Wednesday, 11th December 2024

ಎರಡು ವಾರದಲ್ಲೇ ಕೋಟ್ಯಂತರ ರೂ. ನಗದು, ಚಿನ್ನಾಭರಣ, ಉಚಿತ ಉಡುಗೊರೆ ಜಪ್ತಿ

ಬೆಂಗಳೂರು: ಲೋಕಸಭೆ ಸಾರ್ವತ್ರಿಕ ಚುನಾವಣೆ ಘೋಷಣೆಯಾದ ಎರಡು ವಾರದಲ್ಲೇ ಕೋಟ್ಯಂತರ ರೂ. ಮೌಲ್ಯದ ನಗದು, ಚಿನ್ನಾಭರಣ, ಉಚಿತ ಉಡುಗೊರೆ ಹಾಗೂ ಬಟ್ಟೆ, ದಿನಸಿ ಪದಾರ್ಥಗಳನ್ನು ಜಪ್ತಿ ಮಾಡಲಾಗಿದೆ.

ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯ ತಂಡದವರು ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 4,62,23,046 ರೂ.

ಮೌಲ್ಯದ ದಿನಸ ವಸ್ತುಗಳನ್ನು ವಶಪಡಿಸಿಕೊಂಡಿದ್ದರೆ, ಸಾಗರ ಪೊಲೀಸ್ ಠಾಣೆಯವರು 31,50,000 ರೂ. ಮೌಲ್ಯದ ಬಟ್ಟೆ, ಪ್ಲಾಸ್ಟಿಕ್ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

ಶಿವಮೊಗ್ಗದ ದೊಡ್ಡಪೇಟೆ ಹಾಗೂ ಇತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಚುನಾವಣಾ ವೆಚ್ಚದ ಮೇಲ್ವಿಚಾರಣೆ ಮಾಡುವ ಉದ್ದೇಶದಿಂದ ಸ್ಥಾಪಿಸಿರುವ ಕ್ಷಿಪ್ರ ಪಡೆಗಳು ಸ್ಥಿರ ಕಣ್ಗಾವಲು ತಂಡಗಳು, ಪೊಲೀಸ್, ಆದಾಯ ತೆರಿಗೆ ಹಾಗೂ ಅಬಕಾರಿ ಇಲಾಖೆ ಅಧಿಕಾರಿಗಳ ತಂಡಗಳು ಮಾ.16ರಿಂದ ನಿನ್ನೆಯವರೆಗೆ 23,19,30,106 ರೂ.ಗಳನ್ನು ವಶಪಡಿಸಿಕೊಂಡಿವೆ.

906350.61 ಲೀಟರ್ ಮದ್ಯವನ್ನು ಜಪ್ತಿ ಮಾಡಲಾಗಿದ್ದು, ಇದರ ಮೌಲ್ಯ 29,07,37,930 ರೂ. ಎಂದು ಅಂದಾಜಿಸಲಾಗಿದೆ. 238.85 ಕೆಜಿ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದು, ಇದರ ಮೌಲ್ಯ 1,63,96,660 ರೂ. ಎಂದು ಅಂದಾಜಿಸಲಾಗಿದೆ.

9,18,50,992 ರೂ. ಮೌಲ್ಯದ 15.38 ಕೆಜಿ ಚಿನ್ನ ಜಪ್ತಿಯಾಗಿದೆ. ಅದೇ ರೀತಿ 27,23,150 ರೂ. ಮೌಲ್ಯದ 59.04 ಕೆಜಿ ಬೆಳ್ಳಿ ಹಾಗೂ 9 ಲಕ್ಷ ಮೌಲ್ಯದ 21.17 ಕ್ಯಾರೆಟ್ ವಜ್ರವನ್ನು ವಶಪಡಿಸಿಕೊಂಡಿದ್ದು, ಒಟ್ಟಾರೆ ಈ ಚಿನ್ನಾಭರಣಗಳ ಮೌಲ್ಯ 72,84,31,814 ರೂ. ಗಳಾಗಿವೆ.

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ಬಿಟಿಎಂ ಲೇಔಟ್ ನಲ್ಲಿ ಒಂದು ಸಾವಿರ ಎಲ್‍ಇಡಿ ಟಿವಿಗಳನ್ನು ವಶಪಡಿಸಿಕೊಂಡಿದ್ದು, ಇದರ ಮೌಲ್ಯ 87,90,0000 ರೂ. ಎಂದು ಅಂದಾಜಿಸಲಾಗಿದೆ. ದಾವಣಗೆರೆಯ ಹೊನ್ನಾಳಿಯಲ್ಲಿ 73,98,400 ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ.