Friday, 2nd June 2023

ಬಿದರಿ ಕಲ್ಮಠದ ಶಿವಲಿಂಗ ಸ್ವಾಮೀಜಿಗಳು ಲಿಂಗೈಕ್ಯ

ಬಾಗಲಕೋಟೆ : ಜಿಲ್ಲೆಯ ಬಿದರಿ ಕಲ್ಮಠದ ಶಿವಲಿಂಗ ಸ್ವಾಮೀಜಿಗಳು (63) ಲಿಂಗೈಕ್ಯರಾಗಿದ್ದಾರೆ.

ಅವರು ಹೃದಯಾಘಾತದಿಂದ ನಿಧನರಾದರು ಎಂದು ಮಠದ ಮೂಲಗಳು ತಿಳಿಸಿವೆ. ಬಾಗಲಕೋಟೆ ಜಿಲ್ಲೆ ಜಮ ಖಂಡಿ ತಾಲ್ಲೂಕಿನ ಬಿದರಿ ಗ್ರಾಮದ ಮಠಕ್ಕೆ ಸ್ವಾಮೀಜಿಗಳಾಗಿರುವ ಇವರು ಸಾಮಾಜಿಕ, ಆಧ್ಯಾತ್ಮಿಕವಾಗಿ ಜನರಿಗೆ ಪ್ರೇರಕ ಶಕ್ತಿಯಾಗಿದ್ದರು.

ಗುರುವಾರ ರಾತ್ರಿ ಮಲಗಿದ್ದಾಗ ಎದೆ ನೋವು ಕಾಣಿಸಿಕೊಂಡಿದ್ದು, ಬಳಿಕ ಮಠದಲ್ಲೇ ಕೊನೆಯುಸಿರೆಳೆದರು ಎಂದು ತಿಳಿದುಬಂದಿದೆ. ಶುಕ್ರವಾರ ಸಂಜೆ ನಾಲ್ಕು ಗಂಟೆಗೆ ಅಂತ್ಯಸಂಸ್ಕಾರ ನಡೆಯಲಿದೆ. ವೀರಶೈವ ಲಿಂಗಾಯತ ಸಂಪ್ರ ದಾಯ ಪ್ರಕಾರ ಅಂತ್ಯಸಂಸ್ಕಾರ ನಡೆಯಲಿದೆ.

ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಮರೆಗುದ್ದಿ ಗ್ರಾಮ ಸ್ವಾಮೀಜಿಗಳ ಹುಟ್ಟೂರಾಗಿದ್ದು, ಕಳೆದ ಹಲವು ವರ್ಷಗಳ ಹಿಂದೆ ಮಠಕ್ಕೆ ಸ್ವಾಮೀಜಿ ಯಾಗಿ ಬಂದಿದ್ದರು.

error: Content is protected !!