Sunday, 24th November 2024

ಎನ್ಎಬಿಹೆಚ್ ಮಾನ್ಯತೆ ಪಡೆದ ಜಿಲ್ಲೆಯ ಮೊದಲ ಆಸ್ಪತ್ರೆ ಸಿದ್ಧಗಂಗಾ

ತುಮಕೂರು: ಕಳೆದ ಐದು ರ‍್ಷದಿಂದ ಸಿದ್ಧಗಂಗಾ ಆಸ್ಪತ್ರೆ ಸುರಕ್ಷಿತ ಚಿಕಿತ್ಸೆ ಹಾಗೂ ಉನ್ನತ ರ‍್ಜೆಯ ಸೇವೆಯಲ್ಲಿ ಎನ್ಎಬಿಹೆಚ್ ಮಾನದಂಡವನ್ನು ಪೂರೈಸಿ ರಾಷ್ಟ್ರೀಯ ಮಾನ್ಯತೆ ಪಡೆದಿರುವುದು ಸಂತಸವನ್ನುಂಟು ಮಾಡಿದೆ ಎಂದು ಸಿದ್ಧಗಂಗಾ ಮಠಾಧ್ಯಕ್ಷರಾದ ಸಿದ್ಧಲಿಂಗ ಸ್ವಾಮೀಜಿ ತಿಳಿಸಿದ್ದಾರೆ.

ಶಿವಕುಮಾರ ಶ್ರೀಗಳ ಅಪೇಕ್ಷೆಪಟ್ಟಿದ್ದ ಆರೋಗ್ಯ ದಾಸೋಹವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ವಿಸ್ತರಿಸಲು ಇದು ಸಹಕಾರಿ ಯಾಗಲಿದೆ. ಮಾನ್ಯತೆ ಹೊಂದಲು ಶ್ರಮಿಸಿದ ಆಸ್ಪತ್ರೆ ವೃಂದ ಹಾಗೂ ಚಿಕಿತ್ಸೆ ಪಡೆದು ಗುಣಮುಖರಾಗಿ ಉತ್ತಮ ಅಭಿಪ್ರಾಯ ನೀಡಿದ ಪ್ರತಿಯೊಬ್ಬರಿಗೂ ಅಭಿನಂದನೆಗಳು ಎಂದಿದ್ದಾರೆ.

ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಮತ್ತು ಓದಿ

http://vishwavani.news/pvs-enters-final/

ಈ ಕುರಿತು ಮಾತನಾಡಿದ ಆಸ್ಪತ್ರೆ ನರ‍್ದೇಶಕ ಡಾ.ಎಸ್.ಪರಮೇಶ್, ಸಿದ್ಧಗಂಗಾ ಆಸ್ಪತ್ರೆ ಆರಂಭವಾದಾಗಿನಿಂದಲೂ ಉತ್ತಮ ಗುಣಮಟ್ಟ ಹೊಂದುತ್ತಾ ಬಂದಿದ್ದು ಕಳೆದ ರ‍್ಷದ ಹಿಂದೆ ಪ್ರಾಥಮಿಕ ಹಂತದ ಮಾನ್ಯತೆ ಪಡೆದಿತ್ತು. ನಿರಂತರ ಪರಿಶೀಲನೆ ಹಾಗೂ ಸಾಕಷ್ಟು ಅಧ್ಯಯನದ ನಂತರ ನ್ಯಾಷನಲ್ ಅಕ್ರಿಡಿಟೇಶನ್ ಬರ‍್ಡ್ ಫಾರ್ ಹಾಸ್ಪಿಟಲ್ ಅಂಡ್ ಹೆಲ್ತ್ ಕೇರ್ ಪ್ರವೈರ‍್ಸ್ ನಮಗೆ ಮಾನ್ಯತೆ ನೀಡಿದ್ದು, ಎನ್ ಎಬಿಹೆಚ್ ಮಾನ್ಯತೆ ಪಡೆದ ಜಿಲ್ಲೆಯ ಮೊದಲ ಆಸ್ಪತ್ರೆ ನಮ್ಮದಾಗಿದೆ ಎಂದರು.

ಸಿದ್ಧಗಂಗಾ ಮೆಡಿಕಲ್ ಕಾಲೇಜು ಪ್ರಾಂಶುಪಾಲರಾದ ಡಾ.ಶಾಲಿನಿ ಮಾತನಾಡಿ, ಎನ್ಎಬಿಹೆಚ್ ರಾಷ್ಟ್ರೀಯ ಮಾನ್ಯತೆ ಎನ್ನುವುದು ನಿರಂತರ ಶ್ರದ್ಧೆ ಹಾಗೂ ಪರಿಶ್ರಮದ ಫಲವಾಗಿ ದೊರಕಿರುವಂತಹದ್ದು.ಬೆಂಗಳೂರಿಗೆ ಸರಿಸಮಾನವಾಗಿ ಬೆಳೆಯುತ್ತಿರುವ ಕಲ್ಪತರು ನಾಡಿಗೆ ಇದೊಂದು ವೈದ್ಯಕೀಯ ಶಕ್ತಿಯನ್ನು ನೀಡಲಿದೆ ಎಂದರು.

ಸೂಪರ್ ಸ್ಪೆಷಾಲಿಟಿ ವಿಭಾಗದ ಮುಖ್ಯಸ್ಥ ಹಾಗೂ ಹೃದ್ರೋಗ ತಜ್ಞ ಡಾ.ಭಾನುಪ್ರಕಾಶ್ ಹೆಚ್.ಎಂ.ಮಾತನಾಡಿ, ಹೃದ್ರೋಗ, ನೆಫ್ರಾಲಜಿ,ಯುರಾಲಜಿ, ನ್ಯೂರೋ ಸೇರಿದಂತೆ ಎಲ್ಲಾ ವಿಭಾಗಗಳಿಗೂ ಅನುಭವಿ ವೈದ್ಯರು ಹಾಗೂ ಸುಸ್ಸಜ್ಜಿತ ಚಿಕಿತ್ಸೆ ಹಾಗೂ ಪರೀಕ್ಷಾ ಕೊಠಡಿಗಳನ್ನು ಹೊಂದಿ ಶ್ರದ್ಧೆಯಿಂದ ಕರ‍್ಯನರ‍್ವಹಿಸಿದ ಕಾರಣದಿಂದ ಈ ಮಾನ್ಯತೆ ದೊರೆತಿದ್ದು ಮತ್ತಷ್ಟು ಸೇವೆಗೆ ನಾವು ವಿಸ್ತರಿಸಲು ಚಿಮ್ಮುಹಲಗೆಯಾಗಿದೆ ಎಂದರು.

ಮೆಡಿಕಲ್ ಕಾಲೇಜು ಸೂಪರಿಂಟೆಂಡೆಂಟ್ ಡಾ.ನಿರಂಜನ ಮರ‍್ತಿ, ಸಿಇಓ ಡಾ.ಸಂಜೀವ ಕುಮಾರ್, ರ‍್ಸಿಂಗ್ ವಿಭಾಗ ಮುಖ್ಯಸ್ಥ ನಾಗಣ್ಣ ಹಾಗೂ ಎನ್ ಎಬಿಹೆಚ್ ಗಾಗಿ ಶ್ರಮಿಸಿದ ಆಸ್ಪತ್ರೆ ಬಳಗ ಉಪಸ್ಥಿತರಿದ್ದರು.