Sunday, 15th December 2024

SeetharamYechury: ಬಾಗೇಪಲ್ಲಿಯಲ್ಲಿ ಮಾರ್ಕ್ಸ್ ವಾದಿ ಸೀತಾರಾಮ ಯೆಚೂರಿಗೆ ಗೌರವ ಸಮರ್ಪಣೆ

ಬಾಗೇಪಲ್ಲಿ: ಮಾಜಿ ರಾಜ್ಯಸಭಾ ಸದಸ್ಯ ಹಾಗೂ ಸಿಪಿಐಎಂ ನಾಯಕ ಸೀತಾರಾಮ ಯೆಚೂರಿ ನಿಧನರಾಗಿರುವ ಸುದ್ದಿ ತಿಳಿಯುತ್ತಿದ್ದಂತೆ ಬಾಗೇಪಲ್ಲಿಯಲ್ಲಿ ಸಿಪಿಐಎಂ ಮುಖಂಡರು ಕಾರ್ಯಕರ್ತರು ಸೇರಿ ಅವರು ನಡೆದುಬಂದ ಹಾದಿಯನ್ನು ಮೆಲುಕು ಹಾಕಿ ಶ್ರದ್ದಾಂಜಲಿ ಸಲ್ಲಿಸಿದರು.

ಸಿಪಿಐಎಂ ಮುಖಂಡ ಅನಿಲ್ ಆವುಲಪ್ಪ ಮಾತನಾಡಿ ತಮ್ಮ ರಾಜಕೀಯ ಜೀವನದುದ್ದಕ್ಕೂ ಪ್ರಗತಿಪರ ಚಿಂತನೆ ಗಳನ್ನು ಅಳವಡಿಸಿಕೊಂಡು ಬಂದಿದ್ದ ಯೆಚೂರಿ ರಾಜ್ಯಸಭೆಯಲ್ಲಿ ಅತ್ಯಂತ ಆಳವಾದ ಅಧ್ಯಯನದಿಂದ ಭಾಷಣ ವನ್ನು ಮಾಡುತ್ತಲೇ ದೇಶದ ಗಮನ ಸೆಳೆಯುತ್ತಿದ್ದವರು ಯೆಚೂರಿ. ಆಗಸ್ಟ್ 12, 1952 ರಂದು ಚೆನ್ನೈನಲ್ಲಿ ಜನಿಸಿದ ಸೀತಾರಾಂ ಯೆಚೂರಿ ಅವರು ಭಾರತೀಯ ರಾಜಕೀಯ ಕ್ಷೇತ್ರದಲ್ಲಿ ಪ್ರಮುಖ ಹೆಸರ. ಸಮ್ಮಿಶ್ರ ರಾಜಕೀಯಕ್ಕೆ ಅವರ ಕಾರ್ಯತಂತ್ರದ ವಿಧಾನ ಮತ್ತು ಮಾರ್ಕ್ಸ್ವಾದದ ತತ್ವಗಳನ್ನು ಅನುಸರಿಸುವ ಮೂಲಕ ಹೆಸರು ಮಾಡಿದ್ದರು ಎಂದರು.

ಇದನ್ನೂ ಓದಿ: Sitaram Yechury Death : ವಿದ್ಯಾರ್ಥಿ ಸಂಘದ ಅಧ್ಯಕ್ಷ ಸ್ಥಾನದಿಂದ ರಾಜ್ಯಸಭಾ ಸದಸ್ಯರಾಗುವ ತನಕ; ಯೆಚೂರಿ ಕುರಿತ ವಿವರಗಳು ಇಲ್ಲಿವೆ

1974ರಲ್ಲಿ ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (ಎಸ್‌ಎಫ್‌ಐ) ಸೇರುವ ಮೂಲಕ ಅವರ ರಾಜಕೀಯ ಜೀವನ ಆರಂಭವಾಯಿತು. ಮೂರು ಬಾರಿ ಜೆಎನ್‌ಯು ವಿದ್ಯಾರ್ಥಿಗಳ ಒಕ್ಕೂಟದ ಅಧ್ಯಕ್ಷರಾಗಿದ್ದರು. ಎಸ್‌ಎಫ್‌ಐ ಅಖಿಲ ಭಾರತದ ಅಧ್ಯಕ್ಷರಾದರು. 1984 ರಲ್ಲಿ ಅವರು ಸಿಪಿಐ (ಎಂ) ಕೇಂದ್ರ ಸಮಿತಿಗೆ ಆಯ್ಕೆಯಾದರು. 1992ರಿಂದ ಮೂರು ದಶಕಗಳ ಕಾಲ ಪಾಲಿಟ್‌ಬ್ಯೂರೊದ ಸದಸ್ಯರಾಗಿದ್ದರು. ತಮ್ಮ ಜೀವನದ ಕೊನೆಯವರೆಗೂ ಪ್ರಗತಿಪರ ಚಳುವಳಿ ಯಲ್ಲಿ ಶ್ರಮಿಸಿ ಸಿದ್ದಾಂತವನ್ನೆ ಉಸಿರಾಗಿರಿಸಿಕೊಂಡು ಜೀವಿಸಿದ್ದರು. ಅಲ್ಪಕಾಲಿಕ ಅನಾ ರೋಗ್ಯದಿಂದ 72ರ ವಯಸ್ಸಿ ನಲ್ಲಿ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದಿರುವುದು ನೋವಿನ ಸಂಗತಿ ಎಂದು ದು:ಖಿಸಿದರು.

ಸೀತಾರಾಮ್ ಯೆಚೂರಿ ಬಾಗೇಪಲ್ಲಿಗೆ ಬಿಡದ ನೆಂಟು : ಸಿಪಿಐಎಂ ಪಕ್ಷದ ರಾಷ್ಟ್ರೀಯ ಪ್ರಧಾನ  ಕಾರ್ಯದರ್ಶಿ ಗಳಾದ ಕಾಂ ಸೀತಾರಾಂ ಯೆಚೂರಿ ಅವರು ಇಂದು ಮಧ್ಯಾಹ್ನ ನಿಧನರಾಗಿದ್ದಾರೆ.

ಸೀತಾರಾಮ್ ಯೆಚೂರಿ ದುಡಿಯುವ ವರ್ಗಕ್ಕೆ ತುಂಬಲಾರದ ನಷ್ಟ ಅವರ ಅಗಲಿಕೆ ಇಡೀ ದೇಶಕ್ಕೆ ಮುಖ್ಯವಾಗಿ ಎಡಪಂಥಿಯ ಚಳುವಳಿಗೆ ತುಂಬಾಲಾರದ ನಷ್ಟವಾಗಿದ್ದು, ವಾಮಪಂಥಿಯ ಹಾಗು ದುಡಿಯುವ ವರ್ಗ, ದಲಿತರ, ರೈತರ, ಮಹಿಳೆಯರು, ಕಾರ್ಮಿಕರ ಪ್ರಜಾಸಮಸ್ಯೆಗಳ ವಿಚಾರಗಳಲ್ಲಿ ಅವರ ನಾಯಕತ್ವದಲ್ಲಿ ತೆಗೆದುಕೊಂಡ ತೀರ್ಮಾನಗಳು ಅತ್ಯಂತ ಪರಿಣಾಮಕಾರಿ ಹಾಗು ಏಶಸ್ವಿಯಾಗಿದ್ದು ಅವರ  ಕಾರ್ಯ ವಿಧಾನವು ಪ್ರತಿ ಕಮೂನಿಷ್ಟ ಕಾರ್ಯಕರ್ತನಿಗೆ  ಸ್ಪೂರ್ತಿದಾಯಕ ವಾಗಿದೆ, ಜಿ.ವಿ.ಶ್ರೀರಾಮ ರೆಡ್ಡಿ ಯವರಿಗೆ ಬಿಡಿದ ನೆಂಟು ಅವರಿಗೆ ಬಾಗೇಪಲ್ಲಿ ಎಂದರೆ ಪಂಚ ಪ್ರಾಣ, ಶ್ರೀರಾಮ ರೆಡ್ಡಿ ಎರಡು ಸಲ ಜಯಗಳಿಸಿದಾಗ ಬಂದು ಅಭಿನಂದನೆ ತಿಳಿಸಿದ್ದಾರೆ ಹಾಗೂ ಬಾಗೇಪಲ್ಲಿ ಯಾವುದೇ ಸಮಸ್ಯೆ ಇದ್ದರೂ ಅವರ ಮಾರ್ಗದರ್ಶನ ಜಿ.ವಿ.ಎಸ್ ಪಡೆಯುತ್ತಿದ್ದರು.

ಅವರು ಬಾಗೇಪಲ್ಲಿಗೆ ಕೊನೆಯದಾಗಿ ಶ್ರೀರಾಮರೆಡ್ಡಿ ನಿಧನಾನಂತರ ಏರ್ಪಡಿಸಿದ್ದ ಭಾವಪೂರ್ಣ ಶ್ರದ್ಧಾಂಜಲಿ ಯಲ್ಲಿ ಭಾಗವಹಿಸಿದ್ದನ್ನು ಸ್ಮರಿಸಿದರು.

ಗಣ್ಯ ವ್ಯಕ್ತಿಗಳಿಂದ ಭಾವಪೂರ್ಣ ಶ್ರದ್ಧಾಂಜಲಿ

ಸೀತಾರಾಮ್ ಯೆಚೂರಿ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಡಾ.ಅನಿಲ್ ಕುಮಾರ್ ಅವುಲಪ್ಪ, ಚನ್ನರಾಯಪ್ಪ, ಮುನಿ ವೆಂಕಟಪ್ಪ, ರಘುರಾಮ ರೆಡ್ಡಿ, ವಾಲ್ಮೀಕಿ ಅಶ್ವಥಪ್ಪ, ಸಾವಿತ್ರಮ್ಮ ,ಅಬ್ದುಲ್ ಕರೀಂ ಸಾಬ್ ,ಜಿ.ಕೃಷ್ಣಪ್ಪ ಅವರ ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ.

೧೨ಸಿಬಿಪಿಎಂ೯: ಬಾಗೇಪಲ್ಲಿಯಲ್ಲಿ ಮಾಜಿ ರಾಜ್ಯಸಭಾ ಸದಸ್ಯ ಹಾಗೂ ಸಿಪಿಐಎಂ ನಾಯಕ ಸೀತಾರಾಮ ಯೆಚೂರಿ ನಿಧನರಾಗಿರುವ ಸುದ್ದಿ ತಿಳಿಯುತ್ತಿದ್ದಂತೆ ಬಾಗೇಪಲ್ಲಿಯಲ್ಲಿ ಸಿಪಿಐಎಂ ಮುಖಂಡರು ಕಾರ್ಯಕರ್ತರು ಸೇರಿ ಅವರು ನಡೆದುಬಂದ ಹಾದಿಯನ್ನು ಮೆಲುಕು ಹಾಕಿ ಶ್ರದ್ದಾಂಜಲಿ ಸಲ್ಲಿಸಿದರು.