Thursday, 12th December 2024

ಮೀನುಗಾರರ ಬಲೆಗೆ ಬಿದ್ದ ಹಾರುವ ಮೀನು

ಶಿರಸಿ: ಮತ್ಸಲೋಕದಲ್ಲಿ ಅಚ್ಚರಿ ಮೂಡಿಸುವ ಹಾರುವ ಮೀನೊಂದು ಅಂಕೋಲಾದ ಭಾವಿಕೇರಿಯ ಮೀನುಗಾರರ ಬಲೆಗೆ ಬಿದ್ದು, ಬೆರಗು ಮೂಡಿ ಸಿದೆ.

ಬಲೆಗೆ ಬಿದ್ದ ಈ ಪ್ಲಾಯಿಂಗ್ ಫಿಶ್ ವಿಶಿಷ್ಟ ದೇಹ ರಚನೆ ಹೊಂದಿದ್ದು, ಈ ಹಾರುವ ಮೀನನ್ನು “Exocoetidae’ ಎಂದು ವೈಜ್ಞಾನಿಕವಾಗಿ ಹೆಸರಿಸ ಲಾಗಿದೆ. ಇಂಗ್ಲೀಷ್‌ನಲ್ಲಿ ‘flaying fish’ ಎಂದು ಹೇಳಲಾಗುವ ಹಾರುವ ಮೀನು ಉದ್ದನೆಯ ರೆಕ್ಕೆಗಳೊಂದಿಗೆ ಸಮುದ್ರದ ಮೇಲ್ಬಾಗಕ್ಕೆ ಜಿಗಿಯುವ ವಿಶಿಷ್ಟ ಗುಣ ಹೊಂದಿದೆ. ವಿಭಿನ್ನವಾದ ರೆಕ್ಕೆಗಳನ್ನು ಬಳಸಿಕೊಂಡು 50 ಮೀ. ವರೆಗೂ ಇವು ಹಾರಬಲ್ಲವು ಎಂದು ಮತ್ಸ್ಯ ತಜ್ಞರು ತಿಳಿಸಿದ್ದಾರೆ.