Saturday, 14th December 2024

ನೆಲೆಯಿಲ್ಲದೆ ಅಲೆಯುತ್ತಿರುವ ಸಿದ್ದರಾಮಯ್ಯ

ತಿಪಟೂರು: ರಾಜ್ಯದಲ್ಲಿ ೫ ವರ್ಷ ಮುಖ್ಯಮಂತ್ರಿಯಾಗಿ ಸ್ವಂತ ನೆಲೆಯಿಲ್ಲದೆ ಅಲೆಮಾರಿಯಾಗಿ ಅಲೆಯುತ್ತಿರುವುದು ನಾಚಿಕೆಯಾಗಬೇಕು. ಕಷ್ಟಕಾಲದಲ್ಲಿ ಬಾದಾಮಿ ಕ್ಷೇತ್ರ ನೆಲೆಕೊಟ್ಟಿದ್ದು ಅಂತಹ ಜನಕ್ಕೆ ಮೋಸ ಮಾಡಿ ಕೊಲಾರಕ್ಕೆ ಬರುವುದು ಒಳ್ಳೆಯದಲ್ಲ. ತಾಕತ್ತು ಇದ್ದರೆ ಮೈಸೂರು ಜಿಲ್ಲೆಯಲ್ಲಿ ನಿಲ್ಲಲಿ, ಕೋಲಾರದಲ್ಲಿ ರಮೇಶ್‌ಕುಮಾರ್‌ರವರು ಖೆಡ್ಡಾ ತೋಡಿದ್ದಾರೆ.

ಅದರಲ್ಲಿ ಮುಳುಗುವುದು ಸಹಜವಾಗಿದೆ. ಸ್ವಾರ್ಥಕ್ಕೆ ಇವರನ್ನು ಬಳಸಿಕೊಳ್ಳುತ್ತಿದ್ದಾರೆ. ಸಚಿವ ಮಾಧುಸ್ವಾಮಿಯವರ ಮಾತಿನಂತೆ ಚಿಕ್ಕನಾಯಕನಹಳ್ಳಿಗೆ ಬನ್ನಿ ಎಂದು ವಿಧಾನ ಪರಿಷತ್ತಿನ ಮುಖ್ಯ ಸಚೇತಕ ವೈ ಎ ನಾರಾಯಣಸ್ವಾಮಿ ತಿಳಿಸಿದರು.