ರಾಯಚೂರು : ಸಿರಿಧಾನ್ಯ ಬೆಳೆಯುವುದರಿಂದ ಪರಿಸರ ನಾಶ ತಪ್ಪುತ್ತದೆ,ಕಾರಣ ಬೆಳೆಗಳಿಗೆ ರಾಸಾಯನಿಕ ಬಳಕೆ ಮಾಡಲಾಗುವುದಿಲ್ಲ, ಸಿರಿಧಾನ್ಯವನ್ನು ಆಹಾರವಾಗಿ ಉಪಯೋಗಿಸುವುದರಿಂದ ಮನುಷ್ಯನ ಆರೋಗ್ಯವು ಸುಧಾರಿಸುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಗೌರವಾಧ್ಯಕ್ಷ ಚಾಮರಸ್ ಮಾಲಿ ಪಾಟಿಲ್ ಹೇಳಿದರು.
ಪತ್ರಿಕಾ ಭವನದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು. ಕೇಂದ್ರ ಸರ್ಕಾರ ಸಿರಿಧಾನ್ಯ ಉತ್ತೇಜನಕ್ಕಾಗಿ ಅಭಿವೃದ್ಧಿಗಾಗಿ ಗಮನ ಹರಿಸಿದ್ದು ಕಾರ್ಯಕ್ರಮ ರೂಪಿಸಿತು. ರೈತ ಸಂಘ ಹೃತ್ಪೂರ್ವಕವಾಗಿ ಸ್ವಾಗತಿಸು ತ್ತದೆ. ಈ ಹಿಂದೆ ಸಿರಿ ಧಾನ್ಯ ಬೆಳೆಗಳಿಗೆ ಕುಮಾರಸ್ವಾಮಿಯವರು 10,000 ನೀಡುತ್ತಿದ್ದರು.
ಇದೀಗ ಕೇಂದ್ರ ಸರ್ಕಾರ ಈ ಒಂದು ಕಾರ್ಯಕ್ರಮ ಹಮ್ಮಿಕೊಂಡಿದೆ. ಆದರೆ ಈ ಕಾರ್ಯಕ್ರಮ ಯಾವ ರೀತಿ ಅನುಷ್ಠಾನ ಮಾಡಬೇಕು ಎನ್ನುವ ಬಗ್ಗೆ ಸರಿಯಾದ ಕ್ರಮ ಕೇಂದ್ರ ಸರ್ಕಾರದಲ್ಲಿ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕಾರಣ ಇತ್ತೀಚೆಗೆ ನಡೆದ ಒಂದು ಕಾರ್ಯಕ್ರಮದಲ್ಲಿ ರೈತರ ಭಾಗವಹಿಸುವಿಕೆ ಇರಲಿಲ್ಲ. ರೈತರಿಗೆ ಮಾಹಿತಿಯೇ ಇಲ್ಲ. ಇತ್ತೀಚೆಗೆ ರಾಯಚೂರು ಕೃಷಿ ವಿವಿಯಲ್ಲಿ ನಡೆದ ಒಂದು ದೊಡ್ಡ ಕಾರ್ಯ ಕ್ರಮವನ್ನು ಒಂದು ಸಣ್ಣ ಸಭಾಂಗಣದಲ್ಲಿ ಕಾರ್ಯಕ್ರಮ ಮಾಡಿದ್ದು ರೈತರನ್ನ ದೂರವಿಟ್ಟು ಕಾರ್ಯಕ್ರಮ ಮಾಡಲು ಕಾರಣವೇನು ಎಂದು ಪ್ರಶ್ನಿಸಿದರು.
ಆರ್ಥಿಕ ಸಚಿವರಾದ ನಿರ್ಮಲಾ ಸೀತಾರಾಮನ್ 25 ಕೋಟಿ ಕೊಟ್ಟಿದ್ದು ಸ್ವಾಗತ. ಆದರೆ ಪ್ರಸ್ತುತ 40% ರಾಜಕೀಯದಲ್ಲಿ ಈ ಒಂದು ಅನುದಾನ ಸಿಕ್ಕರೆ ಏನು ಗತಿ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕಾರ್ಯಕ್ರಮದ ಬಗ್ಗೆ ವಿಶ್ವವಿದ್ಯಾಲಯ ಕುಲಪತಿಗಳಿಗೆ ಪ್ರಶ್ನಿಸಿದ್ದಾರೆ ಈ ಒಂದು ಕಾರ್ಯಕ್ರಮದ ಜವಾಬ್ದಾರಿ ನಮ್ಮ ಮೇಲೆ ಇಲ್ಲ ಇಂದು ಬೇರೆವರ ಮೇಲೆ ತಳ್ಳಿ ಹಾಕಿದ್ದು ಸಮಾಜಸಬಲ್ಲ ಎಂದರು. ಕಾರಣ ಈ ಒಂದು ಯೋಜನೆಯಲ್ಲಿ ರೈತರನ್ನು ಒಳಪಡಿಸಿಕೊಂಡು ಯೋಜನೆಯ ಬಗ್ಗೆ ಚರ್ಚೆ ಮಾಡುವ ಮುಖಾಂತರ ಯೋಜನೆಯ ಯಶಸ್ವಿ ಮಾಡಲು ಅಧಿಕಾರಿಗಳು ಮುಂದಾಗಬೇಕು ಎಂದು ಹೇಳಿದರು.
ಇನ್ನು ಜಿಲ್ಲೆಯಲ್ಲಿ ನಡೆಯುತ್ತಿರುವ ಏಮ್ಸ್ ಹೋರಾಟ ವಿಚಾರಕ್ಕೆ ಸಂಬಂಧಿಸಿದಂತೆ ಕೇವಲ ನಾಲ್ಕು ಜನರ ನಿಯೋಗವನ್ನು ಕರೆದಿದ್ದಾರೆ ಎಂದು ಮುಖ್ಯಮಂತ್ರಿಗಳ ವಿರುದ್ಧ ಸಮಾಧಾನಪಡಿಸಿದರು. ಮುಖ್ಯಮಂತ್ರಿಗಳಿಗೆ ಒಂದು ಖಾಸಗಿ ಆಸ್ಪತ್ರೆ ಉದ್ಘಾಟಿಸಲು ಸಮಯವಿದೆ ಆದರೆ ಸಮಸ್ಯೆಗಳ ಬಗ್ಗೆ ಚರ್ಚಿಸಲು ಸಮಯವಿಲ್ಲ. ಆದರೆ ಇದು ಮುಖ್ಯಮಂತ್ರಿಗಳ ತಪ್ಪಲ್ಲ, ಸ್ಥಳೀಯ ಜನಪ್ರತಿನಿಧಿಗಳ ಒಂದು ತಪ್ಪು ಕನಿಷ್ಠ ಪಕ್ಷ ಹೋರಾಟಗಾರರನ್ನು ಕರೆದು ಈ ವಿಚಾರದ ಬಗ್ಗೆ ಮಾತನಾಡಿಸ ಬೇಕಿತ್ತು. ಆದರೆ ಈ ಸಂಸ್ಥೆ ಇಲ್ಲಿಗೆ ಬರುವುದು ಸ್ವತಃ ಜನಪ್ರತಿನಿಧಿಗಳಿಗೆ ಇಷ್ಟವಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.
ಮುರುಗ ಶ್ರೀಗಳ ವಿಚಾರಕ್ಕೆ ಸಂಬಂಧಿಸಿದಂತೆ ಅವರ ಮೇಲೆ ಬಂದಿರುವಂತಹ ಒಂದು ಆಪಾದನೆ ಪ್ರಕಾರ ಪೋಕ್ಸೊ ಕಾಯಿದೆ ಏನು ಹೇಳುತ್ತದೆ ಅದರ ಪ್ರಕಾರ ತನಿಕೆ ನಡೆಸಬೇಕು ಮತ್ತು ಇಲ್ಲಿ ಯಾವುದೇ ರೀತಿಯಾದ ಜನಪ್ರತಿನಿಧಿಗಳು ಒತ್ತಡ ಹೇರಬಾರದು ಎಂದು ಅಸಮಾಧಾನ ಹೇಳಿದರು.
ಈ ಸಂಧರ್ಭದಲ್ಲಿ ಮಲ್ಲಣ್ಣ ದಿನ್ನಿ, ಅಬ್ದುಲ್ ಮಜೀದ್, ದೇವರಾಜ್ ನಾಯಕ್, ಶಂಕ್ರಪ್ಪ ದೇವತಗಲ್ ಉಪಸ್ಥಿತರಿದ್ದರು.