Sunday, 27th October 2024

ಸ್ವಸಹಾಯ ಗುಂಪುಗಳಿಗೆ ಸಾಲ ವಿತರಣೆ

ಮಧುಗಿರಿ: ಮಹಿಳಾ ಆರ್ಥಿಕ ಸಬಲೀಕರಣ ಮಾಡುವ ಉದ್ದೇಶದಿಂದ ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಧ್ಯೇಯ ವಾಕ್ಯದೊಂದಿಗೆ ಮಹಿಳೆಯರ ಆರ್ಥಿಕ ಆಭಿವೃದ್ಧಿಗೆ ಮತ್ತು ಉತ್ತೇಜನ ನೀಡುವ ಉದ್ದಶ ದಿಂದ ಕೆನರಾ ಬ್ಯಾಂಕ್ ವತಿಯಿಂದ ಸ್ವಸಹಾಯ ಗುಂಪುಗಳಿಗೆ ಸಾಲ ವಿತರಣೆ ಮಾಡಲಾಗಿದೆ ಎಂದು ತುಮಕೂರು ಪ್ರಾಂತ್ಯ ಕಚೇರಿಯ ಸಹಾಯಕ ಮಹಾ ಪ್ರಬಂಧಕ ಬಿ ರವಿ ತಿಳಿಸಿದರು.

ಪಟ್ಟಣದ ಎಂ,ಎನ್.ಕೆ ಸಮುದಾಯ ಭವನದಲ್ಲಿ ಕೆನರಾ ಬ್ಯಾಂಕ್ ಮಧುಗಿರಿ ಹಾಗೂ ದಾನ್ ಫೌಂಡೇಶನ್ ಸಹಯೋಗ ದೊಂದಿಗೆ ಮಹಿಳಾ ಸ್ವಸಹಾಯ ಗುಂಪುಗಳಿಗೆ ಹಮ್ಮಿ ಕೊಂಡಿದ್ದ ಸಾಲ ವಿತರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಮಧುಗಿರಿ ಶಾಖಾ ವ್ಯಾಪ್ತಿಯಲ್ಲಿ ಸುಮಾರು ೩೩ ಸಂಘಗಳ ೬೦೦ ಕ್ಕು ಹೆಚ್ಚು ಮಹಿಳಾ ಫಲಾನುಭವಿಗಳಿಗೆ ೨.೫ ಕೋಟಿ ಹಣ ಸ್ಥಳದಲ್ಲೇ ಮಂಜೂರು ಮಾಡಿ ವಿತರಣೆ ಮಾಡ ಲಾಗಿದೆ ಎಂದರು.

ಸ್ವಸಹಾಯ ಸಂಘಗಳಲ್ಲಿ ಪಡೆದ ಸಾಲವನ್ನು ಮಹಿಳೆಯರು ಗುಂಪು ಚಟುವಟಿಕೆಗೆ ಬಳಸಿಕೊಂಡು ವಿವಿಧ ನಮೂನೆ ವಸ್ತುಗಳನ್ನು ತಯಾರಿಸಿ ಹೆಚ್ಚಿನ ಆದಾಯಗಳಿಸಲು ಸಹಕಾರಿಯಾಗಿದೆ ಎಂದರು.

ದಾನ್ ಫೌಂಡೇಶನ್ ಸಂಯೋಜಕಿ ಅನುಷಾ ಮಾತನಾಡಿ ಸ್ವಸಹಾಯ ಸಂಘಗಳ ಮಳಾ ಉದ್ಯಮಿಗಳನ್ನು ಉತ್ತೇಜಿಸಲು ಕೆನರಾ ಬ್ಯಾಂಕ್ ಹತ್ತು ಹಲವು ಕಾರ್ಯಕ್ರಮಗಳನ್ನು ಆಯೋಜಿಸುತಿದೆ. ದಶಕಗಳ ಹಿಂದೆ ಗ್ರಾಮೀಣಾ ಭಾಗದ ಬಡ ವಿದ್ಯಾರ್ಥಿಗಳ ಉನ್ನತ ಶಿಕ್ಷಣ ಪಡೆಯಲು ಆರ್ಥಿಕ ಸಮಸ್ಯೆ ಕಾಡುತ್ತಿತ್ತು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಸ್ವಸಹಾಯ ಸಂಘದಲ್ಲಿ ಸಾಲ ಪಡೆದು ಉನ್ನತ ಶಿಕ್ಷಣ ಪಡೆಯಲು ಸಹಕಾರಿಯಾಗುತ್ತಿದೆ, ಮಹಿಳೆಯರು ಸಾಲ ಪಡೆದು ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸು ತ್ತಿರುವುದು ಶ್ಲಾಘನಿ ಎಂದರು

ಈ ಸಂದರ್ಭದಲ್ಲಿ ಕೃಷಿ ಅಭಿವೃದ್ಧಿ ಅಧಿಕಾರಿ ಗ್ರೀಶ್ಮಾ, ದಾನ್ ಫೌಂಡೇಶನ್ ರಮೇಶ್, ಮಧುಗಿರಿ ಶಾಖೆಯ ಪ್ರಬಂಧಕ ನಾಗಪ್ಪ ಬಿ.ಜಿ, ವ್ಯವಸ್ಥಾಪಕ ನಾಗೇಂದ್ರಪ್ಪ, ಸಿಬ್ಬಂದಿಗಳಾದ ಪಲ್ಲವಿ ಹಾಜರಿದ್ದರು.