Friday, 13th December 2024

ರಾಜ್ಯ ಅಪೆಕ್ಸ್ ಬ್ಯಾಂಕ್ ಮಾಜಿ ಅಧ್ಯಕ್ಷರಿಗೆ ’ಇಡಿ’ ಶಾಕ್

ಶಿವಮೊಗ್ಗ: ಡಿಸಿಸಿ ಬ್ಯಾಂಕ್ ಅಧ್ಯಕ್ಷ, ರಾಜ್ಯ ಅಪೆಕ್ಸ್ ಬ್ಯಾಂಕ್ ಮಾಜಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಅವರ ನಿವಾಸಗಳ ಮೇಲೆ ಜಾರಿ ನಿರ್ದೇಶನಾಲ ಯದ(ಇಡಿ) ಅಧಿಕಾರಿಗಳು ದಾಳಿ ನಡೆಸಿ ತಪಾಸಣೆ ನಡೆಸಿದ್ದಾರೆ.

ತೀರ್ಥಹಳ್ಳಿಯ ಬೆಟ್ಟಮಕ್ಕಿ ಹಾಗೂ ಶಿವಮೊಗ್ಗದ ಶರಾವತಿ ನಗರ ಸೇರಿದಂತೆ ಒಟ್ಟು ಮೂರು ನಿವಾಸಗಳ ಮೇಲೆ ಇಂದು ಮುಂಜಾನೆ ದಾಳಿ ನಡೆಸಿದ ಅಧಿ ಕಾರಿಗಳು ತಪಾಸಣೆ ನಡೆದಿದ್ದಾರೆ.

ಒಟ್ಟು ಐದು ವಾಹನಗಳಲ್ಲಿ ೧೫ಕ್ಕೂ ಅಧಿಕಾರಿಗಳು ವಿವಿಧ ತಂಡಗಳಾಗಿ ದಾಳಿ ನಡೆಸಿದ್ದು, ಮೂರೂ ಮನೆಯ ಸುತ್ತಲೂ ಶಸ್ತ್ರ ಸಜ್ಜಿತ ಪೊಲೀಸರು ಸುತ್ತುವರೆ ದಿದ್ದಾರೆ. ಮೂರೂ ನಿವಾಸಗಳ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸಿದ್ದು, ಇನ್ನೂ ಮುಂದುವರೆದಿದೆ.

ಡಿಸಿಸಿ ಬ್ಯಾಂಕ್‌ನಲ್ಲಿ ಕಳೆದ ಹಲವು ವರ್ಷಗಳ ಹಿಂದೆ ನಡೆದ ನಕಲಿ ಬಂಗಾರ ಅಡಮಾನ ಹಗರಣಕ್ಕೆ ಸಂಬಂಧಿ ಸಿದಂತೆ ಇಡಿ ಅಧಿಕಾರಿಗಳ ತಂಡ ದಾಳಿ ನಡೆಸಿದೆ ಎಂದು ಹೇಳಲಾಗುತ್ತಿದೆ.

ತೀರ್ಥಹಳ್ಳಿಯ ನಿವಾಸದಲ್ಲಿ ಕೇವಲ ಕೆಲಸದವರು ಮಾತ್ರ ಇದ್ದು, ಬೀಗ ಹಾಕಲಾಗಿರುವ ಎರಡು ಕೊಠಡಿ ಗಳನ್ನು ಅಧಿಕಾರಿಗಳು ತೆಗೆಸಿ ಪರಿಶೀಲನೆ ನಡೆಸಿದ್ದಾರೆ ಎಂದು ಹೇಳಲಾಗಿದೆ. ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.