Saturday, 5th October 2024

ಕನ್ನಡ ಕಂಪು ಪಸರಿಸಿದ ಎಸ್‌ಜೆಸಿಐಟಿ ಕಾಲೇಜು ಆವರಣ

ಚಿಕ್ಕಬಳ್ಳಾಪುರ: ನಗರದ ಹೊರವಲಯ ಬಿಜಿಎಸ್ ಇನ್ಸಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಕಾಲೇಜಿನಲ್ಲಿ  ಕನ್ನಡ ಸಂಘವು ‘ನಿತ್ಯೋತ್ಸವ’ದ ಸಹ ಯೋಗದಲ್ಲಿ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಆಚರಿಸಿತು.

ಕಾರ್ಯಕ್ರಮ ಅಂಗವಾಗಿ ಆಧುನಿಕತೆ ಭರಾಟೆಗೆ ಸಿಕ್ಕಿ ಗ್ರಾಮೀಣ ಪ್ರದೇಶ ದಲ್ಲಿಯೂ ಕೂಡ ಕಣ್ಮರೆ ಆಗಿರುವ ಚೌಕಾಬಾರ, ಲಗೋರಿ, ಅಳಿಗುಳಿಮನೆ, ಕುಂಟೆಬಿಲ್ಲೆ, ಮಡಿಕೆ ಒಡೆಯುವುದನ್ನು ಆಯೋಜಿಸಿತ್ತು.ಜತೆಗೆ ಗೀತಗಾಯನ, ಪ್ರಬಂಧ ರಚನೆ, ಚಿತ್ರಕಲೆ, ಮೆಹಂದಿ, ಬೆಂಕಿರಹಿತ ಅಡುಗೆ, ಉಗುರುಕಲೆ, ಚಿತ್ರನೋಡಿ ಕಥೆಬರೆಯುವುದು, ರಂಗೋಲಿ, ವಧುವಿನ ಅಂಕಾರ, ತರಕಾರಿ ಹಾಗೂ ಹಣ್ಣುಗಳಲ್ಲಿ ವಿನ್ಯಾಸ ಮತ್ತಿತರ ಸ್ಪರ್ಧೆ ಗಳನ್ನು ನಡೆಸಲಾಯಿತು. ವಿಜೇತ ವಿದ್ಯಾರ್ಥಿಗಳಿಗೆ ವೇದಿಕೆ ಕಾರ್ಯಕ್ರಮದಲ್ಲಿ ಬಹುಮಾನ  ವಿತರಿಸಲಾಯಿತು. ವಿದ್ಯಾರ್ಥಿಗಳು ರಾಜ ಪರಂಪರೆ ಸಾರುವ ವೇಷ ಭೂಷಣಗಳನ್ನು ತೊಟ್ಟು ವೈಭವದಿಂದ ನೃತ್ಯಗಳನ್ನು ಪ್ರದರ್ಶಿಸಿದರು.

ಆದಿಚುಂಚನಗಿರಿ ಶಾಖಾ ಮಠದ ಮಂಗಳಾನAದನಾಥ ಸ್ವಾಮೀಜಿ ರಾಜ್ಯೋತ್ಸವದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿ ದರು. ರಾಜ್ಯ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮುಖವೀಣೆ ಆಂಜಿನಪ್ಪ ಅವರು ನೀಡಿದ ಮುಖವೀಣೆ ಕಾರ್ಯಕ್ರಮವು ರಾಜ್ಯೋತ್ಸವಕ್ಕೆ ಮೆರುಗು ತಂದಿತು.ಇನ್ನು ಜಾನಪದ ಕಲಾತಂಡಗಳಾದ ಪೂಜಾ ಕುಣಿತ, ಪಟ ಕುಣಿತ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ಬಿಜಿಎಸ್ ಸಂಸ್ಥೆ ಮುಖ್ಯ ಆಡಳಿತಾಧಿಕಾರಿ ಎನ್. ಶಿವರಾಮರೆಡ್ಡಿ ಮಾತನಾಡಿ, ವಿದ್ಯಾರ್ಥಿಗಳು ಕಲೆ, ಸಂಸ್ಕೃತಿ ಸಂಪ್ರದಾಯ ಗಳನ್ನು ಅನುಸರಿಸುವ ಮೂಲಕ ಸರ್ವಾಂಗೀಣ ಅಭಿವೃದ್ಧಿ ಹೊಂದಬೇಕು. ಶಿಸ್ತುಪಾಲನೆಯನ್ನು ವಿದ್ಯಾರ್ಥಿ ಗಳು ಅಳವಡಿಸಿ ಕೊಳ್ಳಬೇಕು ಎಂದು ಸಲಹೆ ನೀಡಿದರು.

ಪ್ರಾಂಶುಪಾಲ ಆರ್.ವೆಂಕಟೇಶ್ ಬಾಬು, ವಿದ್ಯಾರ್ಥಿಗಳಿಗೆ ಕಲಿಕೆಯ ಜೊತೆಗೆ ಕ್ರೀಡಾಸ್ಫೂರ್ತಿ ಹಾಗೂ ಕಲಾಸಕ್ತಿ ಅವಶ್ಯ ಎಂದು ಹೇಳಿದರು.

ಎಸ್‌ಜೆಸಿಐಟಿ ಕಾಲೇಜಿನ ಪ್ರಾಂಶುಪಾಲ ಜಿ.ಟಿ.ರಾಜು, ರಿಜಿಸ್ಟಾರ್ ಜೆ.ಸುರೇಶ್ ಇತರರು ಇದ್ದರು.