Sunday, 15th December 2024

ಕುಲಸಚಿವ ಹುದ್ದೆಯಿಂದ ಬಿಡುಗಡೆಗೊಳಿಸಲು ಶಿವಚಿತ್ತಪ್ಪ ಮನವಿ

ತುಮಕೂರು: ತುಮಕೂರು ವಿಶ್ವವಿದ್ಯಾಲಯ ಕುಲಸಚಿವ(ಆಡಳಿತ) ಶಿವಚಿತ್ತಪ್ಪ ಅವರು ಸರಕಾರಕ್ಕೆ ಪತ್ರ ಬರೆದು ಕುಲಸಚಿವ ಹುದ್ದೆಯಿಂದ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದಾರೆ.
ಕುಲಸಚಿವ ಹುದ್ದೆಗೆ ಕೊರಟಗೆರೆ ತಹಸೀಲ್ದಾರ್ ನಯಿದಾ ಜಮ್ ಜಮ್ ಅವರನ್ನು ಕೆಲ ದಿನಗಳ ಹಿಂದೆ ವರ್ಗಾವಣೆ ಮಾಡಿದೆ. ಅವರಿಗೆ ಅಧಿಕಾರ ವರ್ಗಾಯಿಸಿ ನಿರ್ಗಮಿಸುವ ಮುನ್ನವೇ  ಶಿವಚಿತ್ತಪ್ಪ ಅವರು ಸರಕಾರಕ್ಕೆ ಪತ್ರ ಬರೆದು, ಅನಾರೋಗ್ಯದ ನಿಮಿತ್ತ ಕುಲಸಚಿವ(ಆಡಳಿತ) ಹುದ್ದೆಯಿಂದ ಬಿಡುಗಡೆ ಮಾಡಿ ಮಾತೃ ಇಲಾಖೆಯಾದ ಮೈಸೂರು ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರ ವಿಭಾಗಕ್ಕೆ ವರ್ಗಾವಣೆ ಮಾಡಬೇಕೆಂದು ಮನವಿ ಮಾಡಿದ್ದಾರೆ.