Wednesday, 11th December 2024

ಎಲೆಕ್ಟ್ರಿಕ್ ಬೈಕ್ ಅಂಗಡಿಗೆ ಬೆಂಕಿ: ನಂದಿಸಲು ಅಗ್ನಿಶಾಮಕ ದಳ ಹರಸಾಹಸ

ರಾಯಚೂರು : ಶಾರ್ಟ್ ಸರ್ಕ್ಯೂಟ್ ನಿಂದ ಚಾರ್ಜಿಂಗ್ ಬೈಕ್ ಅಂಗಡಿಗೆ ಬೆಂಕಿ ಹೊತ್ತಿಕೊಂಡ ಘಟನೆ ನಗರದ ಮಹಾವೀರ ವೃತದಲ್ಲಿ ಜರುಗಿದೆ.

ರಾಯಚೂರು ನಗರದ ಮಹಾವೀರ ಚೌಕ್ ನಲ್ಲಿ ಘಟನೆ ನಡೆದಿದ್ದು, ಆರ್.ಕೆ.ಭಂಡಾರಿ ‌ಎಂಬುರಿಗೆ ಸೇರಿದ ಅಂಗಡಿಯಲ್ಲಿ ಎಲೆಕ್ಟ್ರಿಕ್ ವಾಹನಗಳು ಇದ್ದವು ಎಂದು ಹೇಳಲಾಗುತ್ತಿದೆ. ಎರಡು ಅಂತಸ್ತಿನ ಕಟ್ಟಡಕ್ಕೆ ಬೆಂಕಿ ವ್ಯಾಪಿಸಿದ್ದು, ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.

ಎರಡು ಅಗ್ನಿಶಾಮಕ ವಾಹನಗಳಿಂದ ಬೆಂಕಿ ನಂದಿಸುವ ಕಾರ್ಯ ನಡೆದಿದ್ದು, ಬೆಂಕಿ ಕೆನ್ನಾಲಿಗೆ ಎರಡು ಅಂತಸ್ತಿನ ಕಟ್ಟಡ ಸುಟ್ಟು ಕರಕಲಾಗಿದೆ. ಘಟನೆಯು ಸದರ್ ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.