಕುಮಾರ ಬಿರಾದಾರ್, ವಿನೋದ ಪಾಟೀಲ, ಎಂ ಬಿ ನಿಂಗಪ್ಪ, ಮೊಖಬೂಲ್ ಪಟೇಲ್, ಬಾಬಾ ಫಕ್ರೋದ್ದಿನ್, ಶರಣು ನೆಲೋಗಿ, ವಾಹಿದಾ ಬೇಗಂ ಮಾತ್ನಾಡಿ ಸಲಹೆಗಳು ನೀಡಿದರು.

ಸಭೆಯಲ್ಲಿ ಸಮಿತಿಯ ಸದಸ್ಯರು ಹಾಗೂ 371(ಜೆ) ಕಲಂ ಫಲದಿಂದ ಅರ್ಹ ಅಭ್ಯರ್ಥಿಗಳು ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು.