Tuesday, 19th November 2024

Shopping festival: ಮಂತ್ರಿ ಮಾಲ್ ಶಾಪಿಂಗ್ ಫೆಸ್ಟಿವಲ್‌ಗೆ ನಟಿ ಶ್ರಿಯಾ ಶರಣ್ ಚಾಲನೆ

Shopping festival

ಬೆಂಗಳೂರು: ನಗರದ ಹೃದಯಭಾಗದಲ್ಲಿರುವ ಮಲ್ಲೇಶ್ವರದ ಮಂತ್ರಿ ಮಾಲ್‌ನಲ್ಲಿ ನೂರು‌ ದಿನಗಳ ಭರ್ಜರಿ ಶಾಪಿಂಗ್ ಫೆಸ್ಟಿವಲ್ ಆರಂಭವಾಗಿದೆ. ಇತ್ತೀಚೆಗೆ ಈ ಫೆಸ್ಟಿವಲ್‌ಗೆ ಖ್ಯಾತ ನಟಿ ಶ್ರಿಯಾ ಶರಣ್ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ನಟಿ ಶ್ರಿಯಾ ಶರಣ್ ಅವರು, ನನಗೆ ಬೆಂಗಳೂರು ಬಹಳ ಇಷ್ಟ. ಇಲ್ಲಿನ ಪರಿಸರ ಹಾಗೂ ಪ್ರೇಕ್ಷಣೀಯ ಸ್ಥಳಗಳಿಗೆ ನಾನು ಅಭಿಮಾನಿ. ಇಂದು ಬೆಂಗಳೂರಿನ ಮಂತ್ರಿ ಮಾಲ್‌ನಲ್ಲಿ ಆಯೋಜಿಸಲಾಗಿರುವ ನೂರು ದಿನಗಳ ಶಾಪಿಂಗ್ ಫೆಸ್ಟಿವಲ್ ಉದ್ಘಾಟಿಸುತ್ತಿರುವುದು ಬಹಳ ಸಂತೋಷವಾಗಿದೆ. ಶಾಪಿಂಗ್ ಮಾಡುವುದು ನನಗೂ ಬಹಳ ಇಷ್ಟ. ಮುಂಚೆ ನನಗಾಗಿ ಶಾಪಿಂಗ್ ಮಾಡುತ್ತಿದ್ದೆ. ಈಗ ಮಕ್ಕಳಿಗಾಗಿ ಹೆಚ್ಚು ಶಾಪಿಂಗ್ ಮಾಡುತ್ತೇನೆ. ಮಂತ್ರಿ ಮಾಲ್‌ನಲ್ಲಿ ಆಯೋಜಿಸಲಾಗಿರುವ ಈ ಶಾಪಿಂಗ್ ಫೆಸ್ಟಿವಲ್‌ನಲ್ಲಿ ನೀವೆಲ್ಲಾ ಕುಟುಂಬ ಸಮೇತ ಪಾಲ್ಗೊಂಡು ಭರ್ಜರಿ ಶಾಪಿಂಗ್ ಮಾಡಿ ಹಬ್ಬಗಳನ್ನು ಅದ್ಧೂರಿಯಾಗಿ ಆಚರಿಸಿ. ಸಾಕಷ್ಟು ರಿಯಾಯಿತಿ ಸಹ ಈ ಸಮಯದಲ್ಲಿದೆ ಎಂದರು.

ಮಂತ್ರಿ ಮಾಲ್‌ನ ಮುಖ್ಯಸ್ಥರಾದ ಕಾಮಾಕ್ಷಿ ಮಂತ್ರಿ ಮಾತನಾಡಿ, ನಮ್ಮ ಮಂತ್ರಿ ಮಾಲ್‌ನ ಶಾಪಿಂಗ್ ಫೆಸ್ಟಿವಲ್ ಉದ್ಘಾಟನೆ ಮಾಡಿದ ಶ್ರಿಯಾ ಶರಣ್ ಅವರಿಗೆ ಧನ್ಯವಾದ. ನೂರು ದಿನಗಳ ಶಾಪಿಂಗ್ ಫೆಸ್ಟಿವಲ್ ಇಂದಿನಿಂದ ಆರಂಭವಾಗಿದ್ದು, ಜನವರಿ 26ರವರೆಗೂ ನಡೆಯಲಿದೆ. ಈ ಸಮಯದಲ್ಲಿ ದೀಪಾವಳಿ, ಕ್ರಿಸ್‌ಮಸ್ ಹಾಗೂ ಸಂಕ್ರಾಂತಿ ಹಬ್ಬಗಳು ಬರುತ್ತದೆ‌. ಎಲ್ಲಾ ಹಬ್ಬಗಳಿಗೂ ತಾವು ಕುಟುಂಬ ಸಮೇತ ಬಂದು ನಮ್ಮ ಮಾಲ್‌ನಲ್ಲಿ ಶಾಪಿಂಗ್ ಮಾಡಿ‌. ಎಲ್ಲದರ ಮೇಲೂ ಸಾಕಷ್ಟು ರಿಯಾಯಿತಿ ಜೊತೆಗೆ ಅನೇಕ ಬಹುಮಾನಗಳು ಇದೆ‌. ಮೊದಲ ಬಹುಮಾನ ಕಾರ್ ಆಗಿರುತ್ತದೆ‌. ಈ ಸಂದರ್ಭದಲ್ಲಿ ಸಾಕಷ್ಟು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಹ ಹಮ್ಮಿಕೊಂಡಿದ್ದೇವೆ ಎಂದು ಕಾಮಾಕ್ಷಿ ಮಂತ್ರಿ ತಿಳಿಸಿದರು.

ಈ ಸಂದರ್ಭದಲ್ಲಿ ರಿಟೈಲ್ ಮತ್ತು ಕಮರ್ಷಿಯಲ್ ಸಿ.ಇ.ಒ ವಿಶಾಲ್ ಗುಪ್ತ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Singham Again: ‘ಸಿಂಗಂ ಅಗೇನ್’ ಸಿನಿಮಾದ ಮೊದಲ ಹಾಡು ರಿಲೀಸ್‌; ಹನುಮಂತನಾಗಿ ಮಿಂಚು ಹರಿಸಿದ ರಣವೀರ್‌ ಸಿಂಗ್‌