Sunday, 15th December 2024

ಗ್ಯಾಸ್ ಸೋರಿಕೆ ಸಾಧ್ಯತೆ?

ಶಿರೂರು: ಉತ್ತರ ಕನ್ನಡದ ಶಿರೂರು ಬಳಿ ಮಂಗಳವಾರ ಭಾರೀ ಪ್ರಮಾಣದ ಗುಡ್ಡ ಕುಸಿತ ಉಂಟಾದಾಗ, ಹಲವರು ಮೃತಪಟ್ಟದ್ದರ ಜತೆಯಲ್ಲೇ, ಅನಿಲ ಸಾಗಿಸುತ್ತಿದ್ದ ಟ್ಯಾಂಕರ್ ಒಂದು ನದಿಗೆ ಉರುಳಿ ಬಿದ್ದಿತ್ತು.

ನದಿ ನೀರಿನಲ್ಲಿ ಕೊಚ್ಚಿಹೋದ ಟ್ಯಾಂಕರ್, ೭ ಕಿ.ಮೀ. ದೂರದ ಹಳ್ಳಿಯ ಬಳಿ ನಿಂತಿದ್ದು, ಅರ್ಧ ಕಾಣಿಸುತ್ತಿದೆ. ಈಗ ಆ ಟ್ಯಾಂಕರ್‌ನಿಂದ ಗ್ಯಾಸ್ ಸೋರಿಕೆಯ ಅಪಾಯ ಎದುರಾಗಿದ್ದು, ಸುತ್ತಲಿನ ೩೦ಕ್ಕೂ ಹೆಚ್ಚಿನ ಮನೆಗಳವರಿಗೆ ಆತಂಕ ತಂದಿದೆ. ಟ್ಯಾಂಕರ್ ಇರುವ ಸುತ್ತಮುತ್ತಲಿನ ೩೦ಕ್ಕೂ ಹೆಚ್ಚಿನ ಮನೆಗಳಲ್ಲಿ ಒಲೆ ಉರಿಸದಂತೆ, ವಿದ್ಯುತ್ ಬೆಳಗದಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ಆ ಟ್ಯಾಂಕರ್‌ನಲ್ಲಿರುವ ಸುಮಾರು ೩೦ ಟನ್ ಅನಿಲವನ್ನು ಬೇರೆ ಟ್ಯಾಂಕರ್‌ಗೆ ಸುರಕ್ಷಿತವಾಗಿ ವರ್ಗಾಯಿಸಬೇಕಾಗಿರುವುದು ಈಗಿನ ಸವಾಲು ಎನಿಸಿದೆ.