Sunday, 15th December 2024

Sirsi News: ರಿಂಗ್ ಸ್ಪಾಟ್ ರೋಗ: ರೈತರಿಗೆ ತೊಂದರೆ

ಶಿರಸಿ: ಅಡಕೆ ಗಿಡಗಳಿಗೆ ರಿಂಗಸ್ಪಾಟ್ ಎನ್ನುವ ರೋಗ ಬಂದಿದ್ದು, ರೈತರು ಸಾಕಷ್ಟು ಹೈರಾಣಾಗಿದ್ದಾರೆ. ಈಗಾಗಲೇ ಎಲೆ ಚುಕ್ಕಿ ರೋಗ ಬಂದು ಬೆಳೆ, ತೋಟಗಳನ್ನೇ ಕಳೆದುಕೊಂಡಿದ್ದಾರೆ. ಇದೀಗ ಹೊಸದಾಗಿ ಬಂದಿರುವ ಈ ರಿಂಗ್ ಸ್ಪಾಟ್ ರೋಗ ಅನೇಕ ಕಡೆಗಳಲ್ಲಿ ರೈತರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ತೋಟಗಾರಿಕಾ ಸಚಿವರು ತಕ್ಷಣ ಕಾರ್ಯ ಪ್ರವ್ರತ್ತರಾಗಬೇಕು ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಆಗ್ರಹಿಸಿದ್ದಾರೆ.

ಅವರಿಂದು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.