Saturday, 23rd November 2024

Congress Women unit: ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ ಮಹಿಳಾ ಘಟಕದ ರಾಜ್ಯಾಧ್ಯಕ್ಷರಾಗಿ ಎಸ್.ಕೆ. ರತ್ನಮ್ಮ ಅಧಿಕಾರ ಸ್ವೀಕಾರ

ಬೆಂಗಳೂರು: ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ ಮಹಿಳಾ ಘಟಕದ ನೂತನ ರಾಜ್ಯಾಧ್ಯಕ್ಷ(Women Unit New state president)ರಾಗಿ ಎಸ್.ಕೆ. ರತ್ನಮ್ಮ (S K Rathnamma) ಇಂದು ಅಧಿಕಾರ ಸ್ವೀಕರಿಸಿದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯಘಟಕದ ಅದ್ಯಕ್ಷರಾದ ಪ್ರದೀಪ್ ಕುಮಾರ್ ಹೂಡಿ ಅವರು ಪಕ್ಷದ ಬಾವುಟ ನೀಡಿ ಜವಾಬ್ದಾರಿ ವಹಿಸಿದರು.

ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ ರಾಜ್ಯ ಕಾರ್ಯದರ್ಶಿ ಪ್ರಭಾ ಶೆಟ್ಟಿ, ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ನಾಗರಾಜ್ ರೆಡ್ಡಿ, ಎಸ್.ಸಿ.ಎಸ್.ಟಿ.ಘಟಕದ ರಾಜ್ಯಾಧ್ಯಕ್ಷರಾಗಿ ರಾಜಶೇಖರ ಮಾಚರ್ಲಾ, ಮಹಿಳಾ ಘಟಕದ ಸಂಚಾಲಕರಾಗಿ ಸುಜಾತ ಭೂದಿಹಾಳ, ಮಹಿಳಾ ಘಟಕದ ರಾಜ್ಯ ಕಾರ್ಯದರ್ಶಿಯಾಗಿ ವಿಜಯಲಕ್ಷ್ಮಿ, ಚಿತ್ರದುರ್ಗ ಜಿಲ್ಲಾಧ್ಯಕ್ಷರಾಗಿ ಯತೀಶ, ಮಂಡ್ಯ ಜಿಲ್ಲಾಧ್ಯಕ್ಷರಾಗಿ ಚಂದನ ಗೌಡ,ವಿಜಯನಗರ ಮಹಿಳಾ ಘಟಕದ ಜಿಲ್ಲಾಧ್ಯಕ್ಷ ರಾಗಿ ಮೀನಾಕ್ಷಿ, ರಾಮನಗರ ಜಿಲ್ಲಾಧ್ಯಕ್ಷರಾಗಿ ಶಶಿಕಲಾ, ಎನ್.ಸಿ.ಪಿ ಪ್ರಧಾನ ಕಾರ್ಯದರ್ಶಿ ಗಜೇಂದ್ರ ರೆಡ್ಡಿ, ಪ್ರಚಾರ ಸಮಿತಿ ರಾಜ್ಯಾಧ್ಯಕ್ಷ ಈರಣ್ಣ ಎಸ್ ಹಿಳಿ ಸಾಹುಕಾರ್ ಸಾವ್ಕಾರ್ ಮತ್ತಿತರರು ಉಪಸ್ಥಿತರಿದ್ದರು. ಅವರನ್ನು ನೇಮಿಸಲಾಗಿದೆ ಎಂದರು.

ಮುಂಬರುವ ಜಿಲ್ಲಾ, ತಾಲ್ಲೂಕು ಪಂಚಾಯತ್ ಚುನಾವಣೆಗೆ ಪಕ್ಷವನ್ನು ಪರಿಣಾಮಕಾರಿಯಾಗಿ ಸಂಘಟಿಸಲು ಒತ್ತು ನೀಡಲಾಗಿದೆ. ಎಲ್ಲಾ 31 ಜಿಲ್ಲೆಗಳಲ್ಲೂ ಪಕ್ಷದ ಕಚೇರಿ ತೆರೆದು ಸಂಘಟನೆಯನ್ನು ವಿಸ್ತರಿಸುವುದಾಗಿ ಪ್ರದೀಪ್ ಕುಮಾರ್ ಹೂಡಿ ಹೇಳಿದರು.

ಇದನ್ನೂ ಓದಿ: Congress guarantees: 5 ಗ್ಯಾರಂಟಿಗಳು ರಾಜ್ಯ ಸ್ಮಶಾನ ಆಗದಂತೆ ತಡೆದಿವೆ: ಪುರುಷೋತ್ತಮ ಬಿಳಿಮಲೆ