ರಾಯಚೂರು : ದೇಶಾದ್ಯಂತ ಸಿರಿಧಾನ್ಯ ಬೆಳವಣಿಗೆ ಹೆಚ್ಚಾ ಗಿದೆ, ಸಿರಿಧಾನ್ಯಗಳ ಮಹತ್ವ ನಮ್ಮ ದೇಶದಲ್ಲಿ ಹೆಚ್ಚಾಗಬೇಕಾ ಗಿದೆ. ಇಂತಹ ಸಿರಿಧಾನ್ಯಗಳ ಕುರಿತು ಸಮಾವೇಶ ನಡೆದಿದೆ, ಈ ಸಮಾವೇಶ ಮುಖಾಂತರ ಇಡೀ ವಿಶ್ವಕ್ಕೆ ಸಿರಿಧಾನ್ಯ ಗಳ ಮಹತ್ವ ತಿಳಿಸಬೇಕಾಗಿದೆ ಎಂದು ರಾಯಚೂರಿನ ಕೃಷಿ ವಿವಿ ಆವರಣದಲ್ಲಿ ಏರ್ಪಡಿಸಿರುವ ಸಿರಿಧಾನ್ಯ ಗಳ ಸಮಾವೇಶ ಉದ್ದೇಶಿಸಿ ಕೇಂದ್ರ ಸಚಿವ ನಿರ್ಮಲಾ ಸೀತಾರಾಮನ್ ಹೇಳಿದರು.
ಕಾರ್ಯಕ್ರಮಕ್ಕೆ ಚಾಲನೆ ನೀಡುವ ಮೂಲಕ ಮಾತನಾಡಿದ ಕೇಂದ್ರ ಸಚಿವರು ಕನ್ನಡದಲ್ಲಿ ಭಾಷಣ ಆರಂಭಿಸಿದರು ನನಗೆ ತುಂಬಾ ಖುಷಿಯಾಗುತ್ತಿದೆ ಈ ಸಮಾವೇಶ ನೋಡಿ, ರಾಯಚೂರು ಸಿರಿಧಾನ್ಯ ಸಮಾವೇಶ ತುಂಬಾ ವಿಶೇಷವಾಗಿದೆ. ದೇಶಾದ್ಯಂತ ಸಿರಿಧಾನ್ಯ ಬೆಳವಣಿಗೆ ಹೆಚ್ಚಾಗಿದೆ, ಸಿರಿಧಾನ್ಯಗಳ ಮಹತ್ವ ನಮ್ಮ ದೇಶದಲ್ಲಿ ಹೆಚ್ಚಾಗಬೇಕಾಗಿದೆ. ಇಂತಹ ಸಿರಿಧಾನ್ಯಗಳ ಕುರಿತು ಸಮಾವೇಶ ನಡೆದಿದೆ, ಈ ಸಮಾವೇಶ ಮುಖಾಂತರ ಇಡೀ ವಿಶ್ವಕ್ಕೆ ಸಿರಿಧಾನ್ಯ ಗಳ ಮಹತ್ವ ತಿಳಿಸಬೇಕಾಗಿದೆ. ಸಿರಿಧಾನ್ಯಗಳ ಕುರಿತು ಪ್ರಚಾರ ಪಡಿಸು ವುದು ಅಗತ್ಯವಿದೆ. ಇಡೀ ವಿಶ್ವವೇ ಆರೋಗ್ಯಕರ ಆಹಾರ ಪದಾರ್ಥಗಳಿಗಾಗಿ ಎದುರು ನೋಡುತ್ತಿದೆ.
ಭಾರತ ವಿಶ್ವಕ್ಕೆ ಯೋಗಾದ ಮಹತ್ವ ತಿಳಿಸಿ ಕೊಟ್ಟಿದೆ, ಪೌಷ್ಟಿಕಾಹಾರ ಮತ್ತು ಆರೋಗ್ಯ ಆಹಾರಕ್ಕಾಗಿ ಇಡೀ ವಿಶ್ವದಲ್ಲೇ ಹುಡುಕಾಟ ನಡೆದಿದೆ. ನಮ್ಮ ದೇಶದಲ್ಲಿ ಸಿರಿಧಾನ್ಯ ಗಳ ಬೆಳವಣಿಗೆ ಹೆಚ್ಚಾಗಿದೆ. ಈ ಸಿರಿಧಾನ್ಯಗಳು ಆರೋಗ್ಯ ವೃದ್ಧಿ ಜೊತೆಗೆ ಪೌಷ್ಟಿಕ ಆಹಾರವೂ ಸಹ ಆಗಿದೆ. ಇಂತಹ ಪೌಷ್ಟಿಕ ಯುಕ್ತ ಆಹಾರದ ಪರಿಚಯ ಪ್ರಪಂಚಕ್ಕೆ ಮಾಡಬೇಕಾಗಿದೆ. ಸಿರಿಧಾನ್ಯಗಳ ಸಂಸ್ಕರಣಾ ಘಟಕಗಳಿಗೆ ಐದು ವರ್ಷಗಳ ತೆರಿಗೆ ಮುಕ್ತ ನೀಡಲಾಗುವುದು, ಸಿರಿಧಾನ್ಯ ಗಳ ಸಂಸ್ಕರಣಾ ಘಟಕಗಳು ನೂರಾರು ಮಹಿಳೆಯರಿಗೆ ಉದ್ಯೋಗ ನೀಡಲಿವೆ. ಸಿರಿಧಾನ್ಯಗಳ ಮಾರುಕಟ್ಟೆ ನಿರ್ಮಾಣಕ್ಕೆ ಬೇಕಾದ ವ್ಯವಸ್ಥೆಗೆ ಸರ್ಕಾರ ಮಾಡಲು ಸಿದ್ಧವಾಗಿದೆ.
ಇನ್ನೂ ಒಂದು ಜಿಲ್ಲೆಗೆ ಒಂದು ಆಹಾರ ಪದಾರ್ಥ ಆಗಬೇಕು, ಅಂದಾಗ ಇಡೀ ದೇಶಕ್ಕೆ ಕಲ್ಯಾಣ ಕರ್ನಾಟಕ ಸಿರಿಧಾನ್ಯಗಳ ತಾಣವಾಗಲಿದೆ. ಕಾಫಿ ಅಂದ್ರೆ ಕೊಡಗು ಆಗಿದಂತೆ ಕಲ್ಯಾಣ ಕರ್ನಾಟಕ ಸಿರಿಧಾನ್ಯಗಳ ಕೇಂದ್ರ ಆಗಬೇಕು ಎಂದರು. ಈ ವೇಳೆ ರಾಯಚೂರು ಕೃಷಿ ವಿವಿಗೆ ಸಿರಿಧಾನ್ಯಗಳ ಅಭಿವೃದ್ಧಿಗಾಗಿ 25 ಕೋಟಿ ಊಗಳನ್ನು ನಿರ್ಮಲಾ ಸೀತಾರಾಮನ್ ಅವರು ಘೋಷಣೆ ಮಾಡಿದರು. ಸಿರಿಧಾನ್ಯಗಳ ಮಹತ್ವ ತಿಳಿದು ಜನರು ಇದರ ಉಪಯೋಗ ಪಡೆಯಬೇಕು. ಆಗ G- 20 ದೇಶಗಳ ಸಭೆಯಲ್ಲಿ ಸಿರಿಧಾನ್ಯಗಳ ಕುರಿತು ಭಾರತಕ್ಕೆ ಸ್ಥಾನ ಸಿಗಲಿದೆ ಎಂದ ನಿರ್ಮಲಾ ಸೀತಾರಾಮನ್ ಎಲ್ಲಾ ರೈತರಿಗೆ ಮತ್ತು ಕೃಷಿ ತಜ್ಞರಿಗೆ ಹೆಚ್ಚು ಸೇರಿದಾನ್ಯಗಳನ್ನ ಬೆಳೆಯಬತ್ತ ಗಮನ ಹರಿಸಲು ಕಿವಿಮಾತು ಹೇಳಿದರು.