ಕಲಬುರಗಿ: ಶರಣಬಸವ ವಿಶ್ವವಿದ್ಯಾಲಯವು ಜುಲೈ 1 ರಿಂದ 3ರವರೆಗೆ ವಿಶ್ವವಿದ್ಯಾಲಯದ ಮುಖ್ಯ ಕ್ಯಾಂಪಸ್‌ನಲ್ಲಿ ‘ಬಹು ಶಿಸ್ತೀಯ ಸಂಶೋಧನೆಯಲ್ಲಿ ಇತ್ತೀಚಿನ ಆವಿಷ್ಕಾರಗಳು’ ವಿಷಯ ಕುರಿತು ಮೂರು ದಿನಗಳ ರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಿದೆ.
ಭಾಷಾ ನಿಕಾಯ, ವ್ಯವಹಾರ ಅಧ್ಯಯನ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ, ಲಲಿತಕಲೆ ಸೇರಿದಂತೆ ಇತರ ಸಾಂಪ್ರ ದಾಯಿಕ ವಿಭಾಗಗಳು ಮುಖ್ಯ ವಿಷಯದ ಮೇಲೆ ವಿಚಾರ ಸಂಕಿರಣಗಳು ನಡೆಯಲಿವೆ.
ವಿವಿಧ ವಿಭಾಗಗಳಿಂದ 110ಕ್ಕೂ ಹೆಚ್ಚು ತಾಂತ್ರಿಕ ವಿಚಾರಗೋಷ್ಠಿಗಳಲ್ಲಿ ಸಲ್ಲಿಸಲಾದ ಪ್ರಬಂಧಗಳನ್ನು ಮೂರು ಅಂತರ ರಾಷ್ಟ್ರೀಯ ಖ್ಯಾತಿಯ ಜರ್ನಲ್‌ಗಳಲ್ಲಿ ಪ್ರಕಟಿಸಲಾಗು ತ್ತದೆ. ಈ ಎಲ್ಲಾ ಮೂರು ಜರ್ನಲ್‌ಗಳು ಸ್ಕೋಪ್ಸ್ ಇಂಡೆಕ್ಡ್ಸ್ ಜರ್ನಲ್ಸ್ ಮತ್ತು ಯುಜಿಸಿ ಪಟ್ಟಿಯಲ್ಲಿವೆ.
ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿ ಹಾಗೂ ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ.ಶರಣಬಸವಪ್ಪ ಅಪ್ಪ ಮತ್ತು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್‌ಪರ್ಸನ್, ಶರಣಬಸವ ವಿ.ವಿ. ಆಡಳಿತ ಮಂಡಳಿ ಸದಸ್ಯೆ ಡಾ.ದಾಕ್ಷಾಯಿಣಿ ಎಸ್.ಅಪ್ಪಾ, ಶರಣಬಸವೇಶ್ವರ ಸಂಸ್ಥಾನದ 9ನೇ ಪೀಠಾಧಿಪತಿ ದೊಡ್ಡಪ್ಪ ಅಪ್ಪ ಅವರ ಸಾನ್ನಿಧ್ಯದಲ್ಲಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಹಾಗೂ ಶರಣಬಸವ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಸದಸ್ಯ ಬಸವರಾಜ ದೇಶಮುಖ ಸಮ್ಮೇಳನವನ್ನು ಉದ್ಘಾಟಿಸುವರು ಎಂದು ಕಲಬುರಗಿ ನಗರದಲ್ಲಿ ಗುರುವಾರ ಶರಣಬಸವ ವಿಶ್ವವಿದ್ಯಾಲಯದ ಕುಲಸಚಿವ ಡಾ.ಅನಿಲಕುಮಾರ ಬಿಡವೆ ಹೇಳಿದರು.
ಮುಖ್ಯ ಅತಿಥಿಯಾಗಿ ಬರುವ ಬಯೋಕಾನ್ ಫೌಂಡೇಶನ್ ಮಿಷನ್ ಡೈರೆಕ್ಟರ್ ಡಾ.ಅನುಪಮಾ ಶೆಟ್ಟಿ ಮುಖ್ಯ ಭಾಷಣ ಮಾಡ ಲಿದ್ದು, ಬಯೋಕಾನ್ ಅಕಾಡೆಮಿಯ ಶೈಕ್ಷಣಿಕ ವ್ಯವಸ್ಥಾಪಕ ಡಾ. ರಾಮಗೋಪಾಲ್ ರಾವ್ ಗೌರವ ಅತಿಥಿಗಳಾಗಿ ಕಾರ್ಯಕ್ರಮ ದಲ್ಲಿ ಮಾತನಾಡಲಿದ್ದಾರೆ. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಶರಣಬಸವ ವಿ.ವಿ. ಕುಲಪತಿ ಡಾ.ನಿರಂಜನ್ ನಿಷ್ಠಿ ವಹಿಸಲಿದ್ದಾರೆ.
ಚಿರಾಯು ಆಸ್ಪತ್ರೆಯ ಕಿಡ್ನಿ ತಜ್ಞ ಡಾ.ಮಂಜುನಾಥ್ ದೋಶೆಟ್ಟಿ, ಹಿರಿಯ ನೇತ್ರ ತಜ್ಞ ಡಾ.ವಿಶ್ವನಾಥ ರೆಡ್ಡಿ, ಕರ್ನಾಟಕ ವೈದ್ಯ ಕೀಯ ಪರಿಷತ್ತಿನ ಮಾಜಿ ಅಧ್ಯಕ್ಷ, ಮಕ್ಕಳ ತಜ್ಞ ಡಾ.ಎಚ್.ವೀರಭದ್ರಪ್ಪ, ಎಚ್‌ಸಿಜಿ ಆಸ್ಪತ್ರೆಯ ಓಂಕೊಲಾಜಿಸ್ಟ್ ಡಾ.ನಂದೀಶ್ ಜೀವಣಗಿ, ಯುನೈಟೆಡ್ ಆಸ್ಪತ್ರೆಯ ಡಾ.ಮೊಹಮ್ಮದ್ ಅಬ್ದುಲ್ ಬಷೀರ್ ಮತ್ತು ಡಾ.ಸುದರ್ಶನ ಲಾಖೆ, ಹಿರಿಯ ಮಕ್ಕಳ ತಜ್ಞ ಡಾ.ದಿನಕರ ಮೋರೆ, ಎಂಆರ್‌ಎಂಸಿ ಡೀನ್ ಡಾ.ಎಸ್.ಎಂ.ಪಾಟೀಲ, ಯಶೋಧಾ ಮಕ್ಕಳ ಆಸ್ಪತ್ರೆಯ ಡಾ.ಪ್ರಶಾಂತ ಕುಲಕರ್ಣಿ ಮತ್ತು ನರರೋಗ ತಜ್ಞ ಡಾ.ಶರಣಗೌಡ ಪಾಟೀಲ ಅವರನ್ನು ಸನ್ಮಾನಿಸಲಾಗುವುದು.
***
ಈ ರಾಷ್ಟ್ರೀಯ ಸಮ್ಮೇಳನದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ವೈದ್ಯರನ್ನು ಗುರುತಿಸಿ ವೈದ್ಯರ ದಿನಾ ಚರಣೆಯ ಸ್ಮರಣಾರ್ಥ ಕಲ್ಯಾಣ ಕರ್ನಾಟಕ ಪ್ರದೇಶದ ಖ್ಯಾತ ವೈದ್ಯರಿಗೆ ಸನ್ಮಾನಿಸಲಾಗುವುದು.
ಡಾ. ಅನಿಲಕುಮಾರ್ ಬಿಡವೆ,
ಶರಣಬಸವ ವಿ.ವಿ. ಕುಲಸಚಿವ