Wednesday, 18th September 2024

ಉತ್ತಮ ಪರಿಸರ ವಿದ್ಯಾರ್ಥಿಗಳ ಮನೋವಿಕಾಸಕ್ಕೆ ಪೂರಕ : ಸಿದ್ದಲಿಂಗ ಸ್ವಾಮೀಜಿ

ತುಮಕೂರು : ಉತ್ತಮ ಪರಿಸರ ವಿದ್ಯಾರ್ಥಿಗಳ ಮನೋವಿಕಾಸಕ್ಕೆ ಅತ್ಯಂತ ಪೂರಕವಾಗಿದ್ದು ಉತ್ತಮ ಪರಿಸರದ ವಾತವರಣದಲ್ಲಿ ಕಲಿಕೆ ಪ್ರಾರಂಭಿ ಸಿದ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉತ್ತಮ ಪರಿಸರ ನಿರ್ಮಾಣ ಸೃಷ್ಠಿಸುವುದರ ಜತೆಗೆ ಉತ್ತಮ ಸ್ಥಾನಮಾನ ಪಡೆದು ಸಮಾಜಕ್ಕೆ ಮಾದರಿಯಾಗುತ್ತಾರೆ ಎಂದು ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ತಿಳಿಸಿದರು.
ನಗರದ ಜಯನಗರ ಬಡಾವಣೆಯಲ್ಲಿ ನೂತನವಾಗಿ ಪ್ರಾರಂಭಗೊಂಡ ರೈನ್ ಬೋ ಇಂಟರ್ ನ್ಯಾಷನಲ್ ಶಾಲೆಯ ಉದ್ಘಾಟನಾ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಪ್ರಸ್ತುತ ಸಮಾಜದಲ್ಲಿ ವಿದ್ಯೆ ಎಂಬುದು ಬಹಳ ಮಹತ್ವ ಪೂರ್ಣವಾದ ಪಾತ್ರ ವಹಿಸಿದ್ದು ಉತ್ತಮ ನಾಗರಿಕ ಸಮಾಜಕ್ಕೆ ಹಾಗೂ ರಾಷ್ಟçದ ಅಭಿವೃದ್ದಿಗೆ ಅತ್ಯಂತ ಅವಶ್ಯಕವಾಗಿದೆ ಎಂದರು.
ಶಿವಗಂಗೆಯ ಶ್ರೀ ಹೊನ್ನಗವಿ ಮಠದ ರುದ್ರಮುನಿ ಸ್ವಾಮೀಜಿ, ಸಂಸದ ಬಸವರಾಜು ಮಾತನಾಡಿದರು.
ಈ ವೇಳೆ ಎಸ್‌ವಿಎಸ್ ಶಿಕ್ಷಣ ಸಂಸ್ಥೆಯ ಸಮೂಹಗಳ ಅಧ್ಯಕ್ಷರಾದ ಕೆ ಹಯೆಚ್ ಪರಮಶಿವಯ್ಯ, ಕಾರ್ಯದರ್ಶಿ ಡಾ. ಕೆ.ಪಿ ಸುರೇಶ್ ಬಾಬು, ಶಾಸಕ ಜಿ.ಬಿ ಜ್ಯೋತಿಗಣೇಶ್, ಪ್ರಾಚಾರ್ಯ ಪುಟ್ಟಬುದ್ದಿ, ಡಾ.ಕೆ.ಪಿ ಭೂಷಣ್, ಶಾಲಾ ಆಡಳಿತ ಮಂಡಳಿ ಸೇರಿದಂತೆ ಸಿಬ್ಬಂದಿ ಉಪಸ್ಥಿರಿದ್ದರು.

Leave a Reply

Your email address will not be published. Required fields are marked *