ಮಧುಗಿರಿ : ಗ್ರಾಮೀಣ ಭಾಗದಲ್ಲಿ ಸಾರಿಗೆ ವ್ಯವಸ್ಥೆಯನ್ನು ಮತ್ತಷ್ಟೂ ಸರಳವಾಗಿಸಲು ಇಲಾಖೆ ಮುಂದಾಗಬೇಕೆ0ದು ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು.
ತಾಲೂಕಿನ ಬಸವನಹಳ್ಳಿ ಬಳಿಯ ಸಾರಿಗೆ ಡಿಪೋ ಆವರಣದಲ್ಲಿ ನೂತನವಾಗಿ ಆರಂಭ ವಾದ ಗಣೇಶನ ದೇಗುಲವನ್ನು ಉದ್ಘಾ ಟಿಸಿ ಮಾತನಾಡಿದ ಅವರು ಡಿಪೋ ಇರುವುದು ಕ್ಷೇತ್ರದಲ್ಲಿನ ಗ್ರಾಮೀಣ ಭಾಗದ ಜನರಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸುವ ಸಲುವಾಗಿ ಆದರೆ ಯಾವುದಾದರೂ ನೆಪ ಹೇಳಿ ಹಿಂಜರಿಯಬಾರದು.
ನಷ್ಟದ ಬಗ್ಗೆ ಯೋಚಿಸದೆ ಜನರಿಗೆ ಸಾರಿಗೆ ಸೇವೆ ನೀಡುವುದೇ ಸಂಸ್ಥೆಯ ಉದ್ದೇಶವಾಗಿರ ಬೇಕು. ಇಂದು ಆವರಣದಲ್ಲಿನ ಸಿಸಿ ಆವರಣದ ಕಾಮಗಾರಿಯನ್ನು ೨ ಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದು ನಿಲ್ದಾಣದಲ್ಲಿ ಸಮಸ್ಯೆಯಿಲ್ಲದಾಗಿದೆ. ಮುಂದುವರೆದು ಯಾವುದೇ ಸಮಸ್ಯೆ ಇದ್ದರೂ ತಿಳಿಸಿದರೆ ಸರ್ಕಾರದಿಂದ ಅಗತ್ಯ ಸಹಕಾರ ಕೊಡಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಡಿಪೋ ಮ್ಯಾನೇಜರ್, ಸಿಬ್ಬಂದಿಗಳು, ಗ್ರಾಮಸ್ಥರು ಹಾಗೂ ಜೆಡಿಎಸ್ ಕಾರ್ಯಕರ್ತರು ಇದ್ದರು.