Friday, 13th December 2024

ಸಿರಿಧಾನ್ಯ ಬಳಸಿ ಎಲ್ಲರೂ ಆರೋಗ್ಯವಂತರಾಗಲಿ: ಎಂ ಎನ್ ಭೀಮಶೆಟ್ಟಿ ಅಭಿಮತ

ಗುಬ್ಬಿ: ತಾಲ್ಲೂಕಿನ ಎಂ ಎನ್ ಕೋಟೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ವತಿಯಿಂದ ಭಾನುವಾರ ಹಮ್ಮಿ ಕೊಂಡಿದ್ದ ಸಿರಿಧಾನ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಸಿರಿಧಾನ್ಯ ಬಳಸುವುದರಿಂದ ಪೌಷ್ಠಿಕ ಆಹಾರ ಸೇವನೆಯಿಂದ ಹಲವಾರು ರೋಗಗಳಿಂದ ದೂರ ಉಳಿಯಬಹುದು.
ಪ್ರತಿಯೊಬ್ಬರ್ ಸಹ ಸಿರಿಧಾನ್ಯ ಪದಾರ್ಥಗಳನ್ನು ಬಳಸುವುದರಿಂದ ನಾವೆಲ್ಲರೂ ಸಹ ಅರೋಗ್ಯವಾಗಿ ಇರಬಹುದು.  ಮನುಷ್ಯ ನಿಗೆ ಇತ್ತೀಚಿನ ದಿನಗಳಲ್ಲಿ ಸಾಕಷ್ಚು ರೋಗ ಗಳಿಂದ ಬಳಲುತ್ತಿದ್ದಾರೆ ಇದಕ್ಕೆ ಎಲ್ಲ ಕಾರಣ ರಾಸಾಯನಿಕ ಧಾನ್ಯಗಳಿಂದ ಆದ್ದರಿಂದ ಎಲ್ಲರೂ ಸಹ ಸಾವಯುವ ಸಿರಿಧಾನ್ಯ ಬಳಸಿ ಆರೋಗ್ಯ ಕಾಪಾಡಿಕೊಳಬೇಕು ಎಂದರು.
ಗ್ರಾಮೀಣ ಭಾಗದಲ್ಲಿ ಸಾವಯುವ ಸಿರಿಧಾನ್ಯಗಳನ್ನು ಬಳುಸುವುದೇ ಕಡಿಮೆಯಾಗಿದೆ ಸಿರಿಧಾನ್ಯಗಳಾದ ನವಣೆ , ಆರ್ಕಾ , ಸಜ್ಜೆ , ಜೋಳ ವನ್ನು ಹೆಚ್ಚಾಗಿ ಬಳಸಬೇಕು ಸಿರಿಧಾನ್ಯಗಳಿಂದ ನಾರಿನ ಅಂಶ ಹೆಚ್ಚಾಗಿ ಇರುವುದುರಿಂದ ಮನುಷ್ಯರಿಗೆ ಪೌಷ್ಠಿಕ ಆಹಾರ ಹೆಚ್ಚಾಗಿ ಇರುತ್ತದೆ ಯಾವುದೇ ರೋಗಗಳಿಗೆ ತುತ್ತಾಗುವುದಿಲ್ಲ ಎಲ್ಲರು ಸಿರಿಧಾನ್ಯವನ್ನು ಬಳಸಬೇಕು ಎಂದು ತಿಳಿಸಿದರು.
ಜ್ಞಾನ ವಿಕಾಸ ಸಮನ್ವಯಾಧಿಕಾರಿ ಪ್ರೇಮ ಮಾತನಾಡಿ ಸಿರಿಧಾನ್ಯಗಳಿಂದ ದೇಹದಲ್ಲಿ ಕಬ್ಬಿನ ಅಂಶವನ್ನು ಕರಗಿಸುತ್ತದೆ. ಗ್ರಾಮೀಣ ಭಾಗದಲ್ಲಿ ಹೆಚ್ಚು ಮನೆಗಳಲ್ಲಿ ಸಿರಿಧಾನ್ಯ ಪದಾರ್ಥಗಳನ್ನು ಬಳಸಬೇಕು ಇದರಿಂದ ಎಲ್ಲರೂ ಆರೋಗ್ಯವಾಗಿ ಇರಲು ಸಾಧ್ಯವಾಗುತ್ತದೆ. ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಸದಸ್ಯರಿಗೆ ಮಾಹಿತಿ ನೀಡಲಾಗುತ್ತಿದೆ‌. ಎಲ್ಲರೂ ಸಿರಿದಾನ್ಯವನ್ನ ಬಳ ಸೋಣ ನಾವೆಲ್ಲರೂ ಸಹ ಆರೋಗ್ಯವಾಗಿ ಇರೋಣ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಒಕ್ಕೂಟ ಅಧ್ಯಕ್ಷ ರಾಜಶೇಖರ್ , ಜನಜಾಗೃತಿ ವೇಧಕೆ ಸದಸ್ಯ ರಂಗಸ್ವಾಮಿ, ವಲಯ ಮೇಲ್ವಿಚಾರಕ ಸುರೇಂದ್ರ ಸೇವಾ ಪ್ರತಿನಿಧಿ ಶಿವರತ್ನ, ಶಿವರಾಜು , ಮೇಘನಾ ಹಾಗೂ ಸಂಘದ ಸದಸ್ಯರು ಭಾಗವಹಿಸಿದ್ದರು.