Thursday, 12th December 2024

ಹತ್ತನೇ ದಿನಕ್ಕೆ ಕಾಲಿಟ್ಟ “ಶಿರೂರು ಗುಡ್ಡ ಕುಸಿತ” ಶೋಧ ಕಾರ್ಯಾಚರಣೆ

ಶಿರಸಿ: ಅಬ್ಬರದ ಮಳೆ ಹಿನ್ನೆಲೆ ಶೋಧ ಕಾರ್ಯಕ್ಕೆ ಅಡ್ಡಿಯಾಗಿದ್ದರೂ ಕಾರ್ಯಾಚರಣೆ ಮುಂದು ವರಿಸಲಾಗಿದೆ. ಬೆಳಗಾವಿಯಿಂದ ತಂದಿರುವ ಬೂಮ್ ಹ್ಯಾಮರ್ ಪೋಕ್ ಲೈನ್ ಕಾರ್ಯಾಚರಣೆಗೂ ಮಳೆ ಅಡ್ಡಿಯಾಗಿದೆ.

ದೆಹಲಿಯಿಂದ ವಿಶೇಷ ತಂಡ ಶಿರೂರಿಗೆ ಆರ್ಮಿಯಿಂದ ಅತ್ಯಾಧುನಿಕ ಡ್ರೋನ್ ಕಾರ್ಯಾಚರಣೆಯೂ ನಡೆಯುತ್ತಿದ್ದು, ನೌಕಾದಳದ ನುರಿತ ಮುಳುಗು ತಜ್ಞರಿಂದ ಇಂದು ಶೋಧ ಕಾರ್ಯ ನಡೆಯುತ್ತಿದೆ. ಇಂದು ಆರ್ಮಿ ಹಾಗೂ ನೇವಿಯಿಂದ ಜಂಟಿ ಕಾರ್ಯಾಚರಣೆ ನಡೆಯಲಿದ್ದು, ಜಿಲ್ಲಾಡಳಿತದಿಂದ ಕಾರ್ಯಾಚರಣೆಯ ಸಂಪೂರ್ಣ ಜವಾಬ್ದಾರಿಯನ್ನು ಆರ್ಮಿ, ನೌಕಾದಳ ವಹಿಸಿಕೊಂಡಿದೆ.

ನಿರ್ಬಂಧ…
ಶಿರೂರು ಸುತ್ತಮುತ್ತ ಮೂರು ಕಿ.ಮೀ ವ್ಯಾಪ್ತಿಯಲ್ಲಿ ಎಲೆಕ್ಟ್ರಾನಿಕ್ ಡಿವೈಸ್ ಗೆ ನಿರ್ಬಂಧ ಹೇರಲಾಗಿದೆ. ಇಂದು ವಿಶೇಷ ಕಾರ್ಯಾಚರಣೆ ನಡೆಯು ವುದರಿಂದ ಮಾಧ್ಯಮಗಳಿಗೂ ಸಹ ನಿರ್ಬಂಧ ಹಾಕಲಾಗಿದೆ. ನಿನ್ನೆ ದಿನ ಸೋನಾರ್ ತಂತ್ರಜ್ಞಾನ ಬಳಸಿ ಲಾರಿ ಇರುವುದನ್ನು ಪತ್ತೆ ಮಾಡಲಾಗಿತ್ತು.
ಲಾರಿ ಚಾಲಕ ಅರ್ಜುನ್ ಗಾಗಿ ತೀವ್ರ ಹುಡುಕಾಟ ನಡೆದಿದ್ದು, ಇಂದಾದರೂ ಸಿಗ್ತಾನಾ “ಅರ್ಜುನ್” ಎನ್ನುವ ಪ್ರಶ್ನೆ ಎದ್ದಿದೆ.