ಸಾಗರ: ಸಾಗರದ ಆನಂದ ಸಾಗರ ಟ್ರಸ್ಟ್ ಹಾಗೂ ನೆರವಿನ ಕೈಗಳು ಟ್ರಸ್ಟ್ ಮತ್ತು ಹಿರಿಯ ನಾಗರೀಕರಿಗಾಗಿ ವೇದಿಕೆಯ ಸಹಯೋಗದಲ್ಲಿ ಸಾಗರದ ನಗರಸಭೆ ಎದುರುಗಡೆಯಿರುವ ರವಿ ಬುಕ್ ಹೌಸ್ ಆವರಣದಲ್ಲಿ ಪ್ರತಿ ಸೋಮವಾರ ಮತ್ತು ಶುಕ್ರವಾರ ಇ-ಆಸ್ತಿ ನೋಂದಣಿ ಜಾಗೃತಿ ಅಭಿಯಾನ (Shivamogga News) ಹಮ್ಮಿಕೊಳ್ಳಲಾಗಿದೆ.
ಈ ಸುದ್ದಿಯನ್ನೂ ಓದಿ | Bengaluru News: ಅಪಾಯದ ಅಂಚಿನಲ್ಲಿ ಹವಾಮಾನ; ವಿವಿಧ ಲಿಂಗ, ಜಾತಿ, ವರ್ಗಗಳ ಅಸಹಾಯಕತೆ ಕುರಿತ ವಸ್ತು ಪ್ರದರ್ಶನ
ಪ್ರತಿ ಸೋಮವಾರ ಮತ್ತು ಶುಕ್ರವಾರ ಬೆಳಗ್ಗೆ 10.30 ರಿಂದ 12.30 ರವರೆಗೆ ಇ-ಆಸ್ತಿ ನೋಂದಣಿ ಜಾಗೃತಿ ಅಭಿಯಾನ ನಡೆಯುತ್ತದೆ. ಸಾಗರ ನಗರಸಭೆ ವ್ಯಾಪ್ತಿಯಲ್ಲಿರುವ ಸೈಟು, ಮನೆ, ಕಟ್ಟಡಗಳ ಇ-ಖಾತೆಯನ್ನು ಮಾಡಿಸುವುದು ಕಡ್ಡಾಯವಾಗಿದ್ದು, ಇದಕ್ಕೆ ಪೂರಕವಾದ ದಾಖಲೆಗಳು ಯಾವುವು? ಅವುಗಳನ್ನು ನಗರಸಭೆ ಕಚೇರಿಗೆ ಹೇಗೆ ಸಲ್ಲಿಸಬೇಕು? ಇತ್ಯಾದಿಗಳ ಸಂಪೂರ್ಣ ಮಾಹಿತಿಯನ್ನು ಉಚಿತವಾಗಿ ಒದಗಿಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.