ಅರ್ಜಿ ಸಲ್ಲಿಸಲು ಮಹಿಳೆಯರ ಪರದಾಟ…
20 ರೂಪಾಯಿ ಕೆಲಸಕ್ಕೆ 100 ತಂಡ
ವಿಶೇಷ ವರದಿ : ಆನಂದ ಸ್ವಾಮಿ ಹಿರೇಮಠ
ರಾಯಚೂರು : ರಾಜ್ಯ ಸರಕಾರವು ಮಹಿಳೆಯರ ಸಬಲಿಕರಣಕ್ಕಾಗಿ ಅನೇಕ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದ್ದು ಅವುಗಳಲ್ಲಿ ಗೃಹಲಕ್ಷಿö್ಮ , ಸ್ತಿçà ಶಕ್ತಿ, ಗೃಹಜ್ಯೊತಿ, ಯುವನಿಧಿ, ಅನ್ನಭಾಗ್ಯ, ಯೋಜನೆಗಳಿಗೆ ಅರ್ಜಿಗಳನ್ನು ಸಲ್ಲಿಸಲು ಅಗತ್ಯವಿರುವ ಜಾತಿ ಮತ್ತು ಅದಾಯ ಪ್ರಮಾಣ ಪತ್ರ, ಅಧಾರ್ ಕಾರ್ಡ್,ಪಡಿತರ ಚಿಟಿ ತಿದ್ದುಪಡಿ, ಸೇರಿದಂತೆ ದಾಖಲೆಗಳನ್ನು ಅನ್ ಲೈನ್ ಮೂಲಕವೆ ಮಹಿಳೆಯರು ಪಡೆಯಬೇಕಾಗಿರುವುದರಿಂದ ತಮ್ಮ ಗ್ರಾಮದಲ್ಲಿನ ಪಂಚಾಯಿತಿಯಲ್ಲಿಯೇ ಇರುವ ಬಾಪೂಜಿ ಕೇಂದ್ರಗಳಲ್ಲಿ ಕೇವಲ ೨೦ರೂ ಶುಲ್ಕವನ್ನು ನೀಡಿ ಪಡೆಯಲು ಸಾಧ್ಯವಿದೆ.
ಆದ್ದರೆ ವಿವಿಧ ಕಾರಣಗಳಿಗಾಗಿ ಬಾಪೂಜಿ ಕೇಂದ್ರಗಳಲ್ಲಿ ಅಗತ್ಯವಾದ ಸೇವೆಗಳು ಸಾರ್ವಜನಿಕರಿಗೆ ದೊರೆಯುತ್ತಿಲ್ಲ ಗ್ರಾ. ಪಂಚಾಯಿತಿಗಳಲ್ಲಿ ಕೇಂದ್ರಗಳು ಮಾಯವಾಗಿವೆ ಎಂಬುವ ದೂರುಗಳು ಕೇಳಿಬರುತ್ತಿವೆ.
ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮೀಣ ಜನರಿಗೆ ತಮ್ಮ ಗ್ರಾಮದಲ್ಲಿಯೇ ಅಗತ್ಯ ಪ್ರಮಾಣ ಪತ್ರಗಳನ್ನು ಪಡೆಯಲು ಸಾಧ್ಯವಾಗಲಿ ಎನ್ನುವ ಉದ್ದೇಶದಿಂದ ರಾಜ್ಯ ಸರಕಾರವು ೨೦೧೬ರಲ್ಲಿ ಗ್ರಾಮಪಂಚಾಯಿತಿಗಳಲ್ಲಿ ಬಾಪೂಜಿ ಸೇವಾ ಕೇಂದ್ರಗಳನ್ನು ಪ್ರಾರಂಭಿಸಿ ಗ್ರಾಮೀಣ ಭಾಗದ ಜನರಿಗೆ ಅಗತ್ಯವಿರುವ ವಿವಿಧ ಇಲಾಖೆಗಳ ಪ್ರಮಾಣ ಪತ್ರಗಳನ್ನು ಒಂದೆ ಸೂರಿನಡಿಯಲ್ಲಿ ೧೦೦ ಸೇವೆಗಳನ್ನು ಪಡೆಯಲು ಅನುಕೂಲ ಕಲ್ಪಿಸಿದ್ದು.
ಇವುಗಳಲ್ಲಿ ೪೩ ಸೇವೆಗಳು ಪಂಚಾಯತ್ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಗೆ ಸೇರಿದ್ದಾದರೆ, ೪೦ ಸೇವೆಗಳು ಕಂದಾಯ ಇಲಾಖೆಗೆ ಸೇರಿದ್ದಾಗಿವೆ. ಹಾಗೂ ಸಾರ್ವಜನಿಕರಿಗೆ ನಿತ್ಯ ಅಗತ್ಯಗಳಾಗಿರುವ ಮೊಬೈಲ್ ರಿಚಾರ್ಜ್, ವಿಮಾನ, ರೈಲ್ವೆ, ಬಸ್, ಟಿಕೆಟ್ ಬುಕಿಂಗ್ ನಂತಹ ವಾಣಿಜ್ಯ ಸೇವೆಗಳನ್ನು ಕೂಡ ಪಡೆಯುವ ಸೌಲಭ್ಯವಿದೆ.
ರೈತರಿಗೆ ಅಗತ್ಯವಿರುವ ಪಹಣಿ ಪತ್ರಿಕೆ, ಆದಾಯ ಪ್ರಮಾಣಪತ್ರ, ಜಾತಿ ಪ್ರಮಾಣ ಪತ್ರ, ವಸತಿ ಮತ್ತು ವಾಣಿಜ್ಯ ಕಟ್ಟಡದ ನಿರ್ಮಾಣ ಅನುಮತಿ ಪತ್ರ, ಕಾಮಗಾರಿ ಮುಕ್ತಾಯ ಪ್ರಮಾಣಪತ್ರ, ಆಸ್ತಿ ತೆರಿಗೆ ಪಾವತಿ, ಮನ್ನಾ, ಭೂಪರಿವರ್ತನೆ ಅರ್ಜಿ, ನೀರಿನ ಸಂಪರ್ಕ ಮತ್ತು ಶುಲ್ಕ ಪಾವತಿ ಅರ್ಜಿ, ವಿಶೇಷ ಘಟಕ ಯೋಜನೆಗಳ ಅರ್ಜಿ, ಜಾತಿ ಮತ್ತು ಆದಾಯ ದೃಢೀಕರಣ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ,ವಸತಿ, ಉಚಿತ ನಿವೇಶನ ಪಡೆಯಲು ಅರ್ಜಿ, ಅನಿಲ ಭಾಗ್ಯ ಯೋಜನೆ, ಉದ್ಯೋಗ ಖಾತರಿ ಯೋಜನೆಯಡಿ ಕೆಲಸಕ್ಕೆ ಅರ್ಜಿ, ವ್ಯಾಪಾರ ಪರವಾನಿಗೆ ಮತ್ತು ಅದರ ನವೀಕರಣಕ್ಕೆ ಅರ್ಜಿ, ಜನಸಂಖ್ಯೆ, ಬೆಳೆ, ಜಾನುವಾರು ಗಣತಿ, ಇ-ಸ್ವತ್ತು ತಂತ್ರಾAಶದ ಫಾರಂ-೯ ಮತ್ತು ಫಾರಂ ೧೧ಎ, ಬಿಪಿಎಲ್ ಪಟ್ಟಿಗೆ ಹೆಸರನ್ನು ಸೇರಿಸುವುದು ಸೇರಿದಂತೆ ಅಗತ್ಯವಿರುವ ಎಲ್ಲಾ ಪ್ರಮಾಣ ಪತ್ರಗಳಿಗೆ ಅರ್ಜಿಗಳನ್ನು ಸಲ್ಲಿಸಿ ಪ್ರಮಾಣ ಪತ್ರಗಳನ್ನು ಪಡೆಯಲು ಸಾಧ್ಯವಿದೆ ಆದರೆ ಯಾವುದೇ ಒಂದು ಗ್ರಾಮ ಪಂಚಾಯಿತಿಯಲ್ಲೂ ಕೂಡ ಈ ರೀತಿ ಯೋಜನೆ ಇದೆ ಎಂಬುದೇ ಸಾರ್ವಜನಿಕರಿಗೆ ತಿಳಿಯದಾಗಿದೆ.
*
ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿ ಗಣಕಯಂತ್ರ ನಿರ್ವಾಹಕರು ಈ ಒಂದು ಬಾಪೂಜಿ ಕೇಂದ್ರದ ಕಾರ್ಯಗಳನ್ನು ಮಾಡಲೇಬೇಕು, ಜೂ.30 ರಂದು ನಡೆದ ಕಮಿಷನರ್ ಮೀಟಿಂಗ್ ನಲ್ಲಿ ಕೂಡ ಇದು ಕಡ್ಡಾಯ ಎಂದು ಹೇಳಿದ್ದಾರೆ. ಎಲ್ಲಾ ಗ್ರಾಮ ಪಂಚಾಯಿತಿ ಕಂಪ್ಯೂಟರ್ ಆಪರೇಟರ್ ಗಳಿಗೆ ನೋಟಿಸ್ ನೀಡಿದ್ದು ಗ್ರಾಮದಲ್ಲಿ ಸೌಲಭ್ಯಗಳನ್ನು ನೀಡಲು ಸೂಚಿಸಿದ್ದೇವೆ.
ಶಶಿಧರ ಕುರೇರ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತ್ ರಾಯಚೂರು
*
ಗ್ರಾಮ ಪಂಚಾಯಿತಿಯ ಎಲ್ಲಾ ಕೇಲಸಗಳು ಅನ್ ಲೈನ್ ಹಾಗೂ ಅಫ್ ಲೈನ್ ನಲ್ಲಿ ಮಾಡಬೇಕಾಗಿದೆ. ಪಂಚತ0ತ್ರ-೨, ಗ್ರಾಮ ಸಭೆ,ಕರವಸೂಲಿ,ನರೇಗಾ ಉದ್ಯೋಗ ಖಾತ್ರಿ ಯೋಜನೆ,ಸ್ವಚ್ಚಭಾರತ ಸೇರಿದಂತ್ ಲಾಗಿನ್ ಮೂಲಕವೇ ಮಾಡಬೇಕಾಗಿರುವುದರಿಂದ ಕೇಲಸದ ಒತ್ತಡ ಹೆಚ್ಚಾಗಿದ್ದು ಸಾರ್ವಜನಿಕರ ಅರ್ಜಿಗಳನ್ನು ಹಾಕಲು ಸಮಯ ಸಾಲುತ್ತಿಲ್ಲ ಬಿಡುವಿದಲ್ಲಿ ಅರ್ಜಿಗಳನ್ನು ಹಾಕುತ್ತೆವೆ. ಸರಕಾರದ ನೀಡಿದ ಜಾಬ್ ಚಾರ್ಟ ನೆಪ ಮಾತ್ರ ಅಗಿದೆ ಅದರೆ ಜಾಬ್ ಚಾರ್ಟಕಿಂತ ಹೆಚ್ಚಿನ ಕೆಲಸ ಅಗಿರುವದರಿಂದ ಈಗಿರುವ ನೌಕರರ ಆರೋಗ್ಯ ಸೇರಿದಂತೆ ಅನೇಕ ಸಮಸ್ಯೆಗಳ ಏದುರಿಸು ತ್ತುದ್ದು. ಕಾರಣ ಇನ್ನೂಬ್ಬ ಕಂಪ್ಯೂಟರ್ ಆಪರೇಟರ್ ನೀಡಿದಲ್ಲಿ ಕೆಲಸ ಸುಲಭವಾಗುತ್ತದೆ.
ಭೀಮರೆಡ್ಡಿ ಪಾಟೀಲ್
ರಾಜ್ಯಧ್ಯಕ್ಷರು ಗ್ರಾಮ ಪಂಚಾಯತ್ ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್ ನೌಕರರ ಸಂಘ