ಶಿರಸಿ: ಕೆಡಿಸಿಸಿ ಅಧ್ಯಕ್ಷ, ಶಾಸಕ ಶಿವರಾಮ ಹೆಬ್ಬಾರ್ ನಗರದ ಬ್ಯಾಂಕ್ ಆವರಣದ ಸಭಾಭವನದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿದರು.
ರೈತರ, ಗ್ರಾಹಕರ ಎಲ್ಲರ ಶ್ರಮದಿಂದಾಗಿ ನೂರಾ ಮೂರು ವರ್ಷ ಕಳೆದ ಈ ಬ್ಯಾಂಕ್ ಉತ್ತಮವಾಗಿ ಲಾಭದಾಯಕವಾಗಿ ನಡೆ ಯುತ್ತಿದೆ.
ಬ್ಯಾಂಕಿನ ಅಭಿವೃದ್ಧಿಗೆ ಹತ್ತು ಕೋಟಿ ರೂಪಾಯಿ ಡಿಫೋಸಿಟ್ ಅವಶ್ಯ. ಆರು ಕೋಟಿ ಸಾಲ ಸಾಧ್ಯ ಆದಾಗ ಮಾತ್ರ ಆ ಬ್ಯಾಂಕ್ ಬೆಳೆಯಲು ಸಾಧ್ಯ. ನಾವು ಜಿಲ್ಲೆಯ, ದಾಸನ ಕೊಪ್ಪ, ವಾಜಗದ್ದೆ, ಹೆಗಡೆ ಮೂರೂರು ಕತಗಾಲ್ ಪಾಳಾ , ಇಂದೂರ್ ಉಪ್ಪೋಣಿ ಬಳಕೂರ, ಹಳದಿಪುರ ಚಂದಾವರ ಗುಂಡೊಳ್ಳಿ ಹಿಲ್ಲೂರು, ಆವರ್ಸಾ ಬಡಿಗೇರಿ ನಂದನ ಗದ್ದಾ ದೇವಳಮಕ್ಕಿ ಕಾಡುವಳ್ಳಿ ಸರ್ಪನ ಕಟ್ಟೆಯಲ್ಲಿ ಶಾಖೆಯನ್ನು ಹಂತ ಹಂತವಾಗಿ ಅಸದ್ಯತೆಯ ನೇರೆಗೆ ಒಂದು ವರ್ಷದೊಳಗೆ ಆರಂಭಿಸಲಿದ್ದೇವೆ.
ವಿಶೇಷವಾಗಿ ಲಾಭದಾಯಕವಾದ ಶಾಕೆಯನ್ನು ತೆರೆಯಲಿದ್ದೇವೆ. ನಮ್ಮ ಬ್ಯಾಂಕಿಗೆ ಇದು ಸುವರ್ಣ ಯುಗವಾಗಿದೆ ಎಂದರು.
ನೇಮಕಾತಿಯನ್ನೂ ಸಹ ನಾವು ಪಾರದರ್ಶಕವಾಗಿ ಕಾರ್ಯ ನಿರ್ವಹಿಸಲಿದ್ದು, ನೇಮಕಾತಿಯಲ್ಲಿ ವಿಳಂಬವೂ ಅಥವಾ ಯಾವಲೋಪಗಳೂ ನಡೆಯದಂತೆ ಜಾಗ್ರತೆ ವಹಿಸುತ್ತೇವೆ ಎಂದರು.
ಈ ಸಂದರಗಭದಲ್ಲಿ ನಿರ್ದೇಶಕರಾದ ಸುರೇಶ್ಚಂದ್ರ ಹೆಗಡೆ, ಎಲ್ ಟಿ ಪಾಟೀಲ್ ಮುಂತಾದವರಿದ್ದರು.