Monday, 14th October 2024

ಅನಧಿಕೃತ ತಾತ್ಕಾಲಿಕ ಶೆಡ್ ತೆರವು: ಕತ್ತಿಯಿಂದ ಹಲ್ಲೆ

ಶಿರಸಿ: ಅನಧಿಕೃತ ತಾತ್ಕಾಲಿಕ ಶೆಡ್ ತೆರವುಗೊಳಿಸಲು ಸೂಚಿಸಿದ ಅರಣ್ಯಾಧಿಕಾರಿಗಳ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿದ ಘಟನೆ ಸಿದಗದಾಪುರ ತಾಲೂಕಿನ ಕಾನಸೂರ ಅರಣ್ಯ ವ್ಯಾಪ್ತಿಯಲ್ಲಿ ನಡೆದಿದೆ.

ಅರಣ್ಯಾಧಿಕಾರಿಗಳ ಮೇಲೆ ಕತ್ತಿಯಿಂದ ಹಲ್ಲೆ ಮಾಡಿದ ಅರಣ್ಯ ಅತಿಕ್ರಮಣದಾರು. ಈ ಘಟನೆಯಲ್ಲಿ ಡಿಆರ್‌ಎಫ್ಒ ವಿಶ್ವನಾಥ ತಿಮ್ಮ ನಾಯ್ಕ್ (34) ಅವರ ಒಂದು ಬೆರಳು ಕಟ್‌ ಆಗಿದ್ದು, ಫಾರೆಸ್ಟ್ ಗಾರ್ಡ್ ರಾಜೇಶ್ ಎಂಬವರಿಗೂ ಗಾಯವಾಗಿದೆ.

ಕಾನಸೂರಿನ ಬೀಳ್‌ಗೊಡ್ ಬಾಳೆಕೈ ಗ್ರಾಮದ ನಿವಾಸಿ ಮಹಾಬಲೇಶ್ವರ ಚಂದು ಮರಾಠಿ (50) ಎಂಬವನೇ ಕತ್ತಿಯಿಂದ ಹಲ್ಲೆ ನಡೆಸಿದ ಆರೋಪಿಯಾಗಿದ್ದು ಪ್ರಖರಣ ದಾಖಲಾ ಗಿದೆ. ಮಾಲ್ಕಿ ಜಾಗ ಹೊರತುಪಡಿಸಿ ಅರಣ್ಯ ಜಾಗದಲ್ಲಿ ತಾತ್ಕಾಲಿಕ ಶೆಡ್ ನಿರ್ಮಿಸಿದ ಬಗ್ಗೆ ಅಧಿಕಾರಿಗಳು ಪ್ರಶ್ನಿಸಿದ್ದರಿಂದ ಹಲ್ಲೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಅಲ್ಲದೇ, ದಾಖಲೆಗಳನ್ನು ತಂದುಕೊಡುವಂತೆ ಸೂಚಿಸಿದ್ದ ಅರಣ್ಯಾಧಿಕಾರಿಗಳು. ಈ ವೇಳೆ ಮಾತಿಗೆ ಮಾತು ಬೆಳೆದು ಅಧಿಕಾರಿಗಳ ಮೇಲೆ ಏಕಾಏಕಿ ಕತ್ತಿ ಬೀಸಿದ್ದ ಆರೋಪಿ ಎನ್ನಲಾಗಿದೆ. ಅಚಾನಕ್ ಆರೋಪಿ ಕತ್ತಿ ಬೀಸಿದ್ದರಿಂದ ಗಂಭೀರ ಗಾಯಗೊಂಡ ಅಧಿಕಾರಿ ಚಿಕಿತ್ಸೆಗಾಗಿ ಶಿರಸಿ ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಹಾಗೂ ಕರ್ತವ್ಯಕ್ಕೆ ಅಡ್ಡಿ ಪ್ರಕರಣ ದಾಖಲಾಗಿದೆ.

*

ನಾವು ಈ ಕುರಿತಂತೆ ಪೊಲೀಸ್ ಇಲಾಖೆಗೆ ದೂರು ನೀಡಿದ್ದೇವೆ. ಈ ರೀತಿ ಕರ್ತವ್ಯಕ್ಕೆ ಅಡ್ಡಿ ಪಡಿಸಿ ಹಲ್ಲೆ ನಡೆಸಿರುವುದು ಅಕ್ಷಮ್ಯ ಅಪರಾಧ. ಪೊಲೀಸ್ ಇಲಾಖೆ ಯಾವ ಕ್ರಮ ಕೈಗೊಳ್ಳುತ್ತದೆ ನೋಡಬೇಕಿದೆ.
ಡಿಎಫ್ ಓ. ಡಾ.ಅಜ್ಜಯ್ಯ