Tuesday, 10th September 2024

ಗುಡಿ ಕೈಗಾರಿಕೆಗಳಿಂದ ದುಡಿಯುವ ಕೈಗಳಿಗೆ ಕೆಲಸ 

ತುಮಕೂರು: ಕೈಗಾರಿಕೆಗಳೆಂದರೆ ಕೇವಲ ಅದಾನಿ, ಅಂಬಾನಿ, ಟಾಟಾ, ಬಿರ್ಲಾ ಅವರುಗಳಲ್ಲ.ನೇಮು,ಫೇಮು ಎರಡು ಇಲ್ಲದೆ ಖಾಸಗಿಯಾಗಿ ಶೇ.90 ರಷ್ಟು ದುಡಿಯುವ ಕೈಗಳಿಗೆ ಕೆಲಸ ನೀಡಿರುವ ದೇಶದ ಗುಡಿ ಕೈಗಾರಿಕೆಗಳು ಎಂದು ನಿವೃತ್ತ ಉಪನ್ಯಾಸಕ ಪ್ರೊ.ಬಿ.ಎಂ.ಕೃಷ್ಣಮೂರ್ತಿ ತಿಳಿಸಿದ್ದಾರೆ.
ಸ್ವದೇಶಿ ಜಾಗರಣ ಮಂಚ ನಗರದ ಗಾಜಿನಮನೆಯಲ್ಲಿ ಆಯೋಜಿಸಿರುವ ಸ್ವದೇಶಿ ಮೇಳದ ಉದ್ಘಾಟನಾ ಸಮಾರಂಭದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಅವರು,ಬ್ರಿಟಿಷರು ನಮಗೆ ರಾಜಕೀಯ ಸ್ವಾತಂತ್ರ ಕೊಟ್ಟರೆ ಹೊರತು ಅರ್ಥಿಕ ಸ್ವಾತಂತ್ರವನ್ನಲ್ಲ. ಭಾರತೀಯರಿಗೆ ಅರ್ಥಿಕ ಸ್ವಾತಂತ್ರ ಸಿಗಬೇಕೆಂದರೆ ನಮ್ಮ ಅರ್ಥಿಕತೆಗೆ ಶೇ45ರಷ್ಟು ಜಿಡಿಪಿ ನೀಡುತ್ತಿರುವ ಸಣ್ಣ ಸಣ್ಣ ಉದ್ಯಮಗಳು ಸ್ವಾವಲಂಬಿಯಾದಾಗ ಮಾತ್ರ ಸಾಧ್ಯ ಎಂದರು.
ಭಾರತದೇಶ 1991ರಲ್ಲಿ ಗ್ಯಾಟ್ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಉದಾರೀಕರಣ, ಖಾಸಗೀಕರಣ, ಜಾಗತೀಕರಣಕ್ಕೆ ತನ್ನನ್ನು ತೆರೆದುಕೊಂಡು,ಇಡೀ ಅರ್ಥಿಕತೆಯನ್ನು ಐಎಂಎಫ್,ವಿಶ್ವ ಬ್ಯಾಂಕ್‌ಗಳಿಗೆ ಅಡ ಇಟ್ಟತ್ತು.ಆದರೆ ಇದರ ವಿರುದ್ದ ದ್ವನಿ ಎತ್ತಿದ ಸ್ವದೇಶ ಜಾಗರಣ್ ಮಂಚ್‌ನ ನಿರಂತರ ಪ್ರಯತ್ನದ ಫಲವಾಗಿ ಇಂದು ದೇಶದಲ್ಲಿ 6.32 ಕೋಟಿ ಎಂ.ಎಸ್.ಎಂ. ಇಗಳು ಕೆಲಸ ಮಾಡುತ್ತಿದ್ದು,ದೇಶದ ಜಿಡಿಪಿಗೆ ಶೇ45ರಷ್ಟು ಪಾಲು ನೀಡುತ್ತಿವೆ. ಅಲ್ಲದೆ ಶೇ90ರಷ್ಟು ಉದ್ಯೋಗವನ್ನು ಖಾಸಗಿ ವಲಯದಲ್ಲಿ ನೀಡುತ್ತಿವೆ.ಈ ನೇಮು,ಫೇಮು ಇಲ್ಲದ ಕೈಗಾರಿಕೆಗಳು ಬೆಳೆಯಬೇಕೆಂದರೆ ಭಾರತೀಯರು ಹೆಚ್ಚಿನದಾಗಿ ಸ್ವದೇಶಿ ಉತ್ಪನ್ನಗಳನ್ನು ಖರೀದಿಸುವ ಮೂಲಕ ಅವರು ಉತ್ಪಾದಕತೆ ಹೆಚ್ಚುವಂತೆ,ಸ್ಥಳೀಯದಿಂದ ಜಾಗತೀಕದವರಗೆ ಬೆಳೆಯುವಂಎ ಮಾಡಬೇಕು.ಆ ಮೂಲಕ ದೇಶ ಸ್ವಾವಲಂಬಿಯಾಗಲು ಸಹರಿಸಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದ ದಿವ್ಯ ಸಾನಿದ್ಯ ವಹಿಸಿದ್ದ ಬೆಳ್ಳಾವಿಯ ಕಾರದೇಶ್ವರ ಮಠದ ಶ್ರೀಕಾರದ ವೀರಬಸವಸ್ವಾಮೀಜಿ ಮಾತನಾಡಿ, ಭಾರತ ಒಂದು ಪವಿತ್ರ ರಾಷ್ಟ್ರ.ಇಲ್ಲಿನ ಜನ ಮಣ್ಣು,ಕಲ್ಲು, ಮರ,ಗಿಡ,ಪ್ರಾಣಿ, ಪಕ್ಷಿಗಳಲ್ಲಿಯೂ ದೇವರನ್ನು ಕಾಣುತ್ತಾರೆ.ಒಂದು ಕಾಲದಲ್ಲಿ ಎಲ್ಲದಕ್ಕೂ ವಿದೇಶದ ಕಡೆಗೆ ನೋಡುವ ಕಾಲವಿತ್ತು. ಇಂದು ಎಲ್ಲರೂ ಭಾರತದ ಕಡೆಗೆ ನೋಡುವಂತಾಗಿದೆ. ಇದಕ್ಕೆ ಪ್ರಧಾನಿ ನರೇಂದ್ರಮೋದಿ ಅವರು ಕಾರಣ ಎಂದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಸ್ವದೇಶಿ ಮೇಳದ ಸಂಯೋಜಕರಾದ  ಮಮತ ಮಾತನಾಡಿ, ಸ್ವದೇಶಿ ಉತ್ಪಾದಕರಿಗೆ ಮಾರುಕಟ್ಟೆ ಹಾಗೆಯೇ ಗ್ರಾಹಕರಿಗೆ ಸ್ವದೇಶಿ ಉತ್ಪನ್ನಗಳ ಪರಿಚಯ ಮಾಡಿಕೊಡುವ ಉದ್ದೇಶದಿಂದ ಈ ಮೇಳವನ್ನು ಆಯೋಜಿಸಲಾಗಿದೆ.ಮೇಳದಲ್ಲಿ ಮಕ್ಕಳು ಮಹಿಳೆಯರಿಗೆ ಸ್ವದೇಶಿ ಉತ್ಪನ್ನಗಳ ಪರಿಚಯದ ಜತೆಗೆ, ವಿವಿಧ ತರಬೇತಿ, ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ನಮ್ಮ ಸಂಸ್ಕೃತಿ, ಪರಂಪರೆಯನ್ನು ಪರಿಚಯಿಸುವ ಕೆಲಸ ಮಾಡಲಾಗುತ್ತಿದೆ.  ಡೆಸೆಂಬರ್ 17ರವರೆಗೆ ನಡೆಯುವ ಈ ಮೇಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿ ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಸ್ವದೇಶಿ ಮೇಳದ ಆಯೋಜಕರಾದ ಧನುಷ್, ಸಂಘಟಕರಾದ ಪ್ರಸನ್ನಕುಮಾರ್  ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *